ಪ್ರೀತಿ ಎಂದರೇನೆಂಬುದ ಈ ಲೋಕ ತಿಳಿಯದೇನೋ ಅದು ತಿಳಿದಾಗ ಬರಬಹುದು ಎಲ್ಲ ಹೃದಯಗಳಿಗೆ ಕಣ್ಣು ಎಲ್ಲೊ ಹುಟ್ಟಿ ಹರಿವ ನದಿಯು ಕಡಲ ಸೇರದೇನು ಭೋರ್ಗರೆದು ಮಿಲನಗೊಂಡು ಮೌನ ತಾಳದೇನು ಹಗಲು ರಾತ್ರಿ ಎದೆಯ ತೆರೆದು ಧರೆಯು ಕಾಯದೇನು ಮೇಲೆ ಮುಗಿಲು ಮೆತ್ತಗಾಗಿ…
Category: ಅನುದಿನ ಕವನ
ಅನುದಿನ ಕವನ-೧೯೬೬, ಕವಿ: ಎ.ಎನ್. ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ವಿಕರ್ಷಣೆ.!
“ಮಾತಿನ ಸುತ್ತ-ಮುತ್ತ ಹನಿ ಹನಿ ಮಿನಿಗವನ. ಮಾತು-ಮೌನಗಳ ನಡುವಿನ ಚಿತ್ತ-ಚಿತ್ತಾರಗಳ ಚಿಟ ಚಿಟ ಚುಟುಕು ಸಂಕೀರ್ತನ. ಮಾತಿನಿಂದಲೇ ರಾಗ-ವಿರಾಗ. ಮಾತಿನಿಂದಲೇ ಆಹ್ಲಾದ-ಆಕ್ರಂದ. ಮಾತು ಉಕ್ಕಿದರೆ ಭಾವಾಭಿವ್ಯಕ್ತಿ. ಮಾತು ಬತ್ತಿದರೆ ಭಾವಮುಕ್ತಿ. ಏನಂತೀರಾ..?” -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ. ವಿಕರ್ಷಣೆ.! ಮಾತಾಡಲು ಬಿಡುವಿಲ್ಲ ಎಂದರೆ……
ಅನುದಿನ ಕವನ-೧೯೬೫, ಕವಯತ್ರಿ: ಸಮುದ್ಯತಾ ಕಂಜರ್ಪಣೆ, ಬೆಂಗಳೂರು
ಕಾರಣವಿಲ್ಲದೇ ರಚ್ಚೆ ಹಿಡಿದು ಸಿಡುಕಾಡುವವಳಿಗೆ ಬೇಕಿರುವುದು ಸಾಂಗತ್ಯ, ಮೌನವಷ್ಟೇ.. ಅಕಾರಣದ ಪ್ರೇಮಿಯೊಬ್ಬ ಸಿಕ್ಕಿದ್ದಾನೆ, ದಕ್ಕಿಸಿಕೊಳ್ಳಬೇಕಿದೆ ಇನ್ನೂ.. ಹಗಲ ಹೆರಳಲ್ಲಿ ಮಲ್ಲಿಗೆಯಾದ ಇರುಳ ಘಮ ಪಸರಿಸುವಷ್ಟೇ ಸಲೀಸಾಗಿ ಹಿಡಿದಿದ್ದಾನೆ ಆಕೆಯ ನಾಡಿ ಮಿಡಿತ.. ಮಾತನಾಡುವ ಮುನ್ನ ಅರಿತಿದ್ದಾನೆ ಇರುವ ಕಾರಣಗಳನ್ನು ಆಕೆ…
ಅನುದಿನ ಕವನ-೧೯೬೪, ಹಿರಿಯ ಕವಿ: ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ: ಪಯಣ
ಪಯಣ ಮಿಂಚಬೇಕೆನ್ನಿಸಿದರೆ ಮಿಂಚಿಬಿಡು ನಗಬೇಕು ಅನ್ನಿಸಿದರೆ ನಕ್ಕಬಿಡು ನರ್ತಿಸಬೇಕೆಂದಿದ್ದರೆ ನರ್ತಿಸಿಬಿಡು ಹಾಡಬೇಕೆಂದಿದ್ದರೆ ಹಾಡಿಬಿಡು.. ಹೂವನ್ನರಸಿ ಹಾರುವ ದುಂಬಿಯಂದದಿ ಒಳ್ಳೆಯ ಮನಸುಗಳನ್ನರಸಿ ಹೊರಡು.. ಬೆರೆತವರೊಡನೆ ನಕ್ಕು ನಲಿದುಬಿಡು.. ಕ್ಷಣಿಕ ಬದುಕಿದು ನಡೆವ ಹಾದಿ ಯಾವಾಗ ಎಂದು ಎಲ್ಲಿ ಕೊನೆಗೊಳ್ಳುವುದೋ ಏನೋ.. ಆನಂದದಲ್ಲಿಯೇ ಮುಗಿದುಬಿಡಲಿ…
ಅನುದಿನ ಕವನ-೧೯೬೩, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಕಾಣೆಯಾಗಿದ್ದ ಕವಿತೆ ಕಾಫಿ ಕೆಫೆಯಲ್ಲಿ….
