ಅನುದಿನ ಕವನ-೧೯೧೫, ಹಿರಿಯ ಕವಿ:ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ: ಈಗೀಗ ತೀರಾ ಕಷ್ಟವಾಗುತ್ತಿದೆ

ಈಗೀಗ ತೀರಾ ಕಷ್ಟವಾಗುತ್ತಿದೆ ಈಗೀಗ ತೀರಾ ಕಷ್ಟವಾಗುತ್ತಿದೆ ನನ್ನ ಬಲಗಣ್ಣು ತಾನು ನೋಡ್ತಿರೋದೇ ಸರಿ ಅಂತಿದೆ ನನ್ನ ಎಡಗಣ್ಣು ತಾನು ನೋಡ್ತಿರೋದೇ ಸರಿ ಅಂತಿದೆ ಈಗ ಎರಡೂ ವಿರುದ್ಧ ದಿಕ್ಕಿಗೆ ನೋಡ್ತಿರೋದರಿಂದಲೇ ನಾನು ಯಾವುದನ್ನೂ ನೆಟ್ಟಗೆ ನೋಡಲಿಕ್ಕಾಗ್ತಿಲ್ಲ – ಈಗೀಗಾ ತೀರಾ…

ಅನುದಿನ ಕವನ-೧೯೧೪, ಕವಿ: ಸಿದ್ದು ಜನ್ನೂರ್, ಚಾಮರಾಜನಗರ

ಇಡಿ ಕೋಣೆ ತುಂಬಾ ನಿನ್ನ ನೆನಪನ್ನ ತುಂಬಿಕೊಂಡು ಕಾಯುವುದು ನನಗೀಗ ಖಯ್ಯಾಲಿಯಾಗಿದೆ… ಗೋಡೆಗೆ ಬಿದ್ದ ನೆರಳು ನನ್ನ ನಿನ್ನ ಮೊದಲ ಬೇಟಿಯ ಅಚ್ಚಿಳಿಸಿ ಕಾಡುವಾಗ ನನ್ನ ನೋಟದ ಎಲ್ಲ ಚಿತ್ರಗಳು ನೀನೆ ಎಂಬುದು ಕಣ್ಣಿಗೆ ಅಂಟಿದ ಪೊರೆಯಾಗಿದೆ… ನಾನು ಸೀದಾ ಸಾದಾ…

ಅನುದಿನ ಕವನ-೧೯೧೩, ಕವಯತ್ರಿ: ವಿಜಯಶ್ರೀ ಹಾಲಾಡಿ, ಕವನದ ಶೀರ್ಷಿಕೆ: ಅವಳೆಂದರೆ ನೀವೇ….

ಹಿರಿಯ ಕವಯತ್ರಿ ಎಂ. ಆರ್ ಕಮಲ ಅವರು ಇಂದು (ಮಾ.27)ತಮ್ಮ ಹುಟ್ಟುಹಬ್ದ ಸಂಭ್ರಮದಲ್ಲಿದ್ದಾರೆ. ಐದು ವರ್ಷಗಳ  ಹಿಂದೆ  ಅವಳೆಂದರೆ ನೀವೇ…. ಕವಿತೆ ಮೂಲಕ ಕವಯತ್ರಿ  ವಿಜಯಶ್ರೀ ಹಾಲಾಡಿ ಅವರು ಶುಭಾಶಯ ಕೋರಿದ್ದರು. ಐದು ವರ್ಷಗಳ ಹಿಂದೆ ಬರೆದದ್ದಾದರೂ ಇಂದಿಗೂ ಎಂದಿಗೂ ಕವಿತೆ…

ಅನುದಿನ ಕವನ-೧೯೧೨, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಅವಳೆಂದರೆ….

