ಬಿಓಬಿ: ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಊಟ, ತಟ್ಟೆ, ಗ್ಲಾಸ್ ವಿತರಣೆ

ಹೊಸಪೇಟೆ, ಜು. 20: ಬ್ಯಾಂಕ್ ಆಫ್ ಬರೋಡಾದ (ಬಿಓಬಿ) 116ನೇ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ನಗರದ 11ನೇ ವಾರ್ಡ ಚಿತ್ತವಾಡ್ಗಿ, ವರಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಂಕಿನ ಅಧಿಕಾರಿಗಳು ಊಟದ ತಟ್ಟೆ,ಗ್ಲಾಸ್, ಸಿಹಿಯನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಭರೋಡಾ ವ್ಯವಸ್ಥಾಕರಾದ  ಉಮೇಶ್ ನಾಯ್ಕ, ಶಾಲೆಯ ಹಳೇ ವಿಧ್ಯಾರ್ಥಿನಿ ಮತ್ತು ಬ್ಯಾಂಕ್ ಆಫ್ ಭರೋಡಾ ಉಧ್ಯೋಗಿ ಶ್ರೀಮತಿ ಜಯಮ್ಮ, ಬ್ಯಾಂಕ್ ಸಿಬ್ಬಂದಿ ಶ್ರೀಕಾಂತ, ಸೀತರಾಮನ್, ಅಂಜನೇಯ್ಯ,  ಶಾಲೆಯ ಮುಖ್ಯ ಗುರು ವೀಂದ್ರನಾಥ ಕುಲಕರ್ಣಿ,  ಸಿ ಆರ್ ಪಿ ಅಶೋಕ್ ವಿನೋಭ ಭಾವೆ, ಶಿಕ್ಷಕರಾದ ಮಲ್ಲಯ್ಯ, ಪಾಂಡುರಂಗ, ಶ್ರೀಮತಿ ಫರೀದಾ ಬೇಗಂ, ಚಿನ್ನಾಪುರಪ್ಪ ಹಾಗೂ, ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ  ಪಾಂಡುರಂಗಯ್ಯ  ಇದ್ದರು.

Leave a Reply

Your email address will not be published. Required fields are marked *