Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಬಳ್ಳಾರಿ: ರಂಗ ಸಂಘಟಕರಿಂದ ಕಲಾವಿದ ಪುರುಷೋತ್ತಮ ಹಂದ್ಯಾಳ್ ಹುಟ್ಟುಹಬ್ಬ ಆಚರಣೆ - Karnataka Kahale

ಬಳ್ಳಾರಿ: ರಂಗ ಸಂಘಟಕರಿಂದ ಕಲಾವಿದ ಪುರುಷೋತ್ತಮ ಹಂದ್ಯಾಳ್ ಹುಟ್ಟುಹಬ್ಬ ಆಚರಣೆ

ಬಳ್ಳಾರಿ, ಜೂ.18: ಹಿರಿಯ ರಂಗ ಕಲಾವಿದ, ಪತ್ರಿಕಾ ಛಾಯಾಗ್ರಹಕ ಪುರುಷೋತ್ತಮ‌ ಹಂದ್ಯಾಳ್ ಅವರ ಹುಟ್ಟುಹಬ್ಬವನ್ನು ಮಂಗಳವಾರ ಸಂಜೆ ಸರಳವಾಗಿ ನಗರದಲ್ಲಿ ಆಚರಿಸಲಾಯಿತು.
ನಾಡೋಜ ಬುರ್ರಕಥಾ ದರೋಜಿ ಈರಮ್ಮ ಫೌಂಡೇಷನ್ ಮತ್ತು ಡಾ.‌ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಪುರುಷೋತ್ತಮ ಹಂದ್ಯಾಳ್ ಅವರ ಹುಟ್ಟುಹಬ್ಬದ ಅಂಗವಾಗಿ ಕೇಕ್ ಕತ್ತರಿಸಿ ಬಳಿಕ ಹಂದ್ಯಾಳ್ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.


ವೇದಿಕೆ ಅಧ್ಯಕ್ಷ , ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು ಮಾತನಾಡಿ ಪುರುಷೋತ್ತಮ ಅವರ ಮೂರುವರೆ ದಶಕಗಳ ರಂಗ ಸೇವೆ ಮತ್ತು ಎರಡು ದಶಕಗಳ‌ ಪತ್ರಿಕೋದ್ಯಮ ಸೇವೆಯನ್ನು ಶ್ಲಾಘಿಸಿದರು.
ಸಂಘ ಸಂಸ್ಥೆಗಳು ಹಲವು ಪ್ರಶಸ್ತಿ ನೀಡಿ ಉತ್ತೇಜಿಸಿವೆ ಆದರೆ ಸರಕಾರದ ಅಕಾಡೆಮಿಗಳು ಇವರ ರಂಗ ಸೇವೆಯನ್ನು ನಿರ್ಲಕ್ಷಿಸಿವೆ ಎಂದು‌ ಬೇಸರ ವ್ಯಕ್ತಪಡಿಸಿದರು.


ಫೌಂಡೇಶನ್ ಅಧ್ಯಕ್ಷ, ಸತ್ಯಂ‌ ಬಿಇಡಿ ಕಾಲೇಜಿನ ಪ್ರಾಚಾರ್ಯ ಡಾ. ಅಶ್ವರಾಮು ಅವರು ಮಾತನಾಡಿ ರಂಗ ಸಂಘಟಕರೂ ಆಗಿರುವ ಪುರುಷೋತ್ತಮ ಹಂದ್ಯಾಳ್ ಅವರು ಉದಯೋನ್ಮುಖ ಹಾಗೂ ಹಿರಿಯ ರಂಗ ಕಲಾವಿದರಿಗೆ ವೇದಿಕೆ ಕಲ್ಪಿಸುವುದರ ಜತೆಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಸತ್ಕರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಮಾ ಪುರುಷೋತ್ತಮ ಹಂದ್ಯಾಳ್, ಅಧ್ಯಾಪಕಿ ಸಾಯಿ ಶೃತಿ  ಹಂದ್ಯಾಳ್ ಉಪಸ್ಥಿತರಿದ್ದರು.