ಸೃಷ್ಟಿ ಮಹಿಳಾ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾಗಿ ಕವಯತ್ರಿ ಸರೋಜಾ‌ ಬ್ಯಾತನಾಳ್ ನೇಮಕ

 

ಬಳ್ಳಾರಿ, ಜ.4: ಸೃಷ್ಟಿ ಮಹಿಳಾ ಸಾಹಿತ್ಯ ಪರಿಷತ್ತು ಬಳ್ಳಾರಿ ಜಿಲ್ಲಾ ಸಮಿತಿ ನೂತನ ಅಧ್ಯಕ್ಷರಾಗಿ ಕವಯತ್ರಿ ಸರೋಜಾ ಬ್ಯಾತನಾಳ್ ನೇಮಕವಾಗಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಸೃಷ್ಟಿ ಮೀಡಿಯಾ ಟ್ರಸ್ಟ್ ಅಧ್ಯಕ್ಷ ವಾಗೀಶ್ ಸಿ ಕೋಟೆಹಾಳ್ ಅವರು, ಜಿಲ್ಲಾ ಸಮಿತಿ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಶ್ರೀಮತಿ ಪಾರ್ವತಿ ತಲ್ಲೂರು, ಉಪಾಧ್ಯಕ್ಷರುಗಳಾಗಿ ಶ್ರೀಮತಿ ವಾಣಿ ರಘು, ಶ್ರೀಮತಿ ಶಶಿಕಲಾ ಸಂಡೂರು, ಕೋಶಾಧ್ಯಕ್ಷರಾಗಿ ಹಿರಿಯ ಸಾಹಿತಿ ಶ್ರೀಮತಿ ಎನ್.ಡಿ. ವೆಂಕಮ್ಮ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಳಾಗಿ ಶ್ರೀಮತಿ ಸರಳಾ ಆರ್, ನಫೀಸಾ ಶೇಖಾ, ಕಾರ್ಯದರ್ಶಿ ಯಾಗಿ ಶ್ರೀಮತಿ ನೀಲಾಂಬಿಕಾ, ಉಮಾ ಹೆಚ್.ಎಂ, ಜಿಲ್ಲಾ ಸಂಚಾಲಕರಾಗಿ ಶ್ರೀಮತಿ ದೀಪೀಕಾ ಅವರು ನೇಮಕಗೊಂಡಿದ್ದಾರೆ.


ಸಮಿತಿ ನಿರ್ದೇಶಕರಾಗಿ ಶ್ರೀಮತಿ ಸಿದ್ದೇಶ್ವರಿ, ಡಾ ರಾಜೇಶ್ವರಿ, ಶ್ರೀಮತಿ ಸತ್ಯವತಿ, ಶ್ರೀಮತಿ ನೀಲಾಂಬಿಕಾ ಶ್ರೀಮತಿ ನೀಲಾವತಿ ಇವರು ನೇಮಕವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಯಾಗಿ ಶ್ರೀಮತಿ ಕೆ. ಅನುಸೂಯಾ ಮರು ಆಯ್ಕೆಯಾಗಿದ್ದಾರೆ.
*****

Leave a Reply

Your email address will not be published. Required fields are marked *