ಇಂದು 75 ವರ್ಷಗಳನ್ನು ಪೂರೈಸಿದ…. ಅಣ್ಣ(ಅಪ್ಪ)ನ ಜೊತೆ ಒಂದಿದಿಷ್ಟು ಪ್ರೀತಿಯ ಹೊತ್ತು… ಈ ಪದಗಳ ಕಾಣಿಕೆ ಇತ್ತು…. ಅಪ್ಪಿ ನಿಂತಾಗ…. ಅಪ್ಪನ ಹುಟ್ಟು ಹಬ್ಬವಾದ ಸಂಭ್ರಮ….. ಮೈ ಮನಸಿಗೆಲ್ಲಾ! ಅಪ್ಪ…. ಬದುಕಿನ ಆಗುಹೋಗುಗಳ ಮಧ್ಯೆ ಸ್ಥಿರವಾಗಿ ನನ್ನೊಳಗೆ ಬೇರೂರಿ ನನಗೆ ಸಮಯಕ್ಕಾಗುವ…
Category: ಅನುದಿನ ಕವನ
ಅನುದಿನ ಕವನ-೧೪೯೭, ಹಿರಿಯ ಕವಿ: ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ:ಅವರೆಕಾಳು ಸಾರು V/s ಕವಿತೆ…
ಅವರೆಕಾಳು ಸಾರು V/s ಕವಿತೆ… ಲಯ ತಪ್ಪಿ ಮೂಲೆಯಲ್ಲಿ ಕುಳಿತ ಕವಿತೆಯ ಮುಂಗೈ ಹಿಡಿದು ಅವಳು ಅಡುಗೆ- ಮನೆಗೆ ಕರೆದೊಯ್ದಳು. ಹೊಲದಲ್ಲಿ ಬಿಡಿಸಿ ತಂದು ಆಗತಾನೆ ಸುಲಿದ ಸೊಗಡಿನ ಅವರೆಕಾಳಿನ ಸಾರು ಕೊತಕೊತ ಕುದಿಯುತ್ತಿತ್ತು. ಅವಳ ಮೂಗು ಅವಳಿಗೆ ಏನು ಹೇಳಿತೋ;…
ಅನುದಿನ ಕವನ-೧೪೯೬, ಕವಿ: ಟಿ.ಪಿ.ಉಮೇಶ್ ಹೊಳಲ್ಕೆರೆ, ಚಿತ್ರದುರ್ಗ ಜಿ, ಕವನದ ಶೀರ್ಷಿಕೆ: ನೀ…ಚಳಿ!
ನೀ… ಚಳಿ! ಚಳಿಯಲ್ಲೆೇ ನೆನಪಾಗಿ; ಬೇಕಿನಿಸುವುದು ಭರ್ಜರಿ ನಿನ್ನ ಸಿಟ್ಟಿನ ಬೇಸಿಗೆ! ** ಬಿಸಿಲು ಬೆವರಿಳಿಸಿ ಚಳಿಗೆ ಸುಖ ನಿದ್ದೆ; ನಿನ್ನ ಬೆಚ್ಚನೆಯ ಪ್ರೀತಿ ನೆನಪುಗಳಲಿ! ** ಬೇಸಿಗೆ ಕಾವು; ಮಳೆಯ ಮಾಗು; ಚಳಿಯ ಚಿಗುರು! ** ಬೇಸಿಗೆಯಲಿ ವಿರಾಮ; ಮಳೆಯಲ್ಲಿ…
ಅನುದಿನ ಕವನ-೧೪೯೫, ಕವಿ: ಜಬೀವುಲ್ಲಾ ಎಮ್. ಅಸದ್, ಬೆಂಗಳೂರು, ಕವನದ ಶೀರ್ಷಿಕೆ: ನೀನಲ್ಲವೇ ಸೂಫಿ
