ನಾಳೆ ಬಳ್ಳಾರಿಗೆ ಪ್ರಸಿದ್ಧ ಮನೋ ವೈದ್ಯ ಡಾ. ಸಿ ಆರ್ ಚಂದ್ರಶೇಖರ್

ಬಳ್ಳಾರಿ, ಏ.28:ಪ್ರಸಿದ್ಧ ಮನೋ ವೈದ್ಯ, ಸಾಹಿತಿ ಡಾ. ಸಿ ಆರ್ ಚಂದ್ರಶೇಖರ್ ಅವರು ಏ. 29ರಂದು ಶನಿವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
ನಗರದ ವಿಮ್ಸ್ ವೈದ್ಯಕೀಯ ಕಾಲೇಜಿನ ಪದವಿ ಪ್ರದಾನ ಸಮಾರಂಭ ‘ಆರೋಹಣ -೨೦೨೨-೨೩’ದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಸಂಜೆ 4ಗಂಟೆಗೆ ಜರುಗುವ  ಸಮಾರಂಭದ ಅಧ್ಯಕ್ಷತೆಯನ್ನು ವಿಮ್ಸ್ ಪ್ರಾಚಾರ್ಯ ಡಾ. ಡಿ ಕೃಷ್ಣಸ್ವಾಮಿ ಅವರು ವಹಿಸುವರು.
ಪ್ರಧಾನ ಪೋಷಕರಾದ ವಿಮ್ಸ್ ನಿರ್ದೇಶಕ ಡಾ.ಟಿ ಗಂಗಾಧರ ಗೌಡ, ವಿಶೇಷ ಆಹ್ವಾನಿತರಾಗಿ ಎಂಸಿಎಚ್ ನ ವೈದ್ಯಕೀಯ ಅಧೀಕ್ಷಕ ಡಾ. ಕಾಸಾ ಸೋಮಶೇಖರ್, ವೆಲ್ಲಸ್ಲಿ ಟಿಬಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಸುರೇಶ್ ಸಿಎಂ, ಟ್ರಾಮಾ ಕೇರ್ ಸೆಂಟರ್ ನ ವೈದ್ಯಕೀಯ ಅಧೀಕ್ಷಕ ಡಾ. ಶಿವ ನಾಯ್ಕ ಆರ್ ಅವರು ಉಪಸ್ಥಿತರಿರುವರೆಂದು ಕಾರ್ಯಕ್ರಮ ಸಂಘಟಿಸುತ್ತಿರುವ ‘ಅಧೀರಥ’ ಪ್ರಧಾನ ಕಾರ್ಯದರ್ಶಿ ಗಳಾದ ಡಾ. ಪ್ರಜ್ವಲ ಡಿ ಗುಡಿ, ಡಾ. ಎಲ್ ಸಿಂಧೂರ ಮತ್ತು ಸಂಘಟನಾ ಕಾರ್ಯದರ್ಶಿ ಡಾ. ಡಿ. ರಾಜೇಶ್ ಅವರು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *