ಅನುದಿನ ಕವನ-೪೬೨, ಕವಯತ್ರಿ: ವಿನುತಾ ಎಸ್, ಬೆಂಗಳೂರು

ಅರ್ಧಂಬರ್ಧ ಗೀಚಿದ ಕವಿತೆಯೊಂದಿದೆ,
ಯಾವ ನೋವಿಗಿಂತ ಕಡಿಮೆಯೇನಲ್ಲ
ಅಪೂರ್ಣ ಕವಿತೆಯೊಂದಿಗೆ ಕಳೆಯುವುದು,
ರಾತ್ರಿಯೆಲ್ಲಾ ವಿಪರೀತ ಕಾಡುತ್ತದೆ
ಪದಗಳಿಗಾಗಿ ತಡಕಾಡುತ್ತದೆ…

ಪದಕೆ ಪದ ಜೋಡಿಸಿ,
ಪ್ರಾಸಗಳ ಹೆಣೆದು,
ಕಟ್ಟಲಾಗಲಿಲ್ಲ ಕವಿತೆಯನ್ನು
ಅರ್ಧ ಕವಿತೆ ಪೂರ್ತಿಯಾಗಲಿಲ್ಲ,
ಸುಲಭವೇನಲ್ಲ ಕವಿತೆ ಕಟ್ಟುವುದು…

ಕೊನೆಗೊಮ್ಮೆ ತಿಳಿಯಿತು
ಕವಿತೆ ಕಟ್ಟುವುದಲ್ಲ; ಹುಟ್ಟುವುದು!!

~ ✍️ವಿನುತಾ ಎಸ್.ಬೆಂಗಳೂರು
*****

Leave a Reply

Your email address will not be published. Required fields are marked *