ಅನುದಿನ ಕವನ-೧೧೮೭, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಬಹು ದಿನಗಳ
ನಂತರ
ರಾತ್ರಿಯು
ಎಚ್ಚರಗೊಂಡಿತು

ನೆನಪಿನ
ಎಳೆಯೊಂದು
ಮತ್ತೇ
ಜೀಕಿ ಉಯ್ಯಾಲೆಗೆ ವಶ

ನಿದ್ದೆ ಕಳೆದುಹೋದ
ಕಂಗಳಲ್ಲಿ ಅದೆಂಥದೋ
ನೆಮ್ಮದಿ
ರೆಪ್ಪೆಗಳಿಗೆ ಸಮಾಧಾನ

ಆಗಸವನ್ನೇ
ಮರೆತವನೀಗೆ
ತಾರೆಗಳಲ್ಲಿ ನನ್ನದೊಂದು
ಬೆಳಕು

ಪದಗಳು ಮತ್ತೇ
ಉಸಿರಾಡಿ
ಕವಿತೆ ತಾನೇ
ಬರೆದುಕೊಂಡಿತು
ಮತ್ತೊಂದು ಮೈಲಿಗಲ್ಲನ್ನು


-ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
—–

Leave a Reply

Your email address will not be published. Required fields are marked *