ನೀನಲ್ಲವೇ ಸೂಫಿ ಕವಿದ ಕತ್ತಲ ಕುರುಡು ಹಾದಿಯಲಿ ದಾರಿ ತೋರುವ ಬೆಳಕ ಮನದ ಮೋಹಿ ನೀನಲ್ಲವೇ ಸೂಫಿ ಕೆಂಡವ ಮುಚ್ಚಿದ ಬೂದಿಯ ಸರಿಸಿ ಸತ್ಯವ ಸಾಕ್ಷಾತ್ಕರಿಸುವ ದೇಹಿ ನೀನಲ್ಲವೇ ಸೂಫಿ ಬದುಕು ಹಿಂಡುವ ನೋವನು ನಗೆಯ ಹಾಡಾಗಿಸುವ ರಾಹಿ ನೀನಲ್ಲವೇ ಸೂಫಿ…
ಅನುದಿನ ಕವನ-೧೪೯೪, ಕವಿ: ಮನಂ, ಬೆಂಗಳೂರು, ಕವನದ ಶೀರ್ಷಿಕೆ: ಕಾಯಬೇಕು
ಕಾಯಬೇಕು ಚೊಲೊದ್ದು , ಲಗೂನ ಸಿಗಂಗಿಲ್ಲ್ಯಾಕ? ಕೆಟ್ಟದ್ದು , ಲಗೂನ ಸಿಗತೈತ್ಯಾಕ? ದೊಡ್ಡಮನಿ, ಲಗೂನ ಸಿಗಂಗಿಲ್ಲ್ಯಾಕ? ಫೂಟ್ಪಾತ್, ಲಗೂನ ಸಿಗತೈತ್ಯಾಕ? ಊಟ, ಲಗೂನ ಸಿಗಂಗಿಲ್ಲ್ಯಾಕ? ಕುರುಕಲು, ಲಗೂನ ಸಿಗತೈತ್ಯಾಕ? ಚಂದನಮೈ, ಲಗೂನ ಸಿಗಂಗಿಲ್ಲ್ಯಾಕ? ಕೆರಕೊಳಾಕ ತಿಂಡಿ, ಲಗೂನ ಸಿಗತೈತ್ಯಾಕ? ಸುಂದರಿ, ಲಗೂನ…
ಅನುದಿನಕವನ-೧೪೯೩, ಹಿರಿಯ ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ:ಪೂರ್ಣಚಂದ್ರ ಹಾಡು ಹಾಡಿದ
ಪೂರ್ಣಚಂದ್ರ ಹಾಡು ಹಾಡಿದ ಮುಗಿಲಿನ ಬಯಲಾಗ ಕವಿದ ಕತ್ತಲು ಗಾಢ ಹೊದಿಕಿ ಹೊದಿಸಿ ಸುಮ್ಮ ನಿಂತಿತ್ತ ಕವಿದ ಕತ್ತಲ ಎದೆಯ ಸೀಳಿ ಚಂದಿರ ಬಂದಿದ್ದ ಸುತ್ತ ಮುತ್ತ ನೋಡಿದ್ದ ಕಳ್ಳ ನಗೀ ನಕ್ಕಿದ್ದ ತಿಂಗಳನ್ಬೆಳಕು ಚಿಗುರಿ ಅಲ್ಲಿ ಚೇತರಿಕಿ ತಂದಿತ್ತ ಬಾನೆತ್ತರಕ…
ಅನುದಿನ ಕವನ-೧೪೯೨, ಕವಯಿತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ: ಮೌನ
ಮೌನ ಮೌನವೊಂದು ಮೈಗೂಡಿಸಿಕೊಂಡೆ ನಾ ಮೂರ್ಖ ಜನರೆದುರು ಮಾತನಾಡಿ ಮಾತಿನ ಮೌಲ್ಯ ಕಳೆಯಬಾರದೆಂದು. ಮೌನವೊಂದು ಮೈಗೂಡಿಸಿಕೊಂಡೆ ನಾ ಭಾವನೆಗಳನು ಅರ್ಥಮಾಡಿಕೊಳ್ಳದ ಜನರೆದುರು ಮಾತಾಡಿ ಮತಿಹೀನಳೆನಿಕೊಳಬಾರದೆಂದು. ಮೌನವೊಂದು ಮೈಗೂಡಿಸಿಕೊಂಡೆ ನಾ ಮುಖವಾಡದ ಜನರೆದುರು ಸುಳ್ಳಿನ ಕಂತೆಯೊತ್ತು ನಟಿಸಲುಬಾರದೇ ನಗೆಪಾಟಲಿಗಿಡಾಗಬಾರದೆಂದು ಮೌನವೊಂದು ಮೈಗೂಡಿಸಿಕೊಂಡೆ ನಾ…
