ಸೇವಾ ಭದ್ರತೆ ಕಲ್ಪಿಸಲು ಆಗ್ರಹಿಸಿ ಗಂಗಾವತಿಯಲ್ಲಿ ಅತಿಥಿ ಉಪನ್ಯಾಸಕರಿಂದ ಬೈಕ್ ರ್ಯಾಲಿ

ಗಂಗಾವತಿ, ಜ.5: ತಮ್ಮ‌ನ್ಯಾಯಯುತ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಎಸ್.ಕೆ.ಎನ್ ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಬೈಕ್ ರ್ಯಾಲಿ ಮೂಲಕ ಪ್ರತಿಭಟನೆ ನಡೆಸುದರು.
ಅತಿಥಿ ಉಪನ್ಯಾಸಕರ ಒಕ್ಕೂಟದ ನೇತೃತ್ವದಲ್ಲಿ
ಅತಿಥಿ ಉಪನ್ಯಾಸಕರು ಕಾಲೇಜ್ ಆವರಣದಿಂದ  ನಗರದ ಪ್ರಮುಖ ಬೀದಿಗಳ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ, ತಮ್ಮ ನ್ಯಾಯಯುತವಾದ ಬೇಡಿಕೆ ಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನಾ ಬೈಕ್ ರ್ಯಾಲಿಯಲ್ಲಿ ಅತಿಥಿ ಉಪನ್ಯಾಸಕರುಗಳಾದ ಪಂಚಾಕ್ಷರಯ್ಯ, ಮಹೇಶ್ ಕುಮಾರ್, ರಾಘವೇಂದ್ರ ಚೌಡಕಿ, ಖಾಜಾಸಾಬ್ ಗಡಾದ್, ಪಾಂಡುರಂಗ, ಗುಂಡಪ್ಪ, ಹನುಮಂತ, ವಿಜಯಲಕ್ಷ್ಮಿ, ಪರ್ವೀನ್ ಸುಲ್ತಾನ್, ದೊಡ್ಡ ಬಸಮ್ಮ, ತಾಯಪ್ಪ ಮರ್ಚೇಡ್, ವಿಜಯ ಮಹಾಂತೇಶ ಮತ್ತಿತರರು ಪಾಲ್ಗೊಂಡಿದ್ದರು.

*****

Leave a Reply

Your email address will not be published. Required fields are marked *