“ಅವಳೆಂದರೆ ಪ್ರತಿ ಎದೆಯಂಗಳದ ಹೊಂಬೆಳಕಿನ ಬೆಳದಿಂಗಳ ಬಾಲೆ. ಜೀವ-ಭಾವದಂಗಳ ಬೆಳಗುವ ಕೋಟಿ ಕೋಲ್ಮಿಂಚಿನ ಪ್ರೇಮಜ್ವಾಲೆ. ನರ-ನರಗಳ ಸ್ವರತಂತಿ ಮೀಟುತ, ಧಮನಿ ಧಮನಿಗಳಲಿ ಒಲವ ಧುಮ್ಮಿಕ್ಕಿಸುವ ಸ್ವಪ್ನಮಾಲೆ. ಇಲ್ಲಿ ನೀವು ಓದಿ ಆಸ್ವಾಧಿಸಿದಷ್ಟೂ ನಿಮ್ಮ ಕನಸಿನಂಗಳದ ಕಾವ್ಯಕನ್ನಿಕೆಯ ಝೇಂಕಾರ. ಇಲ್ಲಿ ನೀವು ಅನುಭಾವಿಸಿದಷ್ಟೂ…

ಅನುದಿನ ಕವನ-೧೯೧೧, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

* ಅವಳ ದುಃಖಗಳ ನಡುವೆ ಇಣುಕುವ ಸಮಾಧಾನದ ಹೆಸರು ನನ್ನದಷ್ಟೇ ಎಂಬುದೊಂದು ಹೆಮ್ಮೆ * ನಲಿವಿನ ಕ್ಷಣಗಳನ್ನು ನಾನಿಲ್ಲದ ಬದುಕಲ್ಲಿ ಸಮಯವು ವ್ಯರ್ಥವೆಂದು ತಿಳಿದು ಮುಂದೂಡುತ್ತಾಳೆ * ತೀರಗಳೆನೋ ಅಪರಿಚಿತವಾದವು ಅವನಿಂದ ಬರುವ ಅಲೆಗಳು ಎಂದಾದರೊಮ್ಮೆ ತಾಕಲೇಬೇಕೆಂದು ತವಕಿಸುತ್ತಿದ್ದಾಳೆ * ಇಬ್ಬರು…

ಅನುದಿನ ಕವನ-೧೯೧೦, ಕವಯತ್ರಿ: ರೂಪ ಗುರುರಾಜ್, ಬೆಂಗಳೂರು, ಕವನದ ಶೀರ್ಷಿಕೆ: ಬದಲಾಗಿದ್ದೇನೆ….!

ಬದಲಾಗಿದ್ದೇನೆ….! ನಿಜ , ನಾ ಮೊದಲಿನಂತಿಲ್ಲ ಅಂದಿನ ನನಗಿಂತ ಇಂದಿನ ನಾನು ಭಿನ್ನ ಮಹತ್ವದ್ದೇನೋ ಆಗಿ ಬದಲಾಗಿದ್ದೇನೆ ಎಂದಲ್ಲ ಆದರೆ ನೂರಾರು ಸಣ್ಣ ವಿಚಾರಗಳಿಂದ ಬದಲಾಗಿದ್ದೇನೆ ನಾನು ಯೋಚಿಸುವ ರೀತಿ ನಾನು ನಂಬುವ ವಿಷಯ ನಾನು ಆರಿಸಿಕೊಳ್ಳುವ ಜನ ನಾನು ಕಲಿತ…

ಅನುದಿನ ಕವನ-೧೯೦೯, ಹಿರಿಯ ಕವಯತ್ರಿ: ಸವಿತಾ ನಾಗಭೂಷಣ, ಶಿವಮೊಗ್ಗ, ಕವನದ ಶೀರ್ಷಿಕೆ:ಕವಿ

ವಿಶ್ವ ಕವಿತಾ ದಿನದ ಶುಭಾಶಯಗಳೊಂದಿಗೆ…. ಕವಿ ನನ್ನಂತೆಯೇ ನಿಮ್ಮಂತೆಯೇ ಹುಲು ಮಾನವನು…. ಜಂಭ ಪಡಲು ಅವನಿಗೆ ಕೊಂಬೇನೂ ಇಲ್ಲ ! ಎಲ್ಲರಂತೆ ಅವನು ಕೊಳಕು ನೀರಿನಲ್ಲಿ ಜಳಕ ಮಾಡುವನು. ಹುಳುಕನೆತ್ತಿ ತೋರಿ ಆಡುವನು… ನೋವಿಗೆ ಸಾವಿಗೆ ತುಸು ಹೆಚ್ಚೇ ಮರುಗುವನು ಕರಗುವನು….…