ಅನುದಿನ ಕವನ-೧೪೯೧, ಚಿತ್ರ ಮತ್ತು ಕವನ:ತಮ್ಮಣ್ಣ ಬೀಗಾರ, ಸಿದ್ದಾಪುರ, ಉತ್ತರಕನ್ನಡ, ಕವನದ ಶೀರ್ಷಿಕೆ: ಮಗುವಾಗಿ ಬಿಟ್ಟ
ಮಗುವಾಗಿ ಬಿಟ್ಟ ಗಾಂಧಿ ಅಜ್ಜನ ಫೋಟೋ ಅಲ್ಲಿ ಇಟ್ಟಿದ್ರಪ್ಪ ಹಾಗೆ ಹೂಗಳ ಮಾಲೆ ಎಲ್ಲ ತಂದು ತುಂಬಿದ್ರಪ್ಪ ಹೀಗೆ ಹಣ್ಣು ಬೆಲ್ಲ ಇಟ್ಟಿದ್ರಲ್ಲಿ ಘಮ ಘಮ ಕಡ್ಡಿಯ ಕಂಪು ಪುಟ್ಟ ಹಾಗೇ ನೋಡ್ತಾ ಇದ್ದ ಹತ್ತಿತು ಅವನಿಗೆ ಜೊಂಪು ಹಣ್ಣು ಹೂವು…
ಅನುದಿನಕವನ-೧೪೯೦, ಹಿರಿಯ ಕವಿ: ಶಿವಸುಂದರ್, ಬೆಂಗಳೂರು, ಕವನದ ಶೀರ್ಷಿಕೆ: ಗೌರಿ
ಗೌರಿ ತಮಂಧದ ಘನವು ಜಗವ ಆವರಿಸುವಾಗ ಲೋಕದುರಿಗೆ ತೆತ್ತುಕೊಂಡು.. ಬೇಯುತ್ತಾ ಬೇಯುತ್ತಾ ಬೆಳಕಾದವಳಲ್ಲವೇ ಗೌರಿ…? ಬಹಿರಂಗದ ಬೆಂಕಿಯಲ್ಲಿ ಅಂತರಂಗದ ಹಿಮಕರಗಿದಾಗ ಉಕ್ಕಿಹರಿದ ಮಮಕಾರದಲ್ಲಿ ರೂಪುಗೊಂಡ ರೂಹಲ್ಲವೇ ಗೌರಿ…? ಹೊರಗಿನ ಬಿರುಗಾಳಿಗೆ ಒಳಗಿನ ಸುಳಿಗಾಳಿಗೆ.. ಒಡಲ ಸೊಡರು ಆರದಂತೆ ದೀಕ್ಷೆತೊಟ್ಟ ದೀವಟಿಗೆಯಲ್ಲವೇ ಗೌರಿ?…
ಅನುದಿನ ಕವನ-೧೪೮೯, ಕವಯತ್ರಿ: ಎಚ್. ಎಸ್. ಮುಕ್ತಾಯಕ್ಕ, ರಾಯಚೂರು
ನನ್ನ ಜನುಮದಿನಕ್ಕೆ ನಾನು ನನಗಾಗಿ ಬರೆದ ನನ್ನ ಮನಸ್ಸಿಗೆ ಹೊಳೆದ ಕವಿತೆ ಇದು ನಿಮ್ಮ ಓದಿಗಾಗಿ -ಎಚ್.ಎಸ್. ಮುಕ್ತಾಯಕ್ಕ ಮುಂಜಾನೆ ಕವಿತೆ ನನಗೊಂದು ಕೆಂಪು ಗುಲಾಬಿಯ ಕೊಡುತ್ತ ಹೇಳಿತು, “ಇಂದು ನಿನ್ನ ಜನುಮದಿನ ನಿನಗೇನು ಬೇಕು?” “ನನಗೇನು ಬೇಕು” ನಾನು ಮೌನವಾದೆ…