Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
ಮನುಷ್ಯನ ಜೀವನಕ್ರಮವೇ ಸಂಸ್ಕೃತಿ: ಸಹಾಯಕ ಪ್ರಾಧ್ಯಾಪಕ ತಿಪ್ಪೇಶ್.ಬಿ - Karnataka Kahale

ಮನುಷ್ಯನ ಜೀವನಕ್ರಮವೇ ಸಂಸ್ಕೃತಿ: ಸಹಾಯಕ ಪ್ರಾಧ್ಯಾಪಕ ತಿಪ್ಪೇಶ್.ಬಿ

ಹರಿಹರ: ಸಾಹಿತ್ಯದ ಓದು ಎಂಬುದು ಗ್ರಹಿಕೆಯಾಗಿದ್ದು, ಇದು ಮನುಷ್ಯನ ನಿರ್ಧಾರ ಮತ್ತು ವ್ಯಕ್ತಿತ್ವವನ್ನು
ರೂಪಗೊಳಿಸುತ್ತವೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ
ತಿಪ್ಪೇಶ್.ಬಿ. ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಹಾಗೂ ಕನ್ನಡ ವಿಭಾಗದ ಸಹಯೋಗದಲ್ಲಿ  ಶುಕ್ರವಾರ
ಆಯೋಜಿಸಲಾಗಿದ್ದ ‘ಕನ್ನಡ ಸಾಹಿತ್ಯದ ಸಾಂಸ್ಕೃತಿಕ ಅಧ್ಯಯನ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ
ಅವರು ಮಾತನಾಡಿದರು.                              ವೇಗದ ಓದು ಗ್ರಹಿಕೆಗೆ ಮತ್ತು ಮೆದುಳಿನಲ್ಲಿ ವಿಷಯದ ಬಿಂಬ ಮೂಡಿಸಲು ಸಹಾಯಕ ಎಂಬುದು
ಮನೋವಿಜ್ಞಾನಿಗಳ ಅಭಿಪ್ರಾಯವಾಗಿದೆ. ನಿರಂತರ ಓದಿನ ಮುಂದೂವರಿಕೆಯ ಭಾಗವೇ ಅಧ್ಯಯನವಾಗಿದೆ ಎಂದು
ವಿವರಿಸಿದರು.


ಮನುಷ್ಯನ ಜೀವನಕ್ರಮವನ್ನು ಸಂಸ್ಕೃತಿ ಎಂದು ಹೆಸರಿಸಲಾಗಿದ್ದು, ಸಾಹಿತ್ಯ ಭಿನ್ನ ಆಯಾಮಗಳ
ಮನೋಭಾವಗಳನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ. ಸಾಹಿತ್ಯ ಎಂದಿಗೂ ಸಮಾಜ ಕೇಂದ್ರಿತವಾದುದ್ದಾಗಿದೆ. ಸಾಹಿತ್ಯದ
ಅಧ್ಯಯನಕ್ಕೆ ಜಾಗತಿಕ ವಾದಗಳು, ಸಿದ್ಧಾಂತಗಳು ಹಾಗೂ ಸಾಮಾಜಿಕ ಪ್ರಜ್ಞೆಯ ಪರಿಕಲ್ಪನೆಯನ್ನು ತಿಳಿದಿದ್ದರೆ ಅನುಕೂಲ
ಎಂದು ಹೇಳಿದರು


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ರಮೇಶ್.ಎಂ.ಎನ್ ಅವರು ಮಾತನಾಡಿ,   ಸಾಹಿತ್ಯ ಮಾನವ ಜೀವನಕ್ಕೆ ಮಾರ್ಗದರ್ಶನ ನೀಡುತ್ತವೆ. ಸಮಾಜದ ಮತ್ತು ಸಮುದಾಯಗಳ ಎಲ್ಲಾ ಆಯಾಮಗಳನ್ನು
ಪ್ರತಿಬಿಂಬಿವನ್ನು ಸಾಹಿತ್ಯದ ಮೂಲಕ ಕಾಣಬಹುದಾಗಿದೆ. ದಾರ್ಶನಿಕರ ತತ್ವಪದಗಳು, ಕೀರ್ತನೆಗಳು ಮನುಕುಲಕ್ಕೆ
ಅರಿವನ್ನು ಮೂಡಿಸುತ್ತವೆ ಎಂದು ಸಾಹಿತ್ಯದ ಪ್ರಭಾವನ್ನು ವಿವರಿಸಿದರು.
ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ ಅವರು ಮಾತನಾಡಿ, ಸಮಕಾಲೀನ ಮೌಲ್ಯಗಳನ್ನು
ಸಾಹಿತ್ಯದ ಮೂಲಕ ಕಂಡುಕೊಳ್ಳಬಹುದು. ಜೀವನದ ಸ್ವಾದವನ್ನು ಸವಿಯಲು ಸಾಹಿತ್ಯ ಸಹಕಾರಿ ಎಂದು ಹೇಳಿದರು.
ಐ.ಕ್ಯೂ.ಎ.ಸಿ ಸಹ ಸಂಯೋಜಕರಾದ ಅಬ್ದುಲ್ ಬಷೀರ, ಇತಿಹಾಸ ವಿಭಾಗದ ಮುಖ್ಯಸ್ಥರಾದ
ಹನುಮಂತಪ್ಪ.ಕೆ.ವೈ, ಡಾ.ಮಹಾಂತೇಶ್.ಎಸ್.ಆರ್, ಲೋಕೇಶಪ್ಪ.ಎಂ.ಎಸ್.ಡಾ ಸೋಮಕ್ಕ ಮಾದಪುರ, ಡಾ. ಯತೀಶ್ ಎಲ್ ಕೋಡಾವತ್, ಸಿ. ಮಂಜುನಾಥ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಗೌರಮ್ಮ.ಎಸ್.ಎಂ
ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಹಾಯಕ ಪ್ರಾಧ್ಯಪಕರಾದ ರಾಘವೇಂದ್ರ.ಜಿ.ಪಿ ಸ್ವಾಗತಿಸಿದರು. ಕು. ವಿದ್ಯಾರ್ಥಿನಿ ಕೆ.ಸಿ.ಅನಿತಾ ಪ್ರಾರ್ಥಿಸಿದರು.
ಅನಿತಾ ಮತ್ತು  ಕು.ದೀಪಾ.ಆರ್.ಕೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ವರ್ಷಿಣಿ ವಂದಿಸಿದರು.