ವಯೋ ನಿವೃತ್ತಿ: ಮುಖ್ಯ ಗುರು ಸಂಡೂರಪ್ಪರಿಗೆ ಸನ್ಮಾನ

ಬಳ್ಳಾರಿ: ನಗರದ ವಟ್ಟಪ್ಪ ಕೇರಿಯ ಕೆಂಚಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಯೋ ನಿವೃತ್ತಿ ಹೊಂದಿದ ಮುಖ್ಯ ಗುರುಗಳಾದ ಸಂಡೂರಪ್ಪರವರಿಗೆ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿದವು.                          ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಾದಾ ಸಾಹೇಬ್ ಡಾ.ಎನ್ ಮೂರ್ತಿ ಸ್ಥಾಪಿತ) ಜಿಲ್ಲಾಧ್ಯಕ್ಷ ಶ್ರೀನಿವಾಸ್ ಭಂಡಾರಿ ಅವರು,  ಮುಖ್ಯ ಶಿಕ್ಷಕರಾದ ಸಂಡೂರಪ್ಪನವರು ಕಳೆದ 38 ವರ್ಷಗಳಿಂದಲು ಉತ್ತಮ ಸೇವೆಯನ್ನು ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನವನ್ನು ನೀಡುವ ಮೂಲಕ ಸಮಾಜದಲ್ಲಿ ಆದರ್ಶವಂತರಾಗಿ ಬಾಳುವುದಕ್ಕೆ ಕಾರಣರಾಗಿದ್ದಾರೆ.  ಮಕ್ಕಳಲ್ಲಿ ಸಂಸ್ಕಾರವನ್ನು ಉತ್ತಮ ನಡವಳಿಕೆಯನ್ನು ಬೆಳೆಸುವಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.            ಕಾರ್ಯಕ್ರಮದಲ್ಲಿ ದಲಿತ ಮುಖಂಡರುಗಳಾದ ಮಾರ್ಕಂಡಯ್ಯ , ವೆಂಕಟೇಶ್ , ನಾಗೇಶ್, ಪ್ರಕಾಶ್ , ರಾಮದಾಸ್ , ಶಿವು , ದಿನೇಶ್ , ಶಾಲಾ ಸಿಬ್ಬಂದಿ ವರ್ಗದವರು ಹಾಗೂ ಶಾಲಾ ಮಕ್ಕಳು ಭಾಗವಹಿಸಿದರು.

—–

Leave a Reply

Your email address will not be published. Required fields are marked *