ಕಸಾಪ ಜಿಲ್ಲಾ ಚುನಾವಣೆ: ಬಳ್ಳಾರಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಎಂಟು ನಾಮಪತ್ರ ಸಲ್ಲಿಕೆ

ಬಳ್ಳಾರಿ: ಮೇ 9ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಬಳ್ಳಾರಿ‌ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಒಟ್ಟು ಎಂಟು ನಾಮಪತ್ರ ಸಲ್ಲಿಕೆಯಾಗಿವೆ.
ಬುಧವಾರ ನಾಮಪತ್ರ ಸಲ್ಲಿಕೆಗೆ ಅಂತಿಮ‌ ದಿನವಾಗಿತ್ತು. ರಂಗ ಕರ್ಮಿ ಕೆ. ಜಗದೀಶ್, ಕಸಾಪ ಹಾಲಿ ಅಧ್ಯಕ್ಷ ಸಿದ್ರಾಮ‌ ಕಲ್ಮಠ, ಸಿರುಗುಪ್ಪ ತಾಲೂಕಿನ ದಾಸಪುರ ಗ್ರಾಮದ ಡಿ.ಅರುಣ್ ಕುಮಾರ್ ಮತ್ತು ಪಂಪಾಪತಿ ಟಿ ಎಂ ನಾಮಪತ್ರ ಸಲ್ಲಿಸಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಶಿವಲಿಂಗಾ ರೆಡ್ಡಿ ತಿಳಿಸಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಾಂಸ್ಕೃತಿಕ ಸಂಘಟಕ ಸಿ.ಮಂಜುನಾಥ್, ಕಸಾಪ‌ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಲೇಖಕಿ ವಿನೋದ ಕರ್ಣಂ ಮತ್ತು ಕೂಡ್ಲಿಗಿ ತಾಲೂಕಿನ ಡಿ.ಕೃಷ್ಣಪ್ಪ ಗುಣಸಾಗರ ಅವರೂ ನಾಮಪತ್ರ ಸಲ್ಲಿಸಿದ್ದಾರೆ.
ಗುರುವಾರ ಬೆಳಿಗ್ಗೆ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಏ.12 ರಂದು ನಾಮಪತ್ರಗಳನ್ನು ವಾಪಾಸು ಪಡೆಯಬಹುದಾಗಿದೆ.
ಮೇ.9ರಂದು ಕೇಂದ್ರ ಹಾಗೂ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
*****

Leave a Reply

Your email address will not be published. Required fields are marked *