ಅನುದಿನ ಕವನ-೧೯೭೭, ಕವಿ: ಎ.ಎನ್.ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಅಳಲು..!

“ಇದು ನಮ್ಮ-ನಿಮ್ಮದೇ ಎದೆಯಾಳದ ಅಳಲಿನ ನೋವಿನ ಕವಿತೆ. ಶತ ಶತಮಾನಗಳಿಂದ ಮಾನವತೆ ಮರೆತು ಮೆರೆಯುತ್ತಲೇ ಇರುವ ನಮ್ಮದೇ ಬದುಕುಗಳ ವಿಷಾದದ ಭಾವಗೀತೆ. ನಾವೇಷ್ತೇ ಸಾಕ್ಷರರಾದರೂ.. ನಾವೆಷ್ಟೇ ನಗರೀಕರಾದರೂ.. ಅದೆಷ್ಟೇ ಆಧುನೀಕತೆಯ ಬೆಳೆಸಿಕೊಂಡರೂ.. ನಮ್ಮೊಳಗಿನ ಆ ಸ್ವಾರ್ಥ, ಕ್ರೌರ್ಯ, ವಂಚನೆ, ಮತ್ಸರ, ಮೃಗತ್ವಗಳು…

ಅನುದಿನ ಕವನ-೧೯೭೬, ಕವಿ: ನಾಗೇಶ್ ಜೆ ನಾಯಕ, ಸವದತ್ತಿ, ಕಾವ್ಯ ಪ್ರಕಾರ:ಗಜಲ್

ಗಜಲ್ ಹಂಚುವುದಾದರೆ ಹಂಚು ಎದೆಯೊಳಗಿನ ಪ್ರೀತಿ ಕಕ್ಕಬೇಡ ಹಾವಿನಂತೆ ವಿಷವನ್ನು ಹಚ್ಚುವುದಾದರೆ ಹಚ್ಚು ಒಲವಿನ ಹಣತೆ ಹಂಚಬೇಡ ಅಮವಾಸ್ಯೆ ಕತ್ತಲನ್ನು ಕೈತುತ್ತು ಕೊಟ್ಟವರ ಕೈಹಿಡಿದೆತ್ತಿ ನಡಿಗೆ ಕಲಿಸಿದವರ ನೆನಪಿಸಿಕೋ ಹೇಳುವುದಾದರೆ ಹೇಳು ಎದೆತುಂಬಿ ಧನ್ಯವಾದ ಹೇಳಬೇಡ ಇತರರಿಗೆ ಇಲ್ಲಸಲ್ಲದ್ದನ್ನು ಬದುಕಿದು ಬಹಳಷ್ಟು…

ಅನುದಿನ ಕವನ-೧೯೭೫, ಹಿರಿಯ ಕವಿ: ಡಾ. ಸಿದ್ದರಾಮ ಹೊನ್ಕಲ್, ಶಹಪುರ, ಕವನದ ಶೀರ್ಷಿಕೆ: ಹುಚ್ಚರು ! (ಒಂದು ಗಜಲ್)

ಹುಚ್ಚರು !                                                         …

ಅನುದಿನ ಕವನ-೧೯೭೪, ಕವಿ(ಸಂಗ್ರಹ-ಅನುವಾದ): ಚಿದಂಬರ ನರೇಂದ್ರ, ಬೆಂಗಳೂರು

ನನ್ನ ಸಹನೆಯ ಪರಾಕಾಷ್ಠತೆಯ ಬಗ್ಗೆ ಕೇಳುತ್ತೀಯಲ್ಲ ಫರಾಜ್ , ನನ್ನ ಅಪ್ಪಿಕೊಂಡು ಅತ್ತಳು ಆಕೆ ಬೇರೆ ಇನ್ಯಾರದೋ ನೆನಪಿನಲ್ಲಿ. ***** ನನ್ನ ಬಿಟ್ಟು ಹೋಗುವಾಗ ಮುಂದೆ ಕನಸಲ್ಲಿ ಮಾತ್ರ ಭೇಟಿ ಎಂದಿದ್ದಳು ಅವಳು, ಹಾಗೆಂದು ಪ್ರಮಾಣವನ್ನಾದರೂ ಮಾಡಬೇಕಿತ್ತು ಆಕೆ ಮಾಡಿದ್ದರೆ, ಮಲಗಿ…

