ಬುದ್ಧ… ಈಗಾ ಎಲ್ಲರ ಮನೆಗೆ ನೀನು ಧಾರಾಳವಾಗಿ ಬಂದು ಕೂರುತ್ತಿರುವೆ ಪ್ರಶಾಂತವಾಗಿ ಎಲ್ಲ ಧ್ಯಾನಿಸುವುದ ಕಲಿತಿದ್ದಾರೆ… ನಾಕು ಗೋಡೆಯ ನಡುವಿದ್ದ ಎಂತದ್ದೊ ಕನಸು ಈಗಾ ನಯ ನಾಜೋಕಾಗಿ ನಕುಕಿಂದ ನಸುಕಿಗೆ ಮೇಳೈಸುತ್ತು ಹುಣ್ಣಿಮೆಗೆ ಕನ್ನಡಿ ಹಿಡಿದು ಜನ ಮನೆ ಶುದ್ಧ ಮಾಡಿ…
Category: ಅನುದಿನ ಕವನ
ಅನುದಿನ ಕವನ-೧೬೬೩, ಕವಿ: ರವಿಕುಮಾರ್ ಟೆಲೆಕ್ಸ್, ಶಿವಮೊಗ್ಗ ಕವನದ ಶೀರ್ಷಿಕೆ: ದೇವದಾಸಿಯ ಸ್ವಗತ
ದೇವದಾಸಿಯ ಸ್ವಗತ ನನ್ನ ನರಗಳ ಹೊಸೆದು ಬತ್ತಿ ಮಾಡಿ ಒಡಲ ನೆಣ ಬಸಿದು ದೀಪ ಹಚ್ಚಿದ್ದೇನೆ ಕುರುಡು ದೇವರ ಅಂತಃಪುರಕೆ ದೇವಾನುದೇವತೆಗಳು ನನ್ನ ತೊಗಲ ತಿಂದು ಕಣ್ಣೀರು ಕುಡಿದು ಸ್ವರ್ಗ ಸೇರುತ್ತಾರೆ ನರಕ ನನಗಷ್ಟೇ ; ಇಲ್ಲಿ ಹೂ ಗಳೂ ನರಳುತ್ತವೆ…
ಅನುದಿನ ಕವನ-೧೬೬೨, ಹಿರಿಯ ಕವಿ: ಶಿವೈ(ವೈಲೇಶ.ಪಿ.ಎಸ್.), ಕೊಡಗು
ಮೋಜಿನಾಟವಿದಲ್ಲ ರಾಜನಂತೆಯೆ ಮೆರೆಯೆ ಭೋಜನವ ಕೂಡಿಡಲು ಸಾಧ್ಯವೇನಿಲ್ಲಿಲ್ಲ ಭಾಜನವು ಸಂಸಾರ ಸಾಗರದ ನಿರ್ವಹಣೆ ಗೀಜಗದ ಗೂಡಂತೆ ಮಾಡೊಂದು ನಮಗಿರಲು ಅಕ್ಕಪಕ್ಕದಿ ನೋಡಿ ರೆಕ್ಕೆಯಗಲಿಸಿ ತಾನು ಸಿಕ್ಕಿ ಸಿಕ್ಕಿದ ಹುಲ್ಲು ಕಡ್ಡಿ ಗುಡ್ಡೆಯ ಮಾಡಿ ಕೊಕ್ಕಿನಿಂದಲಿ ಹೆಕ್ಕಿ ಸಿಕ್ಕಿಸುತೆ ಜೋಪಾನ ಹಕ್ಕಿಗಾಯಿತು ನೋಡಿ…
ಅನುದಿನ ಕವನ-೧೬೬೧, ಕವಿ: ಡಾ. ನಾಗೇಶ್ ಮೌರ್ಯ, ಹೊಸಕೋಟೆ
