ಚಿಗುರು ಕಲಾ ತಂಡಕ್ಕೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ

ಬಳ್ಳಾರಿ: ನೆಹರು ಕೆಂದ್ರದಲ್ಲಿ ನೋಂದಣಿಯಾಗಿದ್ದು ಕೇಂದ್ರದ ಎಲ್ಲಾ ಕಾರ್ಯಕ್ರಮಗಳನ್ನು 2019-20ನೇ ಸಾಲಿನಲ್ಲಿ ಉತ್ತಮವಾಗಿ ನಿರ್ವಹಿಸಿದ್ದಕ್ಕೆ ಚಿಗುರು ಕಲಾ ತಂಡ ಅತ್ಯುತ್ತಮ ಜಿಲ್ಲಾ ಪ್ರಶಸ್ತಿಗೆ ಪಾತ್ರವಾಗಿದೆ.
ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ ಅವರು ಸೋಮವಾರ ತಂಡದ ಅಧ್ಯಕ್ಷ ಎಸ್ ಎಂ ಹುಲುಗಪ್ಪ ಅವರಿಗೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಿದರು.
ನೆಹರು ಕೇಂದ್ರದ ಎಲ್ಲಾ ಜನಪರ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿರುವ ಯುವ ಸಂಘಗಳಿಂದ ಜಿಲ್ಲಾ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿತ್ತು,
ತಾಕೂಕಿನ ಇಬ್ರಾಹಿಂಪುರ ಚಿಗುರು ಕಲಾ ತಂಡಕ್ಕೆ ಅತ್ಯುತ್ತಮ ಜಿಲ್ಲಾ ಪ್ರಶಸ್ತಿ ಪತ್ರ ಮತ್ತು ನಗರದ ರೇಡಿಯೋ ಪಾರ್ಕ್ ಪ್ರದೇಶದ ವಿಜಯ ಮಹಿಳಾ ಸಂಘ ಉತ್ತಮ ಪ್ರಶಸ್ತಿ ಪತ್ರವನ್ನು ಜಿಲ್ಲಾಧಿಕಾರಿ ಮಾಲಪಾಟಿ ಅವರು ನೀಡಿ ಗೌರವಿಸಿದರು.
*****

Leave a Reply

Your email address will not be published. Required fields are marked *