ಸುಖ ಸತ್ಯವನ್ನೇ ಮುಚ್ಚಿಹಾಕುವುದಾದರೆ ಬರಿ ಸುಳ್ಳಿನೊಳಗೆ ಏನು ಸುಖವಿದೆ ಹೇಳು|| ಪ್ರೀತಿಯನ್ನೇ ಕಟ್ಟಿಹಾಕುವುದಾದರೆ ಬರಿ ದ್ವೇಷದೊಳಗೆ ಏನು ಸುಖವಿದೆ ಹೇಳು|| ಮುದ ತುಂಬಿದ ಎದೆಯ ಗೂಡಲ್ಲಿ ನಿತ್ಯ ಒಲವಿನೋಕುಳಿ| ಭಾವಗಳನ್ನೇ ಕೊಲ್ಲುವುದಾದರೆ ಬರಿ ಭೋಗದೊಳಗೆ ಏನು ಸುಖವಿದೆ ಹೇಳು|| ಕೂಡಿ ಉಂಡುಟ್ಟು…
Category: ಅನುದಿನ ಕವನ
ಅನುದಿನ ಕವನ-೧೨೨೭, ಕವಿ: ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಝಲ್
ಗಝಲ್ ಎಷ್ಟು ಪ್ರೀತಿ ಕೊಟ್ಟರೂ ಮೌನವಾಗಿ ಇರಿಯುವ ಮನಸುಗಳಿವೆ ಇಲ್ಲಿ ಬಟ್ಟೆ ಕಳಚಿದಂತೆ ಬಣ್ಣ ಒರೆಸಿಕೊಂಡಂತೆ ಬಳಸಿ ಬಿಸಾಡುವ ಮನಗಳಿವೆ ಇಲ್ಲಿ ಒಲಿದ ಜೀವವೂ ಒಮ್ಮೊಮ್ಮೆ ಒಂಟಿಯಾಗಿಸಿ ಮೋಜು ನೋಡುವುದು ಭಾವನೆಗಳ ಜೊತೆ ಚೆಲ್ಲಾಟವಾಡಿ ಚುಚ್ಚುವ ಮನಗಳಿವೆ ಇಲ್ಲಿ ಕಟ್ಟಿಕೊಂಡ ಕನಸುಗಳೆಲ್ಲ…
ಅನುದಿನ ಕವನ-೧೨೨೬, ಕವಯಿತ್ರಿ: ರಂಹೊ, ತುಮಕೂರು, ಕವನದ ಶೀರ್ಷಿಕೆ:ಒಂದಿಷ್ಟು ಪ್ರಾರ್ಥನೆಗಳು
ಒಂದಿಷ್ಟು ಪ್ರಾರ್ಥನೆಗಳು ಮೋಡಗಳು ಕದಡಿ ಮಳೆ ಸುರಿಯಲಿ ಬಿದ್ದ ಮಳೆ ಬದುಕಿನ ಬೀದಿಗಿಡದಿರಲಿ…. ಅನ್ನದಾತ ಕುಣಿಕೆಗೆ ಕೊರಳೊಡ್ಡದಿರಲಿ ಮನೆಯಲ್ಲಿ ಮೂರೊತ್ತು ಒಲೆ ಉರಿಯಲಿ… ಹಸುಗೂಸು ಕಸದ ಬುಟ್ಟಿಯಲಿ ಅಳದಿರಲಿ ಹೆತ್ತವರು ವೃದ್ಧಾಶ್ರಮದ ವಿಳಾಸ ಕೇಳದಿರಲಿ… ಹೂ ಮಾರುವ ಹುಡುಗಿ ಬೀದಿ ಹೆಣವಾಗದಿರಲಿ…
ಅನುದಿನ ಕವನ-೧೨೨೫, ಕವಯಿತ್ರಿ: ವಸು ವತ್ಸಲೆ, ಬೆಂಗಳೂರು
ಎಲ್ಲೋ ಬಿದ್ದ ಬೀಜ ನಾನು ಕಲ್ಲು ಪೊಟರೆಗಳ ನಡುವಿಂದ ಸದ್ದಿಲ್ಲದೆ ಮೊಳಕೆ ಹೊಡೆದು ಚಿಗುರಿಕೊಂಡೆ ಚಿವುಟುವವರ ನಡುವೆಯೂ ತೋಳುಗಳರವಿ ನೀರು-ನಿಡಿ ಇಲ್ಲದೆ ಜೀವ ತುಂಬಿಕೊಂಡೆ ನಡು ನಡುವೆ ಆಡು ಕುರಿಗಳಿಗೂ ಕುಡಿಗಳರ್ಪಿಸಿ, ಮೆಲ್ಲೆನೆ ಗೆಲ್ಲುಗಳರಡಿದೆ ಜೋಕಾಲಿ ಜೀಗಿ ಗೆಲ್ಲುಗಳ ಮುರಿದವರಿಗೂ ಯಾವ…
ಅನುದಿನ ಕವನ-೧೨೨೪, ಹಿರಿಯ ಕವಯಿತ್ರಿ: ಎಂ. ಆರ್. ಕಮಲಾ, ಬೆಂಗಳೂರು, ಕವನದ ಶೀರ್ಷಿಕೆ: ಕವಿತೆಯಾಗಿಬಿಡಿ!
