ಐದು ‘ಹನಿ’ಗಳು….! ೧. ಅದಮ್ಯ ಪ್ರೀತಿ ಪತಿ – ಪತ್ನಿ – ಯರೀರ್ವರಲ್ಲಿ ಇರಬೇಕು ಅದಮ್ಯ ಪ್ರೀತಿ ; ಪ್ರೀತಿ ಇಲ್ಲದಿರೆ ಬದುಕು ದಿನವೂ ಯುದ್ಧದ ರೀತಿ. ೨.ನನ್ನ ಅಹವಾಲು ಬೇಕಿಲ್ಲ ಮಹಲು ಸುಖ ಪಡಲು ನಿನ್ನ ಪ್ರೀತಿಯ ಹೊನಲು…
Category: ಅನುದಿನ ಕವನ
ಅನುದಿನ ಕವನ-೯೭೧, ಕವಿಯಿತ್ರಿ: ವೀಣಾ ಶ್ರೀನಿವಾಸ್, ಮಧುಗಿರಿ, ಕವನದ ಶೀರ್ಷಿಕೆ: ಕೊಡೆಗಳು (ಶಿಶು ಗೀತೆ)
