ಅನುದಿನ‌ ಕವನ-೬೩೦, ಕವಯತ್ರಿ: ಪಾರ್ವತಿ ಸಪ್ನ, ಬೆಂಗಳೂರು ಕವನದ ಶೀರ್ಷಿಕೆ: ನೆನಪುಗಳು

ನೆನಪುಗಳು ಕಾಡುತ್ತಾವ ನೆನಪುಗಳು ಬಾಡಿಹೋದ ಹೂವಿನ ಕರಗಿಹೋದ ಗಂಧದೊಳು ಕ್ಷಣಕಾಲ ಮಿಂದೆದ್ದ ಇಬ್ಬನಿಯ ಹನಿಯಂತೆ ಕಾಡುತ್ತಾವ ನೆನಪುಗಳು…!! ಹಾಡುತ್ತಾವ ನೆನಪುಗಳು…. ಮನದ ಮೂಲೆಯಲ್ಲಿ ನಿಂದು ವಿರಹದ ಉರಿಯಲಿ ಬೆಂದು ಮಾತುಮೌನ ಜೊತೆಯಲೇ ತಂದು ಹಾಡುತ್ತಾವ ನೆನಪುಗಳು….!! ಬೇಡುತ್ತಾವ ನೆನಪುಗಳು… ಜೋಡಿ ಕಣ್ಣ…

ಅನುದಿನ‌ಕವನ-೬೨೯, ಕವಿ: ಎಲ್ವಿ (ಡಾ. ಲಕ್ಷ್ಮಣ‌ ವಿ.ಎ) ಬೆಂಗಳೂರು

ಗೆಳತಿ ಅವಳು ಲೋಕ ಎಳೆದ ಸರಹದ್ದು ಮೀರಬೇಡ ಎನ್ನುತ್ತಾಳವಳು ನಾನು ರೆಕ್ಕೆ ಸುಟ್ಟುಕೊಂಡ ಪಾರಿವಾಳ, ಎಲೆಕ್ಟ್ರಿಕ್ ಬೇಲಿ ಹಾರಿ ಬರುವವ ಅವರವರ ಕನ್ನಡಕಗಳ ನೋಟಕೆ ಸರಿಯಾಗಿ ಎಳೆದಂತೆ ಕಾಣುವ ನೇರ ಗೆರೆಗಳು ನನಗೆ ಒಪ್ಪಿತವಿಲ್ಲ ಅಸಲು ನನಗೆ ಗಡಿಗಳೇ ಇಲ್ಲ ಆಗಸದಲ್ಲಿ…

ಅನುದಿನ‌ ಕವನ-೬೨೮, ಕವಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು, ಕವನದ ಶೀರ್ಷಿಕೆ:ನಡೆವ ಕಾಲಿಗೆ ತಡೆಬೇಲಿ;ಹಾರುವ ರೆಕ್ಕೆಗಲ್ಲ

ನಡೆವ ಕಾಲಿಗೆ ತಡೆಬೇಲಿ;ಹಾರುವ ರೆಕ್ಕೆಗಲ್ಲ ರೆಕ್ಕೆಗಳಿರುವುದೇ ಹೂವಿಂದ ಹೂವಿಗೆ ಹಾರಿ ಮಕರಂದ ಹೀರಿ ಸುಖಿಸಲು; ಮತ್ತೆ ಮತ್ತೆ ಹೊಸ ಹೂವು ಹೊಸ ಸುಖ.ಇದನ್ನೇ ಕಂಡದ್ದು,ಕಂಡದ್ದೇ ನಂಬಿದ್ದು.ಹಾರುವ ದುಂಬಿಗಷ್ಟೇ ಗೊತ್ತು, ಹೊಸಹೊಸತಾಗಿ ಅರಳುವ,ಅರಳಿ ಆಹ್ವಾನಿಸುವ ಹೂಗಳಿಗೇನು ಬರ? ತೋಟ ಸದಾ ಸಮೃದ್ಧ. ಬಾಡಿರುವ…

