ರಾವಿಹಾಳ ಗ್ರಾಮದಲ್ಲಿ ಬೃಹತ್ ಕೋವಿಡ್ ವಿಶೇಷ ಲಸಿಕಾ ಅಭಿಯಾನಕ್ಕೆ ಸಿರುಗುಪ್ಪ ತಹಸೀಲ್ದಾರ್ ಚಾಲನೆ

ಬಳ್ಳಾರಿ ಸೆ.22: ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾವಿಹಾಳ ಗ್ರಾಮದಲ್ಲಿ ಕೋವಿಡ್ ವಿಶೇಷ ಲಸಿಕೆ ಅಭಿಯಾನಕ್ಕೆ ಸಿರುಗುಪ್ಪ ತಹಸೀಲ್ದಾರ್ ಎ.ಆರ್.ಮಂಜುನಾಥ ಸ್ವಾಮಿ ಅವರು ಬುಧವಾರ ಬೆಳಿಗ್ಗೆ ಚಾಲನೆ ನೀಡಿದರು.
ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಮಂಜುನಾಥಸ್ವಾಮಿ ಅವರು ಮಾತನಾಡಿ, ಗ್ರಾಮದ ಜನರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕು. ಗ್ರಾಪಂ ವತಿಯಿಂದ ಆಸ್ಪತ್ರೆ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತಿದ್ದಾರೆ. ಎಲ್ಲರೂ ತಪ್ಪದೇ ಲಸಿಕೆ ಪಡೆದುಕೊಳ್ಳಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಕೆ.ಎಂ.ಮಲ್ಲಪ್ಪ,ಗ್ರಾಪಂ ಸದಸ್ಯ ಆರ್.ಟಿ. ಮಾದಣ್ಣ,ಗ್ರಾಮ ಲೆಕ್ಕಾಧಿಕಾರಿ ಪಿ. ಕೆ.ಮಂಜುನಾಥ್, ಗ್ರಾಪಂ ಸಿಬ್ಬಂದಿ ಮಹಾದೇವಪ್ಪ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಊರಿನ ಮುಖಂಡರು ಇದ್ದರು.


*****

Leave a Reply

Your email address will not be published. Required fields are marked *