
ಬೆಂಗಳೂರು: ರಾಮ ಮನೋಹರ ಲೋಹಿಯಾ ಅವರ ಜೀವನಯಾನ ಕುರಿತು ಸಾಹಿತಿ, ವಿಮರ್ಶಕ ಡಾ. ನಟರಾಜ್ ಹುಳಿಯಾರ್ ಅವರು ಬರೆದಿರುವ “ಡಾಕ್ಟರ್ ಸಾಹೇಬ್” ಪುಸ್ತಕವನ್ನು ಸೋಮವಾರ ಸಂಜೆ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಬಂಡವಾಳಶಾಹಿ ವ್ಯವಸ್ಥೆಯತ್ತ ವಾಲುತ್ತಿರುವ ದೇಶಕ್ಕೆ ಲೋಹಿಯಾರವರ ಸಮಾಜವಾದಿ ಚಿಂತನೆಗಳ ಅಗತ್ಯತೆಯನ್ನು ಸಿದ್ದರಾಮಯ್ಯ ಅವರು ಪ್ರತಿಪಾದಿಸಿದರು.
ಸಾಹಿತಿಗಳಾದ ಅಗ್ರಹಾರ ಕೃಷ್ಣಮೂರ್ತಿ, ಮಂಗಳೂರು ವಿಜಯ, ಹಿರಿಯ ಪತ್ರಕರ್ತರಾದ ಶೂದ್ರ ಶ್ರೀನಿವಾಸ್, ಕೃತಿಕಾರರಾದ ನಟರಾಜ್ ಹುಳಿಯಾರ್, ಸಂಘಟಕ ರವಿ ಬಾಗಿ, ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ, ಪ್ರಕಾಶಕರಾದ ಪಲ್ಲವ ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು.