ಕವಿತೆಯಾಗಿಬಿಡಿ! ಪ್ರೀತಿ ಸಾರಲು ಸಾವಿರ ದಾರಿಗಳಿವೆ ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು ಗಾಳಿ ಮರಗಳ ವೀಣೆ ನುಡಿಸುತ್ತೆ ಮೌನವಾಗಿ, ತಾನಕ್ಕೆ ಮುದಗೊಳ್ಳಿ ಗಾಳಿ ಗೀಳು, ಗಾಳಿ ಗೋಳು ಪದಗಳ ಕಿತ್ತೆಸೆದು ಹಾಗೇ ಕಿವಿಯೊಡ್ಡಿಕೊಳ್ಳಿ ಪ್ರೀತಿ ಸಾರಲು ಸಾವಿರ ದಾರಿಗಳಿವೆ ಎದುರುಗೊಳ್ಳುವುದಕ್ಕೆ ಸಿದ್ಧರಾಗಿ ಸಾಕು…
ಅನುದಿನ ಕವನ-೧೨೨೩, ಕವಯಿತ್ರಿ: ಮಮತಾ ಅರಸೀಕೆರೆ., ಕವನದ ಶೀರ್ಷಿಕೆ: ಸಾಕಾಯ್ತು ನನಗೆ
ಸಾಕಾಯ್ತು ನನಗೆ…. ನೀನು ಹೂವಾಗಿ ಸೋಕಬಹುದಿತ್ತು ಗಂಧವಾಗಿ ಸವರಬಹುದಿತ್ತು. ಗಾಳಿಯಲ್ಲಿ ಸುಳಿದಾದರೂ ಸ್ಪರ್ಶವಾಗಬಹುದಿತ್ತು. ಕಣ್ಣಗಳಲ್ಲಾದರು ನೆನಪುಗಳ ಕನವರಿಕೆಯಾಗಬಹುದಿತ್ತೇನೊ. ನೀನು ಅಕಾಲಿಕ ಮಳೆಯಾಗಿಯಾದರೂ ಎದೆಯೊಳಗೆ ಮಣ್ಣ ಕಂಪನ್ನು ಆವಿಯಾಗಿಸಬಹುದಿತ್ತು. ತೂಗುಮಂಚದೊಳಗೆ ಮಲಗಿ ಮೈಮರೆಸುವ ಅಮಲಿಗೆ ನಿನ್ನ ತೆಕ್ಕೆಯೊಳಗೆ ಅಡಗಿ ಉಯ್ಯಾಲೆಯಾಡಿಸುವ ಬೇಷರತ್ತು ವಾಗ್ದಾನ…
ಅನುದಿನ ಕವನ-೧೨೨೨, ಕವಿ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಮಂಗಳೂರು, ಕವನದ ಶೀರ್ಷಿಕೆ: ಕತ್ತಲಾಗಿಸು ಪ್ರಭುವೇ
ಕತ್ತಲಾಗಿಸು ಪ್ರಭುವೇ ಪ್ರಭುವೇ, ಇನ್ನಾದರೂ ಹೊರಗೆ ಕತ್ತಲಾಗಿಸು ಈ ಬೆಳಕು ದಾರಿ ತೋರಿಸಿದ್ದು ಸಾಕು. ನಡೆದೂ ನಡೆದೂ ಸುಸ್ತಾಗಿದ್ದೇನೆ, ದಾರಿ ಗುರಿಗಳ ನಡುವೆ ಸಾಗುವಲ್ಲಿ ಸಾಧನೆಗಳ ಮಿಂಚುಳದ ಬೆಳಕಿನಲ್ಲಿ ದಾಹ ತೀರದ ಚಪ್ಪಾಳೆಯಲ್ಲಿ ನಾನಿಲ್ಲದಂತೆ ಬಂಧಿಯಾಗಿದ್ದೇನೆ. ನಿದ್ದೆ ಮತ್ತು ಎಚ್ಚರದ ನಡುವಿನ…
