ನಾಳೆ ಬಳ್ಳಾರಿ ನಗರದಲ್ಲಿ ಮೀಡಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ

ಬಳ್ಳಾರಿ, ಜೂ. 26: ನಗರದ ವೀವಿ ಸಂಘದ, ವೀರಶೈವ ಕಾಲೇಜ್ ಕ್ರೀಡಾಂಗಣದಲ್ಲಿ ಶುಕ್ರವಾರ ಬಳ್ಳಾರಿ ಜಿಲ್ಲಾ ಮಟ್ಟದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಯಿಂದ ಮೀಡಿಯಾ ಕಪ್-2025 ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದೆ.

ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಎನ್.ವೀರಭದ್ರಗೌಡ ಅಧ್ಯಕ್ಷತೆವಹಿಸಲಿದ್ದಾರೆ.
ಮೇಯರ್ ಮುಲ್ಲಂಗಿ ನಂದೀಶ್, ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಕಾಂಗ್ರೆಸ್ ವಕ್ತಾರ ವೆಂಕಟೇಶ್ ಹೆಗಡೆ, ಆರ್.ವೈ.ಎಂ.ಸಿ‌ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಜಾನೆಕುಂಟೆ ಬಸವರಾಜ್, ವೀರಶೈವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ದರೂರು ಶಾಂತನಗೌಡ, ವಾರ್ತಾ ಅಧಿಕಾರಿಗಳು ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.


ಸಂಘದ ಅಡಾಕ್ ಸಮಿತಿಯ ಸದಸ್ಯರಾದ ಕೆ.ಮಲ್ಲಯ್ಯ, ವೆಂಕೋಬಿ ಸಂಗನಕಲ್ಲು ಮತ್ತು ಸಂಘದ ಸರ್ವ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಪಂದ್ಯಾವಳಿಯಲ್ಲಿ ಬಳ್ಳಾರಿ ಟೈಗರ್ಸ್, ಬಳ್ಳಾರಿ ಲಯನ್ಸ್, ಕೆಕೆ ಬುಲ್ಸ್ ಮತ್ತು ಸಿರುಗುಪ್ಪ ತಂಡಗಳು ಭಾಗವಹಿಸಲಿವೆ. ಆರು ಲೀಗ್ ಪಂದ್ಯಗಳು ನಡೆಯಲಿದ್ದು. ನಂತರ ಪೈನಲ್ ಪಂದ್ಯ ನಡೆಯಲಿದೆ. .

Leave a Reply

Your email address will not be published. Required fields are marked *