ಅನುದಿನ ಕವನ-೧೬೧೪, ಕವಿ: ಸಿದ್ದು ಜನ್ನೂರು, ಚಾಮರಾಜ ನಗರ

ಬದುಕಿನುದ್ದಕ್ಕೂ ಬರಿ
ಜಂಜಾಟಗಳೇ
ನಿನ್ನ ಪ್ರೇಮವೂ ಹಾಗೆ
ಬಾರಿ ಜಂಜಾಟಕ್ಕೆ ಸಿಕ್ಕ ವ್ರತ…

ಓದುವಾಗಲೂ ನಾನು
ಜ್ಞಾಪಿಸಿಕೊಳ್ಳುವುದು
ಮತ್ತೆ ನಿದಿರೆ ಬರುವಾಗಲೂ ನಾನು
ಧ್ಯಾನಿಸುವುದು ನಿನ್ನನ್ನೇ ಎಂಬುದನ್ನು
ಮತ್ತೆ ಮತ್ತೆ ಸಾಬೀತು ಪಡಿಸಲು ಒದ್ದಾಡುತ್ತೇನೆ…

ಅಂತದ್ದೇನು ಗೊಂದಲವಿಲ್ಲ ನನಗೆ
ನನ್ನ ಎಲ್ಲ ಪ್ರಶ್ನೆಗಳಿಗೂ
ಉತ್ತರ ಕಂಡುಕೊಂಡಿದ್ದೇನೆ
ಈ ಹಿನ್ನೆಲೆಯಲ್ಲಿ ನೀನು ಎದುರಿಗೆ ಸಿಕ್ಕಾಗಲು
ನಾನು ಸ್ವಲ್ಪ ನಾಚಿ ಮೌನಕ್ಕೆ ಜಾರಿದ ಬಗ್ಗೆ
ನೀನು ಮರುಕ ಪಡಬೇಡ
ಅದು ನಿನ್ನದೆ ಪ್ರೇಮದ ಬಲೆಗೆ ಸಿಕ್ಕ
ನನ್ನ ಕೊನೆಯ ಸಂದೇಶವೆಂಬುದ ನೀನು
ಅರ್ಥೈಸಿಕೊಳ್ಳದೆ ಹೋದರೆ
ನಿನಗೆ ಬಾರಿ ನಷ್ಟವುಂಟು…

-ಸಿದ್ದು ಜನ್ನೂರ್, ಚಾಮರಾಜನಗರ

Leave a Reply

Your email address will not be published. Required fields are marked *