ಅನುದಿನ‌ ಕವನ-೬೨೭, ಕವಿ:ನಾಗತಿಹಳ್ಳಿ ರಮೇಶ್, ಬೆಂಗಳೂರು

ದುಃಖದ ಕಣ್ಣುಗಳಲಿ ಉರಿಯುತಿವೆ ಉಲ್ಕೆಗಳು ಯಾರು ಬೆಳೆವರೋ ಇಲ್ಲಿ ಪುಟ್ಟ ಹೂವೊಂದನ್ನು ಹೊಸ ನಾರಿನಿಂದ ಹೆಣೆವರೋ ನೇಣು ಹಗ್ಗಗಳನ್ನು ಸಾಗಿದೆ ದಾರಿ ಹಗಲೊಳಗೆ ತಲೆಯಿಟ್ಟು ಇರುಳೊಳಗೆ ಕಾಲು ಚಾಚೀ ಹಾದಿಗೆ ಮುಳ್ಳ ನೆಡುವವರ ಸಂತಾನ ಬೆಳೆಯುತಿದೆ ಕತ್ತಲಲಿ ಬೆಳಕಿನ ಬೀಜವ ಬಿತ್ತುವ…

ಅನುದಿನ ಕವನ-೬೨೬, ಕವಯತ್ರಿ:ರಂಹೊ(ರಂಗಮ್ಮ ಹೊದೇಕಲ್), ತುಮಕೂರು ಕವನದ ಶೀರ್ಷಿಕೆ:ಗಾಯ

ಗಾಯ…..! ಗಾಯಗಳನ್ನು ಸುಖಿಸುವುದು ಅಭ್ಯಾಸವಾಗಬಾರದು ಲೋಕದ ಹಿಡಿಯಲ್ಲಿ ಸದಾ ಉಪ್ಪೇ! ಗಾಯ ಸಲೀಸಾಗಿ ಮಾಯುವುದಿಲ್ಲ! ಹಾಗಂತ ವ್ರಣವಾಗಲು ಬಿಡಲೇಬಾರದು! ಗಾಯ ಯಾರೂ ಮಾಡಬಹುದು ಅವರೆಡೆಗಿಷ್ಟು ಕರುಣೆಯ ಪಾಲಿರಲಿ! ಗಾಯಗಳನ್ನು ಪಾಲು ಮಾಡಲಾಗದು ಮದ್ದು ತರುವ ಎದೆಗಳನ್ನು ಸಂಭ್ರಮಿಸಬೇಕು! ಈ ಗಾಯಗಳು ಆತ್ಮದ…

ಅನುದಿನ ಕವನ-೬೨೫, ಕವಿ: ಲೋಕಿ (ಲೋಕೇಶ್ ಮನ್ವಿತ), ಬೆಂಗಳೂರು

ನೀ ಆವರಿಸುವ ಒಂದು ಸುಳಿವು ಸಿಗಲಾರದೇ ಬದುಕು ದೂಡುತ್ತಿದ್ದೆ ಕೊನೆಯ ದಿನವೆಂಬಂತೆ ಸಾಗುತ್ತಿದ್ದ ಹಾದಿಯಲ್ಲಿ ಕಾಣದೊಂದು ತಿರುವಿನಲ್ಲಿ ಕಂಡ ಹೂವು ನೀನು ಕಾಲಿಗಿನ್ನು ಚಲಿಸುವ ದೌರ್ಬಲ್ಯ! ಸಂಪರ್ಕ ಕಳೆದು ಕೊಂಡಿದ್ದ ರಸ್ತೆಗಿಲ್ಲಿ ಮತ್ತೇ ಮೈಲುಗಲ್ಲಿನ ಭಾಗ್ಯ ಕಪ್ಪನೆಯ ಡಾಂಬಾರು ಬಳಿದುಕೊಂಡ ಎದೆಯ…

