Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಅನುದಿನ ಕವನ-೧೮೯೧, ಕವಯತ್ರಿ: ಡಾ. ಕೆ.ಎನ್. ಲಾವಣ್ಯ ಪ್ರಭಾ, ಮೈಸೂರು - Karnataka Kahale

ಅನುದಿನ ಕವನ-೧೮೯೧, ಕವಯತ್ರಿ: ಡಾ. ಕೆ.ಎನ್. ಲಾವಣ್ಯ ಪ್ರಭಾ, ಮೈಸೂರು

ನನಗನಿಸುತ್ತಿದೆ ಈಗ ಇಲ್ಲಿರುವುದು
ಇದ್ದು ಯುದ್ಧ ಮಾಡುತ್ತಿರುವುದು
‘ಸ್ಪರ್ಧೆಗಳು’
ಕೇವಲ ಸ್ಪರ್ಧೆಗಳಿಗಾಗಿ‌ ಮಾತ್ರ

ನರನ ಶ್ವಾಸ , ನರಿಯ ಊಳು
ಕೊಡಲಿ ಪೆಟ್ಟಿಗೆ ತಪ್ಪಿಸಿಕೊಂಡು
ಅಷ್ಟಿಷ್ಟು ಚಿಗುರುವ ಮರ
ಮುಳ್ಳಿನ ನಡುವೆಯೂ
ಅರಳಲೆತ್ನಿಸುವ ಹೂವು
ಎಲ್ಲವೂ ಸ್ಪರ್ಧೆಗಾಗಿ

ಕಾಂಕ್ರೀಟು ಕೋಟೆಗಳು
ಅವುಗಳ ನಷ್ಟಕ್ಕೆ ಹೆಣ್ಣು , ಹೆಂಡ
ಅಂತೆಯೇ
ಚಿನ್ನದ ಮೆರುಗಿನ ಗನ್ನು ಬಾಂಬುಗಳು
ಇಷ್ಟಾಗಿಯೂ ಕರ್ಪೂರದಾರತಿ
ಗಂಧ ಧೂಪಗಳು , ಮಣ್ಣು ಧೂಳುಗಳು
ಎಲ್ಲವನ್ನೂ ಕೊಚ್ಚುವ ಕಾತರದಲ್ಲಿ
ತುಂಬು ನೆರೆ
ಎಲ್ಲವೂ ಸ್ಪರ್ಧೆಗಾಗಿ

ನನಗೀಗ ಖಚಿತವಾಗಿಯೂ ಅನಿಸುತ್ತಿದೆ
ಎಲ್ಲ ಎಲ್ಲವೂ ಸ್ಪರ್ಧೆಗಾಗಿಯೇ
ಜಗತ್ತು ಒಂಟಿಕಾಲಿನ ಬಕಪಕ್ಷಿಯಾಗಿ
ಕಾದಿರುವುದು ಕೂಡ ಸ್ಪರ್ಧೆಗಾಗಿ

ಹೇಳಿ ಸ್ನೇಹಿತರೇ…ಕಳುಹಿಸುವಿರೇನು
ನಿಮ್ಮ ಪ್ರೀತಿಯ ಕವಿತೆಯನ್ನು
ಕೇ…ವಲ ಸ್ಪರ್ಧೆಗಾಗಿ?


-ಡಾ. ಕೆ.ಎನ್. ಲಾವಣ್ಯ ಪ್ರಭಾ, ಮೈಸೂರು
(2004 ರಲ್ಲಿ ಪ್ರಕಟವಾಗಿದ್ದ “ಹುಟ್ಟಲಿರುವ ನಾಳೆಗಾಗಿ”
ಕವನ ಸಂಕಲನದಿಂದ ಈ ಕವಿತೆಯನ್ನು ಆರಿಸಿಕೊಳ್ಳಲಾಗಿದೆ)