Warning: session_start(): Cannot start session when headers already sent in /home/karnatak/public_html/wp-content/plugins/the-visitor-counter/classes/class.widget.php on line 10

Warning: Cannot modify header information - headers already sent by (output started at /home/karnatak/public_html/wp-content/plugins/free-comments-for-wordpress-vuukle/free-comments-for-wordpress-vuukle.php:1) in /home/karnatak/public_html/wp-content/plugins/post-views-counter/includes/class-counter.php on line 1734
14ರವರೆಗೆ ಕೋವಿಡ್ ಲಸಿಕಾ ಉತ್ಸವ: ಬಳ್ಳಾರಿ ಜಿಲ್ಲೆಯಲ್ಲಿ 2.60ಲಕ್ಷ ಜನರಿಗೆ ಲಸಿಕೆ -ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಅನಿಲ್ ಕುಮಾರ್‌ - Karnataka Kahale

14ರವರೆಗೆ ಕೋವಿಡ್ ಲಸಿಕಾ ಉತ್ಸವ: ಬಳ್ಳಾರಿ ಜಿಲ್ಲೆಯಲ್ಲಿ 2.60ಲಕ್ಷ ಜನರಿಗೆ ಲಸಿಕೆ -ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಅನಿಲ್ ಕುಮಾರ್‌

ಬಳ್ಳಾರಿ:45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ನಾಗರಿಕರು ತಪ್ಪದೇ ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡು ಕೊರನಾ ವೈರಸ್ ನಿಂದ ಉಂಟಾಗುವ ಹಾನಿಯನ್ನು ತಡೆಗಟ್ಟಲು ಜಿಲ್ಲಾಡಳಿತಕ್ಕೆ ಸಹಕರಿಸಬೇಕು ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಅನಿಲ್ ಕುಮಾರ್‌ ಹೇಳಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಆಶ್ರಯ ಕಾಲೋನಿ ನಗರ ಆರೋಗ್ಯ ಕೇಂದ್ರ ಇವರ ಆಶ್ರಯದಲ್ಲಿ ಏ.11ರಿಂದ 14ರವರೆಗೆ ಜರಗುವ ಲಸಿಕಾ ಉತ್ಸವವನ್ನು
ನಗರದ ಆಶ್ರಯ ಕಾಲೋನಿ ನಗರ ಆರೋಗ್ಯ ಕೇಂದ್ರದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಗ್ರಾಮ ಮಟ್ಟದಲ್ಲಿರುವ ಉಪಕೇಂದ್ರಗಳ ವ್ಯಾಪ್ತಿಯಲ್ಲಿ ಲಸಿಕೆ ಹಾಕಲಾಗುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಕೊರಿದರು.
ಇಲ್ಲಿಯವರೆಗೆ 45-60 ವರ್ಷದೊಳಗಿನ 122006, ಹಾಗೂ 60 ವರ್ಷ ಮೇಲ್ಪಟ್ಟ 112654, ಆರೋಗ್ಯ ಇಲಾಖೆಯ 16899 ಮತ್ತು ಇತರ ಮುಂಚೂಣಿ ಇಲಾಖೆಯ 8374 ಜನ ಲಸಿಕೆ ಪಡೆದಿದ್ದಾರೆ ಎಂದು ವಿವರಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಮೋಹನಕುಮಾರಿ ಮಾತನಾಡಿ,ಕೋವಿಡ್ ನಿಯಂತ್ರಣಕ್ಕಾಗಿ ಸಾರ್ವಜನಿಕ ಸ್ಥಳಗಳಲ್ಲಿ ಇದ್ದಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, 06 ಅಡಿಗಳ ವ್ಯಕ್ತಿಗತ ಅಂತರ ಕಾಪಾಡುವುದು ಹಾಗೂ ಕೈಗಳ್ಳನ್ನು ಸಾಬೂನು ಮತ್ತು ನೀರಿನಿಂದ ತೊಳೆದುಕೊಳ್ಳುವುದನ್ನು ಅಥವಾ ಸ್ಯಾನಿಟೈಜರ್ ಬಳಸುವುದನ್ನು ನಿರ್ಲಕ್ಷಿಸಬಾರದು ಮತ್ತು ಗುಂಪುಗುಡುವುದು ಮಾಡಬಾರದು ಎಂದರು. ಎಲ್ಲಿಬೇಕೆಂದರಲ್ಲಿ ಉಗುಳುಬಾರದು ಹಾಗೂ ಕೋವಿಡ್‌ ಲಕ್ಷಣಗಳು ಕಂಡು ಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ವೈದ್ಯಾಧಿಕಾರಿಗಳಾದ ಡಾ ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಸೇರಿದಂತೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಾಂತವ್ವ ಉಪ್ಪಾರ, ಖುರ್ಶೀದಾ ಬೇಗಂ, ಬಿಪಿಎಮ್‌ ಮೇಘರಾಜ್‌, ಸಿಬ್ಬಂದಿಯವರಾದ, ರತ್ನಕುಮಾರಿ, ನೇತ್ರಾವತಿ, ಶೋಭಾ, ದಾನ್ಯಕುಮಾರಿ, ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಲಸಿಕೆ ಪಡೆಯಲು ಆಗಮಿಸಿದ್ದ ಆಶ್ರಯ ಕಾಲೋನಿ ಸಾರ್ವಜನಿಕರು ಹಾಜರಿದ್ದರು.
*****