ಅನುದಿನ ಕವನ-೧೧೪೪, ಕವಯಿತ್ರಿ:ರೇಣುಕಾ ರಮಾನಂದ, ಅಂಕೋಲ, ಕವನದ ಶೀರ್ಷಿಕೆ: ಪ್ರೇಮ

ಪ್ರೇಮ ಬಹಳ ಹಿಂದಿನಿಂದಲೂ ಪ್ರೀತಿಸುತ್ತಿದ್ದಾನೆ ಅವನು ನನ್ನನ್ನು ಮತ್ತೆ ನಾನು ಅವನನ್ನು ಪರಸ್ಪರ ಭೇಟಿಯಾಗುವ ತನಕವೂ‌ ಪ್ರೇಮ ಹಾಗೇ ಉಳಿದಿರುತ್ತದೆ ನಂತರ ಅಂತರ ಶುರುವಾಗುತ್ತದೆ ಎಂಬ ಭಯವನ್ನು ಕಟ್ಟಿಕೊಂಡು ಪ್ರೀತಿಯ ಸಮುದ್ರಕ್ಕೆ ಬಿದ್ದವಳು ನಾನು ನಿರಂತರ ಈಜು ನಡೆದೇ ಇದೆ ಅನತಿದೂರದಲ್ಲಿ…

ಅನುದಿನ ಕವನ-೧೧೪೩, ಕವಿ:ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್

ಗಜ಼ಲ್ ಉಕ್ಕುವ ದುಃಖದ ನೆತ್ತಿ ನೇವರಿಸಿದ್ದೇನೆ ಇನ್ನೆಂದೂ ಇದಿರಾಗಬೇಡ ಸುರಿವ ಕಣ್ಣೀರಿನ ಕೆನ್ನೆ ತಟ್ಟಿದ್ದೇನೆ ಇನ್ನೆಂದೂ ಇದಿರಾಗಬೇಡ ಮುರಿ ಮುರಿದು ಕಟ್ಟಿದ ಆಣೆ-ಪ್ರಮಾಣಗಳು ಮಕಾಡೆ ಮಲಗಿವೆ ನಿನ್ನೆಡೆಗೆ ಹೊರಟ ಹೆಜ್ಜೆಗಳ ದಾರಿ ತಪ್ಪಿಸಿದ್ದೇನೆ ಇನ್ನೆಂದೂ ಇದಿರಾಗಬೇಡ ಸಾವಿರ ಸಾವಿರ ನೆನಪುಗಳು ಕಮ್ಮಗೆ…

ಅನುದಿನ ಕವನ-೧೧೪೨, ಯುವ ಕವಿ:ವಿಶಾಲ್ ಮ್ಯಾಸರ್, ಹೊಸಪೇಟೆ, ಕವನದ ಶೀರ್ಷಿಕೆ: ಗುಬ್ಬಿ ಮತ್ತು ಕವಿತೆ, ಚಿತ್ರಕೃಪೆ: ಸಿದ್ಧರಾಮ‌ ಕೂಡ್ಲಿಗಿ

ಗುಬ್ಬಿ ಮತ್ತು ಕವಿತೆ ಕವಿತೆಯೊಂದನ್ನು ಹೆಣೆಯುತ್ತಿದೆ ಗುಬ್ಬಿ ಯಾರದೋ ಮನೆ ಮಾಡು ಎಲ್ಲೋ ಹೊತ್ತು ತಂದ ನಾರಿನ ಸೂಡು ಅದೆಷ್ಟು ಜತನ ಬದುಕು ಕಟ್ಟುವುದು ಕವಿತೆಯೊಂದನು ಕಟ್ಟುತ್ತಿದೆ ಗುಬ್ಬಿ ಮಕ್ಕಳು ಮರಿ ಆಡಿ ಬೆಳೆಯಲು ಗುಡ್ಡ ಗವಿ ಹಾಡಿ ಬೆಳಗಲು ಅದೆಷ್ಟು…

