ಅನುದಿನ ಕವನ-೧೩೧೬, ಕವಿ: ಮಹೇಶ ಬಳ್ಳಾರಿ, ಕೊಪ್ಪಳ, ಕವನದ ಶೀರ್ಷಿಕೆ:ಪದಕ ಸ್ವಗತ…

ಪದಕ ಸ್ವಗತ:

ಕೊರಗುತ್ತಿದೆ
ಅಳುತ್ತಿದೆ ಪದಕ
ಆಕೆಯ ಕೊರಳ
ಕಳಸವಾಗಲಿಲ್ಲವೆಂದು

ಬಿಕ್ಕುತಿದೆ ಓಲಂಪಿಕ್
ಆಕೆಯ ಕೊರಳಲ್ಲಿ
ಜೀಕುವ ಜೋಕಾಲಿಯಾಗಿ
ಪದಕ ಸಂಭ್ರಿಮಿಸಲಿಲ್ಲವೆಂದು

ಆಕೆ ಸೋಲಿಸಿದ್ದು
ಘಟಾನುಘಟಿಗಳನ್ನು
ಕುಸ್ತಿಯಲ್ಲಿ ಮಾತ್ರವೇ ಅಲ್ಲ
ಜೀವನದ ಹೋರಾಟದಲ್ಲಿಯೂ ..

ದೂರಿದರು, ದೂಡಿದರು
ಸಾಧ್ಯವಾದಷ್ಟೂ
ಚಿವುಟಿದರು
ಎಳೆದಾಡಿದರು ಬೀದಿಗುಂಟ ..

ನೆಲಕ್ಕೆ ಬಿದ್ದ ಅವಳ ಕಣ್ಣೀರಿಗೆ
ನಡುಗಿತು ಭೂಮಿ
ಒಂದು ಹನಿ ನೀರಿಗೆ
ಅಷ್ಟು ಭಾರ !

-ಮಹೇಶ ಬಳ್ಳಾರಿ, ಕೊಪ್ಪಳ
—–

Leave a Reply

Your email address will not be published. Required fields are marked *