ಅನುದಿನ ಕವನ-೧೨೨೧, ಕವಿ: ಸಿದ್ದಲಿಂಗಪ್ಪ ಬೀಳಗಿ, ಹುನಗುಂದ, ಕಾವ್ಯ ಪ್ರಕಾರ: ಹಾಯ್ಕುಗಳು
ಹಾಯ್ಕುಗಳು ೧ ನೂರು ಕತೆಗೆ ಮುನ್ನುಡಿ; ಸಾವಿರದ ಮುಗುಳು ನಗೆ ೨ ಪ್ರೀತಿಯೌಷಧಿ ಕುಡಿದ ದಿನವಿಡೀ ಉಲ್ಲಾಸಮಯ ೩ ಕಾದ ಕಾವಲಿ ನೆಲ; ಬೆಂಕಿಯುಗುಳಿ ದಣಿದ ಸೂರ್ಯ ೪ ನಿದ್ರೆ ಇರದ ಅದೆಷ್ಟೋ ರಾತ್ರಿ; ಬರೀ ನಿನ್ನದೇ ಧ್ಯಾನ ೫ ನೀಲಿ…
ಅನುದಿನ ಕವನ-೧೨೨೦, ಕವಿ: ಸಿದ್ಧರಾಮ ಕೂಡ್ಲಿಗಿ, ಕವನದ ಶೀರ್ಷಿಕೆ:ನೀನೆಂದರೇ ಹಾಗೆ
ನೀನೆಂದರೇ ಹಾಗೆ ನೀನೆಂದರೇ ಹಾಗೆ ಕಪ್ಪೆಚಿಪ್ಪೊಂದು ತನ್ನೊಳಗೇ ಮುತ್ತನ್ನು ಸೃಷ್ಟಿಸಿದ ಹಾಗೆ ನೀನೆಂದರೇ ಹಾಗೆ ನೆಲದೊಳಗಿನ ಬೀಜವೊಂದು ತನ್ನೊಳಗೇ ಬೆಳೆದು ಹೆಮ್ಮರವಾದಂತೆ ನೀನೆಂದರೇ ಹಾಗೆ ಮೋಡವೊಂದು ಕಡಲಿನ ಒಡಲ ಹೊತ್ತು ತೇಲಿ ಬಂದಂತೆ ನೀನೆಂದರೇ ಹಾಗೆ ಮೊಗ್ಗೊಂದು ಮೈಮುರಿದು ಸುಗಂಧ ಹರಡಿದ…
ಅನುದಿನ ಕವನ-೧೨೧೯, ಕವಯಿತ್ರಿ: ಮಧು ಅಕ್ಷರಿ, ಬೆಂಗಳೂರು
ನಡೆದ ಹಾದಿಯಲ್ಲಿ ಅದೆಷ್ಟು ನಿಲ್ದಾಣಗಳು ಆಯಾಸ ಹೊರೆ ಹಸಿವು ಅನುಭವ ಸಂತಸ ಪುಳಕ ಪಡೆದುದು ಕಳೆದುದು ಎಲ್ಲವೂ ಇಗೋ ಇವೇ ರಸ್ತೆಗಳಲ್ಲೇ ಪಯಣ ಆರಂಭವಾದುದು ಬಹುಶಃ ಕೊನೆಯಾಗುವುದು ಖಾಲಿ ಕೈಗಳೊಡನೆಯೇ ನಡುವಲ್ಲಿ ನೂರು ಹೊರೆಯ ಅನಗತ್ಯ ಭಾರ ಏರಿಕೊಂಡದ್ದೇ ಹೊರೆಸಿದರೆಂದು ದೂರುತ್ತೇವಷ್ಟೇ…
