ಅನುದಿನ ಕವನ-೧೭೭೯, ಕವಯತ್ರಿ: ಡಾ.ಮುಮ್ತಾಜ್ ಬೇಗಂ, ಗಂಗಾವತಿ, ಕವನದ ಶೀರ್ಷಿಕೆ: ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ

ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ

ಸಾಲು ಮರವೇ ಹಾಗೆ…!
ಗಿಡದ ನೆರಳನೇ
ಮಕ್ಕಳಾಗಿಸಿಕೊಂಡು
ಕಪ್ಪು,ಕೆಂಪು ನೆಲವೆನ್ನದೇ
ಹಿಂಗಿ ನುಂಗಿದ ನೀರಲಿ
ಬೇರುಗಳು ಗಟ್ಟಿಗೊಂಡು
ಕೊರಡು ಕಾಂಡಲ್ಲೂ
ಚಿಗುರೊಡೆದು,
ಬಳಿ ಬರುವವಗೆ
ಸೊಂಪಾದ ತಂಪ ನೆರಳ ನೀಡಿ
ಗಂಧ ಗಾಳಿಯಲಿ ಮರದವ್ವನ
ಹೆಸರಿನ ಪರಿಮಳ
ಪಸರಿಸಿದ ಹಾಗೆ..!!

🙏ಮರದಮ್ಮನಿಗೆ ಭಾವಪೂರ್ಣ ನಮನಗಳು🙏

– ಡಾ.ಮುಮ್ತಾಜ್ ಬೇಗಂ, ಗಂಗಾವತಿ
—–

Leave a Reply

Your email address will not be published. Required fields are marked *