ಅನುದಿನ ಕವನ-೧೧೪೧, ಕವಿ: ಸಿದ್ದು ಜನ್ನೂರು, ಚಾಮರಾಜ‌ ನಗರ, ಕವನದ ಶೀರ್ಷಿಕೆ: ಮನ್ವಂತರ ಬುದ್ಧ…

ಮನ್ವಂತರ ಬುದ್ಧ ಶುದ್ದ ನನ್ನೆದೆ ಬುದ್ಧ ಬುದ್ಧ ಎಲ್ಲವ ಗೆದ್ದ ನೀಲಾಕಾಶವೆ ಹೊಸತು ಮನ್ವಂತರ ಲುಂಬಿನಿ ಬನದಿ ಅರಳಿ ಹೂ ಔದುಂಬರ ನಿನಗೆ ಸ್ವಾಗತ ಹೇಳಿದ ಹುಣ್ಣೆಮೆ ಚಂದಿರ… ಹುಟ್ಟು ಜ್ಞಾನ ಸಾವುನೂ ಎಲ್ಲ ಶಾಶ್ವತವಾಗಿ ನಿಂಗೆ ಶರಣಾದವಲ್ಲ ಹುಣ್ಣೆಮೆ ದಿನವೆ…

ಅನುದಿನ ಕವನ-೧೧೪೦, ಹಿರಿಯ ಕವಯಿತ್ರಿ:ಎಂ. ಆರ್. ಕಮಲ, ಬೆಂಗಳೂರು, ಕವನದ ಶೀರ್ಷಿಕೆ:ಕಣ್ಣುಗಳು ಖಾಲಿಯಾದರಷ್ಟೇ….

ಕಣ್ಣುಗಳು ಖಾಲಿಯಾದರಷ್ಟೇ…. ಕಣ್ಣಿನ ಹೊಳಪು ಕುಗ್ಗಿದೆ, ಸುತ್ತ  ಕಪ್ಪು ಗೆರೆ ಮೂಡಿದೆ ಕಣ್ಣೊಳಗೆ  ಉಳಿದೇ ಹೋದ  ಸ್ಕ್ರೀನ್ ಶಾಟ್ ಗಳು! ಹುಡುಕಿ, ಒಟ್ಟುಗೂಡಿಸಿ ಮಾಡಿರುವ  ಆಲ್ಬಮ್ ಎಷ್ಟೊಂದು  ಕಪ್ಪು ಪುಟಗಳು ಹರಿದು ಹೋಗಿವೆ, ಗೆಳೆಯರ  ಜೊತೆಗಿರುವುದನ್ನು ಕತ್ತರಿಸಿ ಹಾಕಲಾಗಿದೆ ಮನೆಗೆ ಬಂದವರು…

ಅನುದಿನ ಕವನ-೧೧೩೯, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಪ್ರೀತಿಯೆಂದರೆ….

“ಕರ್ನಾಟಕ ಕಹಳೆ ಡಾಟ್ ಕಾಮ್ ಅನುದಿನ ಕವನ ಕಾಲಂನ ಸಮಸ್ತ ಸಹೃದಯಿಗಳಿಗೂ, ಸಕಲ ಪ್ರೀತಿ-ಪಾತ್ರರಿಗೂ, ಪ್ರಪಂಚದೆಲ್ಲ ಪ್ರೇಮಿಗಳಿಗೂ ’ಪ್ರೇಮಿಗಳ ದಿನಾಚರಣೆ’ ಯ ಮುಂಗಡ ಶುಭಾಶಯಗಳು. “Happy valentine’s day” to One and All.           …

ಅನುದಿನ‌ ಕವನ-೧೧೩೮, ಕವಿ:ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು

ಎದುರಿಗೆ ನಿಂತ ಅವಳೆದೆಯ ಎಷ್ಟೋ ಮಾತುಗಳನ್ನು ಕಂಗಳಲ್ಲಿಯೇ ಓದಿಕೊಂಡೆ ಕಡು ಬಣ್ಣದ ಗುಲಾಬಿಯನ್ನಿತ್ತು ನೀ ನನ್ನ ಬಣ್ಣವೇನೇ ಎಂದಷ್ಟೇ ಕದಲಿದಳು ಕೈಗಿತ್ತ ಗುಲಾಬಿ ಅವಳ ಮುಡಿಯಲ್ಲಿಟ್ಟೆ ಚೆಲುವಿಗೊಂದು ಹೆಸರಾಯಿತು ನಿಂತು ಸುಮ್ಮನೆ ಎದೆಗೆ ಒರಗಿ ನಿಂತಳು ನಾನು ಆತುಕೊಂಡೆ ಕನಸುಗಳು ಆಗಷ್ಟೇ…

ಅನುದಿನ ಕವನ-೧೧೩೭, ಕವಿ: ಟಿ.ಪಿ ಉಮೇಶ್, ಹೊಳಲ್ಕೆರೆ, ಚಿತ್ರದುರ್ಗ, ಕವನದ ಶೀರ್ಷಿಕೆ: ನಿನ್ನ ಹೃದಯದಲಿ….

