Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ನಿವೃತ್ತ ಅಧ್ಯಾಪಕ ಕೆ. ಬಿ ಸಿದ್ದಲಿಂಗಪ್ಪರಿಗೆ ಪ್ರಶಸ್ತಿ ಪ್ರದಾನ - Karnataka Kahale

ಹಿರಿಯ ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ನಿವೃತ್ತ ಅಧ್ಯಾಪಕ ಕೆ. ಬಿ ಸಿದ್ದಲಿಂಗಪ್ಪರಿಗೆ ಪ್ರಶಸ್ತಿ ಪ್ರದಾನ

ಬಳ್ಳಾರಿ, ಸೆ.18: ನಗರದ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ನಗರದ ಹಿರಿಯ ವಿಚಾರವಾದಿ, ಸಾಹಿತಿ ಡಾ. ವೆಂಕಟಯ್ಯ ಅಪ್ಪಗೆರೆ, ನಿವೃತ್ತ ಅಧ್ಯಾಪಕ ಕೆ. ಬಿ ಸಿದ್ದಲಿಂಗಪ್ಪ ಅವರಿಗೆ ಬುಧವಾರ ಸಂಜೆ ಪ್ರಶಸ್ತಿ ನೀಡಿ‌ ಗೌರವಿಸಿತು.
ಅಸೋಸಿಯೇಷನ್ ಅಧ್ಯಕ್ಷ ಶೀಲ‌ ಬ್ರಹ್ಮಯ್ಯ ಮತ್ತು ಕಾರ್ಯದರ್ಶಿ ಜಿ ಕೆ ರಾಮಕೃಷ್ಣ ಅವರು ಡಾ. ಅಪ್ಪಗೆರೆ ಮನೆಯಲ್ಲಿ ಆಯೋಜಿಸಿದ್ದ ಸರಳ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ‌ಮಾಡಿದರು
ಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ. ವೆಂಕಟಯ್ಯ ಅಪ್ಪಗೆರೆ ಅವರಿಗೆ ನಾಟಕ ಪಿತಾಮಹ ಶ್ರೀ ಧರ್ಮವರಂ ಕೃಷ್ಣಾಮಾಚಾರ್ಯ ಪ್ರಶಸ್ತಿ ಹಾಗೂ‌ ಶರಣ ಸಾಹಿತ್ಯ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕೆ ಬಿ ಸಿದ್ಧಲಿಂಗಪ್ಪ ಅವರಿಗೆ ಸಾಹಿತಿ ಕೋಲಾಚಲಂ‌ ಶ್ರೀನಿವಾಸರಾವ್ ಪ್ರಶಸ್ತಿ ‌ನೀಡಿ ಸನ್ಮಾನಿಸಲಾಯಿತು.


ಈಚೆಗೆ ಜರುಗಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಭಯರು ಉಪಸ್ಥಿತರಿರಲಿಲ್ಲ ಹೀಗಾಗಿ‌ ಇಂದು ಪ್ರಶಸ್ತಿ ‌ನೀಡಿ‌ ಗೌರವಿಸಲಾಯಿತು ಎಂದು ಶೀಲ ಬ್ರಹ್ಮಯ್ಯ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಗುಲ್ಬರ್ಗಾ ವಿವಿ‌ ಮಾಜಿ‌ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ಹಿರಿಯ ಸಾಹಿತಿ ಟಿ.ಕೆ ಗಂಗಾಧರ ಪತ್ತಾರ್, ಡಾ. ಅಪ್ಪಗೆರೆ ಅವರ ಪತ್ನಿ ಸರಸ್ವತಿ ಎನ್ ಅಪ್ಪಗೆರೆ, ಪುತ್ರ ಡಾ. ವಿಜಯ್‌ ಅಪ್ಪಗೆರೆ, ಸೊಸೆ ಡಾ.‌ಸಂಧ್ಯಾ ವಿಜಯ್ ಮತ್ತಿತರರು ಉಪಸ್ಥಿತರಿದ್ದರು.
—–