ಅನುದಿನ ಕವನ-೧೯೭೩, ಕವಿ: ನಾಗೇಂದ್ರ ಬಂಜಗೆರೆ, ಬಳ್ಳಾರಿ, ಕವನದ ಶೀರ್ಷಿಕೆ: ವರ್ಷಾಧಾರೆ ಹರುಷ ತಾರೆ..

ವರ್ಷಾಧಾರೆ ಹರುಷ ತಾರೆ.. ವರುಷ ಧಾರೆ ಈ ಧರೆಯ ಜೀವ ನೀನು.. ನಿನ್ನಾಗಮನಕ್ಕಾಗಿ ಎಲ್ಲರ ಗಮನ.. ಸುರಿಸು ಬಾ ವರ್ಷಧಾರೆ..ಸೇರಿಕೋ ಭರತಧರೆ ಹರಿಸು ವರುಷದಹರ್ಷದ ಹೊಳೆಯ.. ನನ್ನವಳ ತವರು ಮಳೆಯನಾಡು.. ನನ್ನ ಒಲವಿನಸುಧೆಗೆ ಜೊತೆಯಾಗಿ ಉಳಿದಿಹಳು ಉರಿ ಬಿಸಿಲ ಬೆಂಗಾಡು.. ಎದುರು…

ಅನುದಿನ ಕವನ-೧೯೭೨, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ: ಭಾದ್ರಪದದ ಸುಫ್ರಭಾತ

ಭಾದ್ರಪದದ ಸುಫ್ರಭಾತ ಗಣೇಶ ದುಬಾರಿಯಾಗಿಹನು ಬಡಿವಾರದ ಬಜಾರಿನಲಿ ಭಕ್ತಿಯ ದೀವಿಗೆ ಮಂಕಾಗಿದೆ ಯುಕ್ತಿಯ ವಿದ್ಯುದಲಂಕಾರಕೆ ಕ್ರೌರ್ಯ ಕೈಗಳು ಸಿಡಿಸುತಿವೆ ಮನ‌ ಮಾಲಿನ್ಯ ಪಠಾಕಿಗಳ ವಿಶ್ವಾಸದ ಶ್ವಾಸ ಕೋಶದಲಿ ಅನುಮಾನದ ಹಬೆ ತುಂಬಿ.. ಬೆನಕನ ತ್ರಿಶೂಲ ತಿವಿಯಲಿ ಜಾತಿಯ ಜಠರಾಗ್ನಿಗೆ ಲಂಭೋದರನ ಉರಗ…

ಅನುದಿನ ಕವನ-೧೯೭೧, ಕವಿ: ಮಹಾದೇವ ಎಸ್.ಪಾಟೀಲ ರಾಯಚೂರು, ಕವನದ ಶೀರ್ಷಿಕೆ: ಹಾಯ್ಕುಗಳು

ಹಾಯ್ಕುಗಳು ನಿನ್ನ ನೆನಪು ಬೇಡವಾಗಿದೆ ಈಗ ಮದಿರೆ ಮತ್ತು… – ಇಡೀ ಬದುಕು ನೆನೆದು ಸೋತಿದ್ದಕ್ಕೆ ಉಸಿರು ಬಿಟ್ಟೆ – ಗೋರಿಯ ಮುಂದೆ ನೆನಪಿನ‌ ಕಣ್ಣೀರು ಮೌನ ವೇದನೆ – ನಿನ್ನ ಸಾವಿಗೆ ನಾನೇ ಕಾರಣವೆಂದು ಧರೆ ಗುಡಗಿತು – ನನ್ನ…

ಅನುದಿನ ಕವನ-೧೯೭೦, ಹಿರಿಯ ಕವಿ: ಎಂ. ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ:ಕಪ್ಪು ಹುಡಿಗಿಗೆ….