ನಿನ್ನ ಹೃದಯದಲಿ… ಬರೆದದ್ದೆಲ್ಲ ಅಳಿಸುವುದು ನಿನ್ನ ಕಣ್ಣೀರಿಗೆ! ಅಳಿಸುವುದನ್ನೇಕೆ ಬರೆಯಲಿ? ನಿನ್ನ ನಗುವ ಬರೆಯಲೆ? ನಗಿಸುತ ನಿನ್ನ ಹೊತ್ತು ತಿರುಗಲೆ? ಬರೆದದ್ದೆಲ್ಲ ಸುಡುವುದು ನಿನ್ನ ಕಣ್ಣ ಕಿಡಿಗೆ! ಕಿಡಿಯಾಗುವುದನ್ನೇಕೆ ಬರೆಯಲಿ? ನಿನ ಕಾಡಿಗೆಯ ಬರೆಯಲೆ? ಕಾಡಿಸುತ ನಿನ್ನ ಹಿಂದೆ ಓಡಾಡಲೆ? ಬರೆದದ್ದೆಲ್ಲ…

ಅನುದಿನ ಕವನ-೧೧೩೬, ಕವಿ: ಕೆ.ಬಿ.ವೀರಲಿಂಗನಗೌಡ್ರ. ಬಾದಾಮಿ, ಕವನದ ಶೀರ್ಷಿಕೆ: ನೀ…..,                          (ಚಿತ್ರ ಕೃಪೆ:ಕಂದನ್ ಜಿ ಮಂಗಳೂರು)

ನೀ… ನನ್ನ ತಪ್ಪಷ್ಟೇ ತೇಲಿಸುವೆ ಸರಿಗಳನ್ನೇಕೆ ಮುಳುಗಿಸುವೆ? ಮಾತಷ್ಟೇ ಮೊನಚೆನ್ನುವೆ ಚುಚ್ಚುವ ಹಚ್ಚೆಯನ್ನೇಕೆ ಇಚ್ಚಿಸುವೆ? ಸಿಟ್ಟಷ್ಟೇ ರಟ್ಟು ಮಾಡುವೆ ಸಮಾಧಾನವನ್ನೇಕೆ ಗುಟ್ಟಾಗಿಸಿರುವೆ? ಮೊಂಡುತನವಷ್ಟೇ ತೋರಿಸುವೆ ಮೊಂಡಿಯೂರಿದ್ದನ್ನೇಕೆ ಮುಚ್ಚಿಟ್ಟಿರುವೆ? ಎಡವಿದ್ದಷ್ಟೇ ದೊಡ್ಡಾಗಿಸುವೆ ಎದ್ದು ನಡೆದದ್ದನ್ನೇಕೆ ಸಣ್ಣಾಗಿಸಿರುವೆ? ಕವಿತೆಯನ್ನು ಸವಿಯುವೆ ಕವಿಯನ್ನೇಕೆ ಹದಹಾಕಿ ತಿವಿಯುವೆ?…

ಅನುದಿನ ಕವನ-೧೧೩೫, ಕವಿ: ಅಮರೇಶ್ ನಾಗಲಾಪುರ, ರಾಯಚೂರು , ಕವನದ ಶೀರ್ಷಿಕೆ: ಹಣ್ಣೆಲೆ

ಹಣ್ಣೆಲೆ ಹಣ್ಣೆಲೆ ನಾ ಉದುರುವ ಮುನ್ನ ತಿಳಿದುಕೋ ನನ್ನ ಸಾರ್ಥಕ ಜೀವನವನ್ನ ಓ ಮಾನವಾ ನಾ ಚಿಗುರಿದಾಗ ವಾಸಂತವಾದೆ ಪರಿಮಳ ಬೀರುವ ಹೂವಿನ ಜೊತೆಯಾದೆ ರಸಭರಿತ ಹಣ್ಣಾಗಲು ನೆರವಾದೆ ಎಲೆಯಾಗಿ ಸಕಲ ಜೀವ ರಾಶಿಗೆ ನೆರಳಾದೆ, ಉಸಿರಾದೆ ಹಣ್ಣೆಲೆಯಾಗಿ ಉದುರಿ ನನ್ನ…