ಅನುದಿನ ಕವನ-೧೯೦೮, ಕವಿ: ಸ್ನೇಹಪ್ರಿಯ ನಾಗರಾಜ್, ಬೆಂಗಳೂರು

ಮಾ.21 ವಿಶ್ವ ಕಾವ್ಯದ ದಿನ: ಕಾವ್ಯದ ದಿನಾಚರಣೆ ಹಿನ್ನಲೆಯಲ್ಲಿ ಕವಿ ಸ್ನೇಹಪ್ರಿಯ ನಾಗರಾಜ್ ಅವರು ರಚಿಸಿರುವ ಒಂದಷ್ಟು ಚುಟುಕುಗಳು…..ಹನಿ ಪ್ರಿಯರಿಗಾಗಿ!🍀🍀👇 ೧ ಅವಳ ತುಂಟ ನಗು ಎಲ್ಲರಿಗೂ ಸಿಗುತ್ತದೆ ಎಂದಾಗ.. ಮೈ ತುಂಬ ಬೆಂಕಿ ಮನಸ್ಸು ತಟಸ್ಥ ೨ ಪ್ರೇಮ ಮೊಗೆದಷ್ಟು…

ಅನುದಿನ ಕವನ-೧೯೦೭, ಕವಯತ್ರಿ: ವಿಶಾಲ ಆರಾಧ್ಯ, ಬೆಂಗಳೂರು

ಕವಿತೆಯ ದಿನಕ್ಕೊಂದು ಒಲವಕವಿತೆ ಮಳೆಯಾಗಿದೆ ಬಾ ಒಮ್ಮೆ ನೀನು ಅಂಗಳಕೆ ಕಾಲಿಟ್ಟು ನೋಡು ಉದುರಿವೆಲೆ ತಂಗಾಳಿಗೆ ಮೈಬಿಟ್ಟು ಸೋನೆ ಹನಿಯೇ ಮಲ್ಲಿಗೆಗೆ ಅಭಿಷೇಕ ಘಮ್ಮೆನುವ ಕಂಪದು ತಂದಿಹುದು ಮೈಪುಳಕ ಕಾದ ಧರಣಿಯ ಮೈ ಹನಿತಾಗಿ ಕೆರಳಿ ಹರಡಿಹುದು ಸುತ್ತಲೂ ಮಣ್ಣ ಘಮದೋಕುಳಿ…

ಅನುದಿನ ಕವನ-೧೯೦೬, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು

ವರ್ಷಕ್ಕೆ ಮೂರು ಬಾರಿ ಜೀವದೊಡನೆ ಚೆಲ್ಲಾಟವಾಡಿ ಸಾವಿಗೆ ಮೋಸವೆಸಗಿ ಮುನ್ನುಗ್ಗುತ್ತಾಳೆ.. ಹೋಮಾಹಕ್ಕಿಯೊಡನೆಯೂ ಒಂದೆರಡು ಬಾರಿ ಕೂತು ಮಾತನಾಡಿದ್ದಾಳೆ. ಯಾರಿಂದ ಯಾರು ಕಲಿತರು ಎನ್ನುವುದು ಇಬ್ಬರಿಗೂ ತುಸು ಗೊಂದಲವೇ.. ಪ್ರತಿ ಬಾರಿ ಸೋತು, ಸುಟ್ಟು ಬೂದಿಯೊಳಗಿಂದ ಎದ್ದು ಬಂದಾಗಲೂ ಹೊಸದಾಗಿ ಕಾಣಿಸಿಕೊಳ್ಳುತ್ತಾಳೆ. ಒಂದಿಷ್ಟೇ…