ಕಪ್ಪು ಹುಡಿಗಿಗೆ…. ಕಪ್ಪು ಹಲಗೆ ವರ್ಣ- ಮಾಲೆ ಕಲಿಸಿತು. ವರ್ಣ-ಆಶ್ರಮ ಜಾತಿಯ ವಿಷಬೀಜ ಬಿತ್ತಿ; ಕಪ್ಪುಜನರ ದೂರವಿಟ್ಟಿತು. ಕಪ್ಪುಹಲಗೆಯ ಮೇಲೆ ಬಿಳಿ ಅಕ್ಷರ ಮೂಡಿತು, ಎದೆಯೊಳಗೆ ಬೀಜಬಿದ್ದು ಮೊಳೆಯಿತು ಅ-ಕ್ಷರದ ಬೇಲಿ- ಮೇಲೆ ನೂರು ಹೂ… ಹೂವ ಕಂಪಿಗೆ ಯಾವ ಜಾತಿ,…

ಅನುದಿನ ಕವನ-೧೯೬೯, ಕವಯತ್ರಿ: ಡಾ.ಮುಮ್ತಾಜ್ ಬೇಗಂ, ಗಂಗಾವತಿ

ಪ್ರೀತಿಯನ್ನು ಉಳಿಸಿಕೊಳ್ಳಲು ಹೆಚ್ಚೇನು ಬೇಕಿತ್ತು ನಮಗೆ? ಮನಸ್ಸಿನ ಮುಂದೆ ಎದುರಾದ ಗೊಂದಲದೊಂದಿಗೆ ಮಾತಾಡಿ ಮುನಿಸು ಮನ್ನಿಸಿಕೊಳ್ಳಬೇಕಿತ್ತೊಮ್ಮೆ ಎದೆಯ ಗಾಯಕ್ಕೆ ಮಾತಿನ ಮೊನೆ ಮೊನಚಿಂದ ತಿವಿದುಕೊಳ್ಳದೇ ಹಗುರಾಗುವ ಹಾಡು ಹಾಡಬೇಕಿತ್ತೊಮ್ಮೆ ಹುಸಿ ಮುನಿಸಿಗೆ ಕಣ್ಣಂಚು ತೇವಗೊಳ್ಳದಂತೆ ಪ್ರತಿ ಉಸಿರು ನಮ್ಮಿಬ್ಬರ ಹೆಸರು ಹೇಳುತ್ತಿದ್ದಾಗ…

ಅನುದಿನ ಕವನ-೧೯೬೮, ಹಿರಿಯ ಕವಿ: ಚಿಂತಾಮಣಿ ಕೊಡ್ಲೆಕೆರೆ, ಉತ್ತರ ಕನ್ನಡ, ಕವನದ ಶೀರ್ಷಿಕೆ:

ನಿಮ್ಮ ಕವಿತೆ ನಿಮ್ಮ ಜೊತೆಗೆ… ನಿಮ್ಮ ಕವಿತೆ ನಿಮ್ಮ ಜೊತೆಗೆ ಇಟ್ಟುಕೊಳ್ಳಿರಿ    ಬಿಗುಮಾನವ ತೊರೆದು ಒಳಗೆ ಬಿಟ್ಟುಕೊಳ್ಳಿರಿ          ಒದ್ದೆ ತಲೆಯ ಒರೆಸುವಾಗ ಹೇಳಿಕೊಳ್ಳಿರಿ      ನಿಮ್ಮನಗಲಿ ಹೋಗದಂತೆ ಕೇಳಿಕೊಳ್ಳಿರಿ ಬೆಳಗು ಬಾನಿನಲ್ಲಿ ನಿಮ್ಮ…