ಘನ ಶರಣ ನಿಜ ಶರಣ ನಮ್ಮ ಬಸವಣ್ಣ ಸತ್ಯ ಶರಣ…… ನಿತ್ಯ ಶರಣ…… ಅಣ್ಣ ಬಸವಣ್ಣ ಕಳಬೇಡ ಕೊಲಬೇಡವೆಂದ ಜ್ಞಾನಿ ಶರಣ ಜಾತಿಬೇದ ವರ್ಣಬೇದ ಮಾಡದ ಕಲ್ಯಾಣ ಶರಣ ಅಂತರ್ಜಾತಿ ವಿವಾಹ ಮಾಡಿಸಿದ ಶೂರ ಶರಣ ಸಕಲ ಜಾತಿಗಳಿಗೂ ಲಿಂಗಧೀಕ್ಷೆ ನೀಡಿದ…
ಅನುದಿನ ಕವನ-೧೬೬೦, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ: ಬೊಮ್ಮ…. ಕೇಳಲೇ ಬೇಕು ನಿನ್ನ
ಬೊಮ್ಮ….. ಕೇಳಲೇ ಬೇಕು ನಿನ್ನ! ಬೊಮ್ಮ… ಒಪ್ಪಲೇಬೇಕು ನೀನೊಬ್ಬ ಅದ್ಭುತ ಚಮತ್ಕಾರೀ ಕಲಾವಿದ ಅಸಂಖ್ಯ ಕಲಾಕೃತಿಗಳು ವಿಶಿಷ್ಟ ಒಂದೊಂದೂ ವಿಭಿನ್ನ ವಿಚಿತ್ರ ಬೊಮ್ಮ.. ನಿನ್ನ ಕೇಳಲೇ ಬೇಕು ಇದನ ಸೃಷ್ಟಿಸಲು ಒಂದು ಹೆಣ್ಣನ್ನು ತಗೊಂಡೆ ಅದೆಷ್ಟು ವೇಳೆ ಮೇಳೈಸಿ ಕೊಂಡೆ ನಿನ್ನೆದೆಯಲ್ಲಿ…
ಅನುದಿನ ಕವನ-೧೬೫೯, ಯುವ ಕವಿ: ವಿಶಾಲ್ ಮ್ಯಾಸರ್, ಹೊಸಪೇಟೆ
ಮರ ಗಿಡಗಳಲ್ಲಿ ಅದೆಷ್ಟು ಎಲೆ ನಿನ್ನದಾದರೆ ಕತೆ ನನ್ನದಾದರೆ ಕವಿತೆ ಲೋಕದ್ದಾದರೆ ನಡುವೆ ಗೀಚಿದ ರೇಖೆ ಒಳಗಿನ ಚಿತ್ರದ ಬಣ್ಣ ಕಣ್ಣೀರು ಕಣ್ಣೀರ ಒಳಗೆ ಆ ಕೊನೆಯ ಗಳಿಗೆ ತುಂಬಿ ತುಂಬಿ ದುಃಖ ಕುಡಿಯುವಾಗ ಹೆಜ್ಜೆ ಗುರುತೆಲ್ಲ ನೆನಪ ಹಾಡು ಬೊಗಸೆ…
ಅನುದಿನ ಕವನ-೧೬೫೮, ಕವಿ: ಶ್ರೀ…..ಬೆಂಗಳೂರು,
ನಸು ನಾಚಿಯಿಂದಲೆ ಸಮ್ಮತಿಯಿಟ್ಟ ಕಾಲ್ಬೆರಳ ಸುತ್ತ ಪ್ರದಕ್ಷಿಣೆ ಹಾಕಿ ಬಂದ ಉಂಗುರ ನಾನು . ಏಳೇ ಏಳು ಹೆಜ್ಜೆ ಅಷ್ಟರಲ್ಲೆ ನಾನೆಲ್ಲಾದರೂ ಕಳೆದುಹೋದರೆ ? ಎಂಬ ಧಾವಂತದಲ್ಲಿ ನನ್ನ ಕಿರುಬೆರಳಿಡಿದು ನಡೆಸಿದ ಕೈಗಳಲ್ಲಿನ ಬಳೆಯ ನಾದ ನಾನು . ಕೊರಳ ಸುತ್ತಿ…
