ಗುಲ್ಮೊಹರ್… ವಿಚಿತ್ರ ಆಕರ್ಷಣೆಯೇ ಹೌದು ಅದೊಂದೇ ಭಿಕಾರಿ ಹೂವಿನ ಮೇಲೆ. ವಿಕಾರವಾದರು ಅಮಲೆ ಮಾರಿ ಕೆಂಡದುಂಡೆ ಮೇಲಿನ ನಡಿಗೆ. ಚಂದವಿಲ್ಲ ಅಂದವಿಲ್ಲ ದುಂಡು ದಂಡು ಅಳತೆಯಿಲ್ಲ ವಕ್ರ ಚಕ್ರ ರೂಪುಯಿಲ್ಲ ಹಿಡಿದು ಮುಡಿಯೆ ಒಗೆತವಿಲ್ಲ ಬಣ್ಣದೊಂದು ಕುಣಿತ ಎತ್ತರದಲಿ ಗೋಧೂಳಿ ಮಿಂಚ…
Category: ಅನುದಿನ ಕವನ
ಅನುದಿನ ಕವನ-೧೨೩೭, ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್, ಚಿತ್ರ ಕೃಪೆ: ಶಿವಶಂಕರ ಬಣಗಾರ, ಹೊಸಪೇಟೆ
ಗಜಲ್ ಎದೆಯೊಳಗೆ ವಿರಹದ ಸಾವಿರ ರೆಕ್ಕೆಗಳು ಫಡಫಡಿಸುತಿವೆ ಏನು ಹೇಳಲಿ ಕಂಗಳೊಳಗೆ ಅಗಲಿಕೆಯ ಅಲೆಗಳು ಭೋರ್ಗರೆಯುತಿವೆ ಏನು ಹೇಳಲಿ ನಮ್ಮಿಬ್ಬರ ನಡುವೆ ದೂರವೆಂಬುದೂ ಎಷ್ಟೊಂದು ಯಾತನೆಯ ಇರಿತ ಬುವಿ ತಾಕದ ನೋವಿನಲಿ ಮೋಡಗಳು ಅಂಡಲೆಯುತಿವೆ ಏನು ಹೇಳಲಿ ಅಡಿಗಡಿಗೆ ಕಡಲ ಅಲೆಗಳು…
ಅನುದಿನ ಕವನ-೧೨೩೬, ಕವಿ: ಆನಂದ ಸಿ ಲಕ್ಕೂರು, ಕೋಲಾರ, ಕವನದ ಶೀರ್ಷಿಕೆ:ಒಂದು ಕಪ್ ಕಾಫಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತ್ರಿ ಪುರಸ್ಕೃತ ಯುವಕವಿ, ಸಂಶೋಧಕ, ಅನುವಾದಕ ಸಾಹಿತಿ “ಲಕ್ಕೂರು ಸಿ. ಆನಂದ” ಭಾನುವಾರ ರಾತ್ರಿ ಕಲಬುರಗಿ ಸೆಂಟ್ರಲ್ ಯೂನಿವರ್ಸಿಟಿಯ ಕಡಗಂಚಿ ಗ್ರಾಮದಲ್ಲಿ ನಿಧನರಾಗಿದ್ದಾರೆ. ಆನಂದ ಲಕ್ಕೂರ ಅವರ ‘ಒಂದು ಕಪ್ ಕಾಫಿ’ ಜನಪ್ರಿಯ ಕವಿತೆ ಪ್ರಕಟಿಸುವ ಮೂಲಕ…
ಅನುದಿನ ಕವನ-೧೨೩೫, ಹಿರಿಯ ಕವಿ: ವಿಜಯರಾಘವನ್ ರಾಮಕುಮಾರ್, ಕೋಲಾರ, ಕವನದ ಶೀರ್ಷಿಕೆ:ನನ್ನ ಕುಡಿದ ಕವನ
ನನ್ನ ಕುಡಿದ ಕವನ ಎಂದೋ ಹೋಗಿಬಿಟ್ಟ ಮತ್ತು ಚಿರಂತನ ಬದುಕಿರುವ ನನ್ನ ಪ್ರಿಯ ಗೆಳೆಯನೇ, ನೀನು ಅಂದಿನ ಆ ನಟ್ಟಿರುಳಿನಲ್ಲಿ ನಿನಗೆ ನಾನು ಅನನ್ಯ ಗಳಿಗೆಗಳ ನಮ್ಮಿಂದ ಕಸಿವ ಯಾವುದನ್ನು ನನಗೆಂದು ತರಬಾರದೆಂದು ವಿಧಿಸಿದ್ದ ಕಟ್ಟಪ್ಪಣೆಯನ್ನು ಧಿಕ್ಕರಿಸಿ ನಿನ್ನ ದೀರ್ಘ ಚರಮಗೀತೆಯ…
ಅನುದಿನ ಕವನ-೧೨೩೪, ಕವಿ: ಆರಿಫ್ ರಾಜಾ, ಇಳಕಲ್, ಕವನದ ಶೀರ್ಷಿಕೆ:ಅರ್ಧಕ್ಕೇ ನಿಂತ ಕವಿತೆ
ಅರ್ಧಕ್ಕೇ ನಿಂತ ಕವಿತೆ ಒಂದು ಚಿಟ್ಟೆಯ ರೆಕ್ಕೆ ಬಿರುಗಾಳಿಯ ದಿಕ್ಕು ಬದಲಿಸಬಲ್ಲದು ಒಂದು ಅಡ್ನಾಡಿ ಶಬ್ದ ಅರ್ಧಕ್ಕೇ ನಿಂತ ಕವಿತೆಯ ನಾಡಿ ಹಿಡಿಯಬಹುದೆ? ಶೋಕವನ್ನು ಹೃದಯದಿಂದ ಸಾವನ್ನು ಬದುಕಿನಿಂದ ಅರ್ಥವನ್ನು ಶಬ್ದಗಳಿಂದ ಅಗಲಿಸಿಬಿಟ್ಟರೆ? ರೋಷವನ್ನು ನೆತ್ತರಿನಿಂದ ಹಸಿವನ್ನು ಒಡಲಿನಿಂದ ಮನುಷ್ಯತ್ವವ ಮನುಷ್ಯನಿಂದ…
ಅನುದಿನ ಕವನ-೧೨೩೩, ಕವಿ: ಶಿವೈ(ವೈಲೇಶ.ಪಿ.ಎಸ್) ಕೊಡಗು. ಕವನದ ಶೀರ್ಷಿಕೆ:ಕೊಟ್ಟೆ ಮೆಟ್ಟಿತೇ
ಕೊಟ್ಟೆ ಮೆಟ್ಟಿತೇ ಭೋಗ ಭಾಗ್ಯವೆಲ್ಲ ಬಲ್ಲ ಭಾಗ್ಯಧಾತನಿತ್ತನಲ್ಲ ಯೋಗವಿರದ ಹಳ್ಳಕೇಕೆ ಜೋಗದೋಗ್ಯತೆ| ಈಗಲೀಗ ಹೊಟ್ಟೆಕಿಚ್ಚು ರಾಗ ದ್ವೇಷವೆಲ್ಲ ಬಿಟ್ಟು ಬೀಗದಂತೆ ಬಾಗಿದಾಗಲದುವೆ ಯೋಗ್ಯತೆ|| ಆನುತಾನುಯೇನದೇನು ನಾನುಯೆಂಬ ಹೇನು ನೀನು ಭಾನಿನಂತೆ ಬಾನತುಂಬ ಚೆಲ್ಲು ಬೆಳಗನು| ಕಾಣದಂತ ಸಕಲ ಸಿದ್ಧಿ ಕಾಣ್ವೆಯಾಗ ತಿಳಿಯೊ…
ಅನುದಿನ ಕವನ-೧೨೩೨, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ನಿನ್ನನಿಷ್ಟು ಹುಡುಕುವಾಗ ನಾನೇಷ್ಟು ಕಳೆದು ಹೋಗುತ್ತಿರುವುದು ಹೂಗಳಿಷ್ಟು ಅರಳಿ ಉದುರಿ ನೆಲದೊಲವಲ್ಲಿ ಮಿಲನಗೊಳ್ಳುತ್ತಿದ್ದರೂ ನಿನಗೊಂದಿಷ್ಟು ನೆನಪಿನ ಪರಿಮಳ ಬೀಸದಿರುವುದು ಪದಗಳಿಷ್ಟು ಹರಡಿಕೊಂಡು ನಿನಗಷ್ಟೇ ಕವಿತೆಗಳು ರೂಪುಗೊಳ್ಳುತ್ತಿದ್ದರೂ ನೀ ಓದದೆ ಇರುವುದು ಇಷ್ಟೊಂದು ಅಲೆಗಳು ದಡವ ತಲುಪುತ್ತಿದ್ದರೂ ನಿನ್ನದೊಂದು ಬೆರಳಿಗೂ ತಾಕದಿರುವುದು ಹಗಲು…
ಅನುದಿನ ಕವನ-೧೨೩೧, ಕವಿ: ಎ.ಎನ್.ರಮೇಶ್.ಗುಬ್ಬಿ.
“ಇಲ್ಲಿವೆ ಮೂರು ಸಾಲಿನ ಆರು ಹನಿಗವಿತೆಗಳು. ಬದುಕಿನ ಅಂಗಳಕೆ ನೂರಾರು ಭಾವಾರ್ಥಗಳ ಬೆಳಕು ಚೆಲ್ಲುವ ಅಕ್ಷರಪ್ರಣತೆಗಳು. ಇಲ್ಲಿ ಆಳಕ್ಕಿಳಿದಷ್ಟೂ ನಮ್ಮ-ನಿಮ್ಮದೇ ಬದುಕು-ಬೇಗುದಿಗಳ ಅನಾವರಣವಾಗುತ್ತದೆ. ಪ್ರಸಕ್ತ ವಿದ್ಯಮಾನಗಳ ವಿಕಾರ-ವಿಕೃತಿಗಳ ವಿಶ್ವದರ್ಶನವಾಗುತ್ತದೆ. ಬೆಳಕು-ಬೆಂಕಿಯ ಆಂತರ್ಯಗಳ ಸಾಕ್ಷಾತ್ಕಾರವಾಗುತ್ತದೆ. ಬದುಕು ಬೆಂಕಿಯಾಗದೆ ಬೆಳಕಾದರಷ್ಟೆ ಬಾಳು ಸಾರ್ಥಕ್ಯ. ಜೀವ-ಜೀವನಗಳ…
ಅನುದಿನ ಕವನ-೧೨೩೦, ಕವಯಿತ್ರಿ: ಭಾರತಿ ಅಶೋಕ್, ಹೊಸಪೇಟೆ, ಕವನದ ಶೀರ್ಷಿಕೆ:ಬದುಕ ಅಕ್ಷರ ತಿದ್ದುತಾ…
ಬದುಕ ಅಕ್ಷರ ತಿದ್ದುತಾ… ಅವಳು ಅಕ್ಷರ ಜೋಡಿಸುತ್ತಾಳೆ ಭಾವದ ಹೊಳೆಯಲ್ಲಿ ಸಿಕ್ಕ ಮುತ್ತಿನ ಚಿಪ್ಪಂತೆ ಪದಗಳಾಗಬಹುದವು. ಅಕ್ಷರ ಓದುವ ನಿಮಗೆ ಯಾವುದೋ ಅರ್ಥ ತಗುಲಬಹುದು ತಗುಲದಿರಬಹುದು. ಅವಳ ಭಾವಕ್ಕೆ ಅಪಥ್ಯ ಬದುಕಿನ ತಪ್ಪೆಜ್ಜೆ ತಿದ್ದುವ ತಾಲೀಮಿನ ಶಬ್ದ ಮಿಡಿದಾಗಲೆಲ್ಲ ಮತ್ತೆ ಮತ್ತೆ…
ಅನುದಿನ ಕವನ-೧೨೨೯, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ದಕ, ಕವನದ ಶೀರ್ಷಿಕೆ: ಮುಖ-ಮುಖವಾಡ
ಮುಖ-ಮುಖವಾಡ ಪ್ರತಿಜ್ಞೆ ಮಾಡಿದೆ ಈಗ: ನಾನೇ ಹಾಕಿಕೊಂಡ ನನ್ನ ಮುಖಕ್ಕಂಟಿಕೊಂಡಿದ್ದ ಮುಖವಾಡಗಳ ಕಿತ್ತೊಗೆದು ನಿಜದ ನೆಲೆಯಲ್ಲಿ ನಿಲ್ಲಲು . ಒಂದೊಂದಾಗಿ ಕಿತ್ತು ಬೆಂಕಿಗೆಸೆಯುತ್ತಾ ಮುಖ ಯಾವುದು ಮುಖವಾಡ ಯಾವುದು ಎಂಬುದೇ ತಿಳಿಯದೆ ನನ್ನ ನಿಜ ಮುಖವನ್ನೇ ಕಿತ್ತೆಸೆದದ್ದು ಗೊತ್ತಾಗಲೇ ಇಲ್ಲ ನನಗೀಗ…