ಅನುದಿನ ಕವನ-೬೨೪, ಕವಯತ್ರಿ: ಡಾ.ವಾಣಿಶ್ರೀ, ಕಾಸರಗೋಡು, ಕವನದ ಶೀರ್ಷಿಕೆ: ಬವಣೆಗಳ‌ ಬದುಕು

ಬವಣೆಗಳ ಬದುಕು ಮನುಜನ ಬದುಕಿನಲಿ ಬವಣೆಗಳು ನೂರಾರು ಪರಿಹಾರದ ಸೂತ್ರಗಳ ಭಾವನೆಗಳು ಹಲವಾರು ಬವಣೆಯ ಕಳೆಯಲು ಭಾವನೆಗಳ ಹೂಡುವರು ಮನದಲಿ ತುಂಬಿರುವ ದುಗುಡವ ಮರೆಯುವರು ಬರುವುದು ಕಷ್ಟಗಳು ಸಹಜ ಇಷ್ಟದಿಂದ ಸ್ವೀಕರಿಸಿ ಎದೆಗುಂದದೆ ಮುನ್ನಡೆದು ಧೈರ್ಯದಿ ಎದುರಿಸಿ ಮುಂದಿರುವುದು ಸುಖವೆಂದು ತಿಳಿದು…

ಅನುದಿನ ಕವನ-೬೨೩, ಕವಿ: ಎ.ಎನ್.ರಮೇಶ್ ಗುಬ್ಬಿ, ಕವನದ ಶೀರ್ಷಿಕೆ: ಒಲವು..!

“ಇದು ಪ್ರಾಂಜಲ ಅನುರಾಗದ ಅನಾವರಣದ ಕವಿತೆ. ನಿಜ ಒಲವಿನ ರಿಂಗಣಗಳ ಭಾವಗೀತೆ. ಇಲ್ಲಿ ಪ್ರೇಮದ ಆಂತರ್ಯದ ಅನನ್ಯ ಸೌಂದರ್ಯವಿದೆ. ಪ್ರೀತಿಯ ಸುಸ್ವರಗಳ ಅಪೂರ್ವ ಮಾಧುರ್ಯವಿದೆ. ಅಷ್ಟಕ್ಕೂ ನಿಜವಾದ ಪ್ರೀತಿಯೆಂದರೆ ತ್ಯಾಗದ ಅಮೂರ್ತ ರೂಪ. ನಿಸ್ವಾರ್ಥದ ದಿವ್ಯದೀಪ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.…

ಅನುದಿನ ಕವನ-೬೨೨, ಕವಯತ್ರಿ:ಡಾ.ಸಿ. ನಂದಿನಿ, ಬೆಂಗಳೂರು, ಕವನದ ಶೀರ್ಷಿಕೆ: ಕಥೆ ಮುಗಿದ ಸಮಯ

ಕಥೆ ಮುಗಿದ ಸಮಯ ಕಥೆಗಳ ಪಾತ್ರಗಳಿಗೆಲ್ಲಾ ಜೀವತಂತು ಹೆಣೆ ಹೆಣೆದು ಉಸಿರು ರವಾನಿಸಿ ಅವೆಲ್ಲಾ ಜೀವ ತುಂಬಿಕೊಳ್ಳುತಿರೆ ಹಡೆದು ಹಗುರಾದ ಅವ್ವನ ಮೊಗದ ತೃಪ್ತಿ ಪದ ಪದಗಳಲ್ಲೂ ಗೋಚರಿಸಿದ್ದು ಜೀವಲಹರಿ ಜೋಗಿಯ ಜೋಳಿಗೆ ತುಂಬಿ ಹೊಯ್ದಡಿತೇ ಕಥೆಯ ಪಾತ್ರಗಳ ಭಾರಕೆ ಅದ್ಯಾವ…

ಅನುದಿನ ಕವನ-೬೨೧, ಕವಯತ್ರಿ: ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಗೆಳೆತನ

ಗೆಳೆತನ ನಮ್ಮೊಳಗಿರುವ ಭಾವನೆಗಳು ನಮ್ಮದು ಮನಸ್ಸು ಬಲು ಮೃದು ಬಯಸುವ ಗೆಳೆತನ ಉಳಿಸಿಕೊಂಡು ತೋರಬೇಕು ನಮ್ಮತನ ನಮ್ಮಂತೆ ಇತರರೂ ಎಂದು ಭಾವಿಸುವುದು ಮೂರ್ಖತನ ಕೆಲವರಿರುವರು ಮೊದಲು ತೋರುವರು ಪ್ರೀತಿ ಆದರ ಅವರದೋ ಮುತ್ತುದುರಿಸುವಂತಹ ಅದರ ! ಉಕ್ಕಿ ಬರುವ ಹೊಸತನ ಮೋಡಿ…