ಕಾಣೆಯಾಗಿದ್ದ ಕವಿತೆ ಕಾಫಿ ಕೆಫೆಯಲ್ಲಿ…. ಕವಿತೆ ಕಳೆದು ಹೋಗಿದೆ; ಮೊನ್ನೆ ದಿನ ಸಂಜೆ, ಸಣ್ಣಗೆ ಮಳೆ ಸುರಿಯುವಾಗ ನನ್ನ ಕೈಬೆರಳು ಹಿಡಿದು ಜತೆಜೊತೆಗೆ ಹೆಜ್ಜೆ ಹಾಕುತ್ತಿತ್ತು. ಅವಳಿಗೆ ಜನ್ಮ ದಿನದ ಶುಭಾಶಯ ಹೇಳುವಾಗ ಕ್ಯಾಂಡಲ್ ದೀಪಗಳ ಜೊತೆ ಮುಗುಳ್ನಗುತ್ತತ್ತು. ಇದ್ದಕ್ಕಿದ್ದ ಹಾಗೆ…
ಅನುದಿನ ಕವನ-೧೯೬೨, ಕವಿ: ಗಗೋಚ (ಗಣಪತಿ ಗೋ ಚಲವಾದಿ), ಬೆಂಗಳೂರು , ಕವನದ ಶೀರ್ಷಿಕೆ: ಹನಿಗವನಗಳು ಮೂರು ವಿಚಾರ ನೂರು
ಹನಿಗವನಗಳು ಮೂರು ವಿಚಾರ ನೂರು ೧.”ಶೂರ ಸಂಗೊಳ್ಳಿ ರಾಯಣ್ಣ” ತಮ್ಮ ಅವನತಿಗೆ ನಾಂದಿ ಹಾಡುತ್ತಿರುವನೆಂದು ಸಂಗೊಳ್ಳಿ ರಾಯಣ್ಣನನ್ನು ಬ್ರಿಟಿಷರು ಏರಿಸಿದರು ಗಲ್ಲಿಗೆ! ದೇಶಕ್ಕಾಗಿ ಸಂಗೊಳ್ಳಿ ರಾಯಣ್ಣ ಗುರಿ ಇಟ್ಟು ಹೊಡೆದಿದ್ದ ದೇಶದ್ರೋಹಿಗಳ ಎದೆಗೆ! ೨. “ಅಂಟುರೋಗ” ಸಂವಿಧಾನ ರಚನೆಕಾರರು ನಂಬಿದ್ದರು ಹತ್ತು…
ಅನುದಿನ ಕವನ-೧೯೬೧, ಕವಿ(ತೆಲುಗು ಮೂಲ): ಪಲ್ಲಿಪಟ್ಟು ನಾಗರಾಜು, ಕನ್ನಡಕ್ಕೆ:ಡಾ. ಶಿವಕುಮಾರ್ ಕಂಪ್ಲಿ, ದಾವಣಗೆರೆ, ಕವನದ ಶೀರ್ಷಿಕೆ: ಕತ್ತಲು ಬೆಳಗುತ್ತಿರುವಾಗ…
ಕತ್ತಲು ಬೆಳಗುತ್ತಿರುವಾಗ… ೧ ” ತಲೆಯೇ ಇರದ ಮರಗಳ ಮುಖ ಕಲ್ಪಿಸಿಕೊಳ್ಳುವುದು ಹೇಗೆ…! ಮುಖವಿರದೆಯೂ ಮಾತಾಡಲು ಸಾಧ್ಯಾವಾ…! ೨ ಕಲ್ಲುಗಳೂ ನಡೆಯುತ್ತವಾ…! ಬಂಡೆತುಟಿಗಳೂ ಕಂಪು ಸೂಸುತ್ತವಾ…! ೩ ಏನೋ…..! ೪ ಬೆರಳನು ಬೇರಿನ ಹಾಗೆ ನೆಲದಾಳಕೆ ನಾಟಿಸುತ್ತಾ ಮಣ್ಣ ಅಂತರ್ ಲೋಕವನು…