ಅನುದಿನ ಕವನ-೧೬೫೭, ಕವಿ:ಸಿದ್ದು ಜನ್ನೂರು, ಚಾಮರಾಜನಗರ, ಕವನದ ಶೀರ್ಷಿಕೆ: ಅವಳು ಮಾತು ಮುಗಿಸುವುದಿಲ್ಲ…
ಅವಳು ಮಾತು ಮುಗಿಸುವುದಿಲ್ಲ… ಅಂಗಳದ ಹಕ್ಕಿಗಳಿಗೆ ಕಾಳುಗಳನ್ನಿಟ್ಟು ಮಾತಿಗೆಳೆಯುತ್ತಾಳೆ ಹಕ್ಕಿ ಹಾರುವವರೆಗೆ ಮಾತು ಮುಂದುವರೆಯುತ್ತದೆ… ಎದೆಯಂಗಳಕ್ಕೆ ಮಾತಿನ ಕಾಳುಗಳ ತಡವಿಲ್ಲದೆ ಸರಾಗವಾಗಿ ಎಸೆಯುತ್ತಾಳೆ ಗುಬ್ಬಚ್ಚಿ ಆಗಸಕ್ಕೆ ಹಾರಿ ಕೊಕ್ಕಲ್ಲಿ ಸಿಕ್ಕಿಕೊಂಡ ಕಾಳುಗಳ ತನ್ನ ಮರಿಗಳಿಗೆ ಗುಟುಕನಿಕ್ಕಲು ಜಿಗಿದು ನೇರಾನೇರ ಹಾರಿ ಹೋಗುವ…
ಅನುದಿನ ಕವನ-೧೬೫೬, ಕವಿ: ಲೋಕಿ, ಬೆಂಗಳೂರು
ವಿಸ್ತಾರಗೊಳ್ಳದಿರಲಿ ನೋವುಗಳ ಸರಮಾಲೆ ಒಳಹೊಕ್ಕು ನೋಡುವವರ ಸಂಖ್ಯೆ ವಿರಳವಾಗುತ್ತಿರುವಾಗ ಹೆಗಲಿನ ಸಮಾಧಾನಕಿಲ್ಲಿ ಮರು ಹೊಂದಾಣಿಕೆ ಎಂದಿಗೂ ಸಮಾಧಾನವಿಯ್ಯದು ಅರಿತವರು ಸಾವಿರ ಮೈಲಿ ದೂರವಿದ್ದರೂ ಅವರಷ್ಟೇ ಮಾತನಿತ್ತರೆ ಅದೇನೋ ಸಮಾಧಾನ -ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ಅನುದಿನ ಕವನ-೧೬೫೫, ಕವಿ: ಎ ಎಂ ಪಿ ವೀರೇಶಸ್ವಾಮಿ, ಹೊಳಗುಂದಿ, ಕವನದ ಶೀರ್ಷಿಕೆ: ಆ ಮನೆ….ಈ ಮನೆ.
ಆ ಮನೆ….ಈ ಮನೆ. ಆ ಮನೆಯ ತಂಗಾಳಿ ಈ ಮನೆಗೆ ಈ ಮನೆಯ ಹೊಂಬೆಳಕು ಆ ಮನೆಗೆ ಸೋಂಕಲು ಸಂಧಿಸಲೊಂದು ಸಣ್ಣ ಸಂಧಿ ಮನೆ ಮನಗಳ ಭಾದವ್ಯದ ಮಹಾ ಸಂಧಿ ಆ ಮನೆಯ ಬೆಲ್ಲ ಬೇಳೆ ಬೆಣ್ಣೆಯು ಈ ಮನೆಯಲಿ ಹೋಳಿಗೆ…