ಅನುದಿನ ಕವನ-೧೮೭೧, ಕವಿ: ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಈ ಮಾಗಿಯ ಚಳಿಯಲ್ಲಿ…!

ಈ ಮಾಗಿಯ ಚಳಿಯಲ್ಲಿ…!

ನಾನು ನಿನ್ನ ನಗುವನ್ನಷ್ಟೆ ಕಾಯುವೆ
ಅಳುವ ಆಗೆ ದೂರಮಾಡಿ…

ತಣ್ಣನೆ ಗಾಳಿಯಾಗಿ
ನೇವರಿಸಿ ಸಂತೈಸುವ ಆಸೆ
ನಿನ್ನೆಲ್ಲಾ ನೋವಿಗೆ ಒಂದು ದನಿಯಾಗಿ…

ಹೂವಿಗೆ ಚೆಲುವು ಬಂದಂತೆ
ನಿನ್ನ ಮೊಗದ ತುಂಬಾ
ಬೇಸರವಿಲ್ಲದ ಗುರುತಾಗಿ ನಿಲ್ಲುವೆ…

ಈ ಮಾಗಿಯ ಚಳಿಯಲ್ಲಿ
ಬೆಚ್ಚಗಾಗುವ ನಿನ್ನ ಬಯಕೆಗೆ
ಬಿಗಿದಪ್ಪಿ ಎದೆಯುಸಿರನಿಕ್ಕಿ
ಮತ್ತೆ ಮತ್ತೆ ಮೋಹಿಸುವೆ…

ನೀನು ನನ್ನವಳೆಂಬ
ಒಳ ಜಂಬವೇ ನನಗೆ ಸಾಕು
ನಿನ್ನ ಪ್ರೇಮಿಸುತ್ತಲೇ ಇರುತ್ತೇನೆ ಸವಿ….


-ಸಿದ್ದು ಜನ್ನೂರ್, ಚಾಮರಾಜನಗರ