ಅನುದಿನ ಕವನ-೩೬೭, ಕವಿ: ವಾಗೀಶ ಶರ್ಮ, ದಾವಣಗೆರೆ, ಕವನದ ಶೀರ್ಷಿಕೆ: ಹೊಸ ವರುಷ

ಹೊಸ ವರುಷ

ಇತಿಹಾಸದ ಪುಟಗಳ ಸೇರಿತು
ಎರಡು ಸಾವಿರದ ಇಪ್ಪತ್ತೊಂದು
ಹೊಸ ಇತಿಹಾಸ ಬರೆಯಲು ಬಂದಿದೆ
ಎರಡುಸಾವಿರದ ಇಪ್ಪತ್ತೆರಡು

ಹೊಸ ವರುಷವೇ ಬೇಡುವೆ ನಿನ್ನನು ಇವತ್ತು
ಹೆಚ್ಚಿಸು ಸಹೃದಯ ಸದಸ್ಯರ ಜ್ಞಾನ ಸಂಪತ್ತು

ರಾಗ ದ್ವೇಷಗಳ ಮರೆತು ಮುಂದೆ ಸಾಗೋಣ
ಪ್ರೀತಿ ಪ್ರೇಮಗಳ ಪಥದಲ್ಲಿ ದಾರಿ ಸವೆಸೋಣ

ಬಾಳ ಹೊತ್ತಿಗೆಯಲ್ಲಿ ಸುಂದರ ಕ್ಷಣಗಳ ಮೂಡಿಸೋಣ
ಹಿರಿಯರಿಗೆ ವಂದಿಸುತ್ತ ಕಿರಿಯರ ಹರಸೋಣ.

ಕಷ್ಟ ನಷ್ಟಗಳ ಪಕ್ಕಕೆ ಸರಿಸಲು
ಇಷ್ಟದ ಬಯಕೆಗಳ ಮಳೆಯನು ಸುರಿಸಲು
ಸಂತಸ ಬದುಕಿನ ನಾಂದಿಯ ಹಾಡುತ
ಬಂದ ಹೊಸ ವರುಷವೇ ನಿನಗೆ ಸ್ವಾಗತ

-ವಾಗೀಶ ಶರ್ಮ, ದಾವಣಗೆರೆ
*****

Leave a Reply

Your email address will not be published. Required fields are marked *