ಅನುದಿನ ಕವನ-೧೯೬೦, ಕವಿ: ಗೋಸಿಂಹಾ, ಹೊಸಪೇಟೆ, ಕವನದ ಶೀರ್ಷಿಕೆ: ಸಾಮಾಜಿಕ ನ್ಯಾಯದ ಹರಿಕಾರ
ಸಾಮಾಜಿಕ ನ್ಯಾಯದ ಹರಿಕಾರ ಕಡು ಬಡವರ ಬದುಕಿನೊಳು ನವ ಆಶಾಕಿರಣ ಮೂಡಿಸಿ ಸಮಾಜದಂಚಿನ ವ್ಯಕ್ತಿಗೂ ಮಾತೃ ಅನುಕಂಪ ತೋರಿಸಿ ಕನಸು ಮನಸಿನಲಿ ನೆನಸದ ಅಧಿಕಾರದ ಗದ್ದುಗೆಗೇರಿಸಿ ನವ ಸಮಾಜ ನಿರ್ಮಾಣಕೆ ಭದ್ರಬುನಾದಿ ಹಾಕಿದ ಮುತ್ಸದಿ! ಬಡ ಗೇಣಿದಾರರಿಗೆ ಭಾಗ್ಯದ ಬಾಗಿಲು ತೆರೆದು…
ಅನುದಿನ ಕವನ-೧೯೫೯, ಹಿರಿಯ ಕವಿ: ಎಂ ಎಸ್ ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಮೌನವೆಂದರೆ ನಾನು…
ಮೌನವೆಂದರೆ ನಾನು… ನನ್ನಲ್ಲಿರುವ ಪದಗಳೆಲ್ಲವೂ ಎಂಜಲಿನವು. ನನ್ನದು ಎನ್ನುವ ಒಂದೇ ಒಂದು ಪದ ನನ್ನಲ್ಲಿಲ್ಲ. ಮೌನ ಮಾತ್ರ ನನ್ನದು; ನನ್ನೊಳಗಿನದ್ದು ನನ್ನ ಜೊತೆ ಯಾವಾಗಲೂ ಇರುವಂಥದ್ದು; ಪದಗಳು ಬೆಳಕಿನ ಹಾಗೆ ಬದಲಾಗುತ್ತವೆ ಹೊಸ ಕನಸು ಹೊಸ ರೆಕ್ಕೆ, ಮೋಹಕ- ಕಣ್ಣು ಅವಕ್ಕೆ.…
ಅನುದಿನ ಕವನ-೧೯೫೮, ಕವಯತ್ರಿ: ಮಾನಸಗಂಗೆ, ತಿಪಟೂರು
ಹಸಿವನ್ನ ನೀಗಿಸುವ ಒಂದು ಕವಿತೆ ಬರೆದು ಕೊಡಿ, ಎರಡ್ಹೊತ್ತು ತಿಂದು ನಾಳೆಗೊಂದಿಷ್ಟು ಉಳಿಸಿಕೊಳ್ಳುವೆ.. ಸಸ್ಯದ್ದೊ ,ಮಾಂಸದ್ದೊ ಬೆಂದದ್ದೊ ,ಹಸಿ ಹಸಿಯೋ ಯಾವುದೋ ಒಂದು ನಾಲ್ಕು ಸಾಲು ಗೀಚಿ ಬಿಡಿ ನನಗೀಗ ತುಂಬಾ ಹಸಿವಾಗಿದೆ.. ನೀವು ಬರೆದು ಕೊಟ್ಟ ಕವಿತೆಗಳ ಕೊನೆಯಲ್ಲಿ ನಿಮ್ಮ…
