ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ: ನೂತನ ಅಧ್ಯಕ್ಷರಾಗಿ  ಬಿ.ಮಹಾರುದ್ರಗೌಡ, ಗೌರವ ಕಾರ್ಯದರ್ಶಿಯಾಗಿ ಸಿ. ಸುರೇಶಬಾಬು ಅಧಿಕಾರ ಸ್ವೀಕಾರ

ಬಳ್ಳಾರಿ, ಸೆ. 29: ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ಬಿ. ಮಹಾರುದ್ರಗೌಡ ಮತ್ತು ಗೌರವ ಕಾರ್ಯದರ್ಶಿಗಳಾಗಿ ಕೆ.ಸಿ. ಸುರೇಶಬಾಬು ಅವರು ಸರ್ವಾನುಮತದಿಂದ ಅವಿರೋಧ ಆಯ್ಕೆಯಾಗಿದ್ದು, ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಸಂಸ್ಥೆಯ ಸಭಾಭವನದಲ್ಲಿ ಶುಕ್ರವಾರ ನಡೆದ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಸರ್ವಾನುಮತದಿಂದ ಅವಿರೋಧವಾಗಿ ನಡೆಯಿತು.  ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು ನೂತನ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದರು.
ಹಿರಿಯ ಉಪಾಧ್ಯಕ್ಷರಾಗಿ ಯಶವಂತರಾಜ್ ನಾಗಿರೆಡ್ಡಿ, ಉಪಾಧ್ಯಕ್ಷರಾಗಿ ಎ. ಮಂಜುನಾಥ್, ಎಸ್. ದೊಡ್ಡನಗೌಡ, ಜಂಟಿ ಕಾರ್ಯದರ್ಶಿಗಳಾಗಿ ಡಾ. ಮರ್ಚೇಡ್ ಮಲ್ಲಿಕಾರ್ಜುನ ಗೌಡ ಮತ್ತು ವಿ. ರಾಮಚಂದ್ರ, ಖಜಾಂಚಿಗಳಾಗಿ ಪಿ. ಪಾಲಣ್ಣ ಅವರು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದರು.
ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿ. ಶ್ರೀನಿವಾಸರಾವ್, ಬಿ. ಮಹಾರುದ್ರಗೌಡ, ಯಶವಂತರಾಜ್ ನಾಗಿರೆಡ್ಡಿ, ವಿ. ರವಿಕುಮಾರ್, ಎ. ಮಂಜುನಾಥ್, ಕೆ. ರಮೇಶ್ (ಬುಜ್ಜಿ), ಎಸ್. ದೊಡ್ಡನಗೌಡ, ಗಿರಿಧರ ಸೊಂತ, ಪಿ. ಪಾಲಣ್ಣ, ಕೆ.ಸಿ. ಸುರೇಶಬಾಬು, ವಿ. ರಾಮಚಂದ್ರ, ನಾಗಳ್ಳಿ ರಮೇಶ್, ಸಿ.ಎಸ್. ಸತ್ಯನಾರಾಯಣ, ಜೆ. ರಾಜೇಶ್, ನೇಕಾರ ನಾಗರಾಜ್, ಟಿ. ಶ್ರೀನಿವಾಸರಾವ್, ಎಸ್. ಜಿತೇಂದ್ರ ಪ್ರಸಾದ್, ವಿ. ವೆಂಕಟೇಶಲು, ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಪಿ. ಗಿರೀಶ್, ಯು. ಗೋವಿಂದರೆಡ್ಡಿ, ಬಿ. ಸತ್ಯಬಾಬು, ಸಿಎ ಕೆ. ರಾಜಶೇಖರ್, ಎಸ್.ಪಿ. ವೆಂಕಟೇಶ್, ಎಚ್. ರಾಜೇಶ್ ಕುಮಾರ್, ಪಿ. ವೇಣುಗೋಪಾಲ್ ಗುಪ್ತ, ಆರ್. ನಾಗರಾಜ್, ಜಿ. ರಾಘವೇಂದ್ರ ರೆಡ್ಡಿ ಮತ್ತು ವಿ.ಕೆ.ಎಲ್. ದೀಪಕ್ ಅವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *