ಎಸ್.ಎಸ್.ಎ ಸರಕಾರಿ ಪ್ರಥಮದರ್ಜೆ ಕಾಲೇಜು: ವಿವಿಧ ಕಟ್ಟಡ ಕಾಮಗಾರಿಗಳಿಗೆ ಶಾಸಕರಿಂದ ಶಂಕುಸ್ಥಾಪನೆ

ಬಳ್ಳಾರಿ, ಆ.೨೦: ಸ್ಥಳೀಯ ಎಸ್ ಎಸ್ ಎ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ವಿವಿಧ ಕಟ್ಟಡ ಕಾಮಗಾರಿಗಳಿಗೆ ನಗರ ಶಾಸಕರೂ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜಿ.ಸೋಮಶೇಖರರೆಡ್ಡಿ ಅವರು ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ಕಾಲೇಜಿನ ಅಗತ್ಯವಿರುವ ೯ ತರಗತಿ ಕೊಠಡಿಗಳು, ೧ ಉಪಾಹಾರಗೃಹ, ೨ ವಿಶ್ರಾಂತಿ ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾ ಖನಿಜ ನಿಧಿಯಡಿ ರೂ.೨.೧೦ ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧ್ಯಕ್ಷ ವೀರಶೇಖರರೆಡ್ಡಿ, ಸದಸ್ಯರಾದ ಜಿ.ಆನಂದ್, ಪದ್ಮಾವತಿ, ಪ್ರಾಂಶುಪಾಲ ಪ್ರೊ.ಎ.ಹೇಮಣ್ಣ, ಪರೀಕ್ಷಾ ನಿಯಂತ್ರಕ ಡಾ.ಬಿ.ಶ್ರೀನಿವಾಸಮೂರ್ತಿ, ಪ್ರಾಧ್ಯಾಪಕರುಗಳಾದ ಡಾ.ಇಸ್ಮಾಯಿಲ್‌ ಮಕಾಂದರ್, ಡಾ.ಮಂಜುನಾಥ ರೆಡ್ಡಿ, ಪಂಚಾಕ್ಷರಿ, ಡಾ.ಕುಂಚಂ ನರಸಿಂಹುಲು, ಡಾ.ಬಿ.ಸರೋಜ, ಪಾಲಿಕೆ ಸದಸ್ಯ ಅಶೋಕ್ ಕುಮಾರ್, ಶ್ರೀನಿವಾಸಮೋತ್ಕರ್, ಗಾಜುಲು ಶೀನಿವಾಸ ಮುಂತಾದವರು ಹಾಜರಿದ್ದರು.


*****

Leave a Reply

Your email address will not be published. Required fields are marked *