ಇಂದು ಬಳ್ಳಾರಿಯಲ್ಲಿ ಹೆಸರಾಂತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರಿಗೆ ನುಡಿನಮನ

ಬಳ್ಳಾರಿ, ಜೂ.21: ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿ ಪುರಸ್ಕೃತ, ಹೆಸರಾಂತ ಚಿತ್ರಕಲಾವಿದ ಮಂಜುನಾಥ ಗೋವಿಂದವಾಡ ಅವರಿಗೆ ನುಡಿನಮನ ಕಾರ್ಯಕ್ರಮವನ್ನು ನಗರದ ಸ್ನೇಹ ಸಂಪುಟ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ 10-30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ನಗರದ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ, ಹಳೇ ದರೋಜಿಯ  ನಾಡೋಜ ಬುರಕಥಾ ಈರಮ್ಮ ಫೌಂಡೇಷನ್ (ರಿ),  ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಘಟಕ,  ಬಳ್ಳಾರಿ ಹಾಗೂ ಹಂದ್ಯಾಳ್ ಶ್ರೀ ಮಹಾದೇವತಾತ ಕಲಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಂಜುನಾಥ ಗೋವಿಂದವಾಡ ಅವರ ಸಾರ್ಥಕ ಜೀವನ, ಹೋರಾಟ,  ಸಾಧನೆಗಳ ಬಗ್ಗೆ  ಸ್ವಾಮೀಜಿಗಳು, ಸಾಹಿತಿ, ಪತ್ರಕರ್ತರು, ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು,  ಗಣ್ಯರು, ಒಡನಾಡಿಗಳು, ಹಿತೈಷಿಗಳು ಮೆಲುಕು ಹಾಕುವ ಮೂಲಕ ಅಗಲಿದ ಚೇತನಕ್ಕೆ ಗೌರವ ಸಲ್ಲಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ  ಸಹೃದಯರು ಆಗಮಿಸ ಬೇಕೆಂದು ಸಂಘಟಕರಾದ ಕಜಾಪ ಮತ್ತು ವೇದಿಕೆ ಅಧ್ಯಕ್ಷ ಸಿ. ಮಂಜುನಾಥ, ಕಲಾ ಸಂಘದ ಅಧ್ಯಕ್ಷ ಪುರುಷೋತ್ತಮ ಹಂದ್ಯಾಳ್ ಮತ್ತು ಫೌಂಡೇಶನ್ ಅಧ್ಯಕ್ಷ ಡಾ. ಅಶ್ವರಾಮು ಅವರು ಕೋರಿದ್ದಾರೆ.

——

Leave a Reply

Your email address will not be published. Required fields are marked *