ಟೇಬಲ್ ಟೆನ್ನಿಸ್ ಪಂದ್ಯಾವಳಿ: ಸರಳಾದೇವಿ ಕಾಲೇಜಿಗೆ ಎರಡನೇ ಸ್ಥಾನ

ಬಳ್ಳಾರಿ, ನ.10: ನಗರದ ಎಸ್ ಎಸ್ ಎ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ವಿದ್ಯಾರ್ಥಿಗಳು  ಅಂತರ ಮಹಾವಿದ್ಯಾಲಯಗಳ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.


2023-24ನೇ ಸಾಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಕಾಲೇಜಿನ‌ ವಿದ್ಯಾರ್ಥಿಗಳು ಮೊದಲಬಾರಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ.‌ಮಂಜುನಾಥ ರೆಡ್ಡಿ ಎಚ್.ಕೆ ಹಾಗೂ ದೈಹಿಕ‌ ಶಿಕ್ಷಣ ನಿರ್ದೇಶಕ ಪಂಪನಗೌಡ ಮತ್ತು ಕಾಲೇಜಿನ ಹಿರಿಯ ಪ್ರಾಧ್ಯಾಪಕರು, ಉಪನ್ಯಾಸಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಡಿ. ಶಂಕರ ಅವರು ತಂಡವನ್ನು ಮುನ್ನೆಡೆಸುವಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದ್ದರು. ತಂಡದ ನಿರ್ವಾಹಕರಾಗಿ ಹನುಮಂತ ಎ. ಕ್ರೀಡಾಪಟುಗಳಾದ ಸಿದ್ದೇಶ ಕೆ, ಶಿವಕುಮಾರ್, ಷಣ್ಮುಖ, ಮತ್ತು ಶಿವರುದ್ರ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
—–

Leave a Reply

Your email address will not be published. Required fields are marked *