ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್.ಲಾವಣ್ಯ ಅವರಿಗೆ ಬೀಳ್ಕೊಡುಗೆ

ಬಳ್ಳಾರಿ,ಜ.10: ಜಿಲ್ಲಾ‌ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾಗಿ ಕಳೆದ ಮೂರುವರ್ಷಗಳಿಂದ ಸೇವೆ ಸಲ್ಲಿಸಿ ಬೆಂಗಳೂರಿನ ರಾಜ್ಯಗುಪ್ತಚರ ಇಲಾಖೆಗೆ ವರ್ಗಾವಣೆಯಾಗಿರುವ ಬಿ.ಎನ್.ಲಾವಣ್ಯ ಅವರಿಗೆ ಸೋಮವಾರ ಬಳ್ಳಾರಿ ಪೊಲೀಸ್ ವತಿಯಿಂದ ಸನ್ಮಾನಿಸಿ ಹೃತ್ಪೂರ್ವಕವಾಗಿ ಬೀಳ್ಕೊಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಎಎಸ್ಪಿ ಬಿ.ಎನ್.ಲಾವಣ್ಯ ಅವರನ್ನು ಸನ್ಮಾನಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಅವರು ಕಳೆದ ಮೂರು ವರ್ಷ ಎರಡು ತಿಂಗಳಿಂದ ಜಿಲ್ಲೆಯಲ್ಲಿ ಎಎಸ್ಪಿಯಾಗಿ ಲಾವಣ್ಯ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಅವರು ಅತ್ಯಂತ ಕ್ರಿಯಾಶೀಲರಾಗಿದ್ದರು ಎಂದರು ಮತ್ತು ಅವರೊಂದಿಗಿನ ಸೇವೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಡಿವೈಎಸ್ಪಿಗಳಾದ ರಮೇಶಕುಮಾರ,ಕಾಶಿ ಅವರು ಕೂಡ ಎಎಸ್ಪಿ ಲಾವಣ್ಯ ಅವರ ಸೇವೆಯನ್ನು ಸ್ಮರಿಸಿದರು.


ಸನ್ಮಾನ ಸ್ವೀಕರಿಸಿ ಎಎಸ್ಪಿ ಬಿ.ಎನ್.ಲಾವಣ್ಯ ಅವರು ಬಳ್ಳಾರಿಯಲ್ಲಿ ಸಲ್ಲಿಸಿದ ಸೇವೆ ಸದಾ ಸ್ಮರಣೀಯವಾಗಿರುವಂತದ್ದು ಎಂದರು.
ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.
*****

Leave a Reply

Your email address will not be published. Required fields are marked *