ಶಾಲಾ ಕಾಲೇಜುಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲು ಸುತ್ತೋಲೆ ಹೊರಡಿಸಲು ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘ ಒತ್ತಾಯ

ಬಳ್ಳಾರಿ, ಆ. 26: ಸರ್ಕಾರದ ಆದೇಶದಂತೆ ಜಿಲ್ಲೆಯ ಎಲ್ಲಾ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳು, ಶಾಲಾ ಕಾಲೇಜುಗಳು, ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಕಚೇರಿ ಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲು ಸುತ್ತೋಲೆ ಹೊರಡಿಸುವಂತೆ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘ ಒತ್ತಾಯಿಸಿದೆ.
ಗುರುವಾರ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಪದಾಧಿಕಾರಿಗಳು ಅಪರಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸರ್ಕಾರದ ವತಿಯಿಂದ ಜಯಂತಿ ಗಳನ್ನು ಎಲ್ಲಾ ಇಲಾಖೆಗಳಲ್ಲಿ ಆಚರಿಸಬೇಕೆಂದು ಆದೇಶ ಇದ್ದರೂ ಸರಿಯಾಗಿ ಅನುಷ್ಠಾನ ಆಗುತ್ತಿಲ್ಲ. ಆದ್ದರಿಂದ ತುರ್ತಾಗಿ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಮುಖಂಡರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಕಾರ್ಯದರ್ಶಿ ಕೆ. ಇ. ಚಿದಾನಂದಪ್ಪ, ಉಪಾಧ್ಯಕ್ಷರಾದ ಕೆ.ಸೋಮಪ್ಪಯಾದವ್ , ವೆಂಕಟೇಶ್ ಯಾದವ್ ಕಾರ್ಯಕಾರಿ ಸಮಿತಿ ಸದಸ್ಯರಾದ ಲಕ್ಷ್ಮೀ ನಾರಾಯಣ್ ಯಾದವ್, ಮಲ್ಲಯ್ಯ ಯಾದವ್, ಪಂಪಣ್ಣ ಯಾದವ್ ಗಿರಿಯಾದವ್ , ರೇವಣ್ಣ ಯಾದವ್ , ಶಿವಮೂರ್ತೆಪ್ಪ ಹರಪನಹಳ್ಳಿ ತಾಲೂಕು ಯಾದವ ಸಂಘದ ಅಧ್ಯಕ್ಷರು, ದೇವೇಂದ್ರಪ್ಪ , ಎಂ.ವಿಷ್ಣಪ್ಪ, ಸಿ . ರಮೇಶ್, ಸಂಪತ್ ಕುಮಾರ್,ಎಂ.ರಮೇಶ್,ಎಂ . ಗುಡ್ಡಪ್ಪ, ಹನುಮಂತ ಗೌಡ, ಸಂತೋಷ ಲಿಂಗರಾಜ ಮತ್ತೂರು, ಹರಪನಹಳ್ಳಿ ತಾಲೂಕು ಮುಖಂಡರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
*****

Leave a Reply

Your email address will not be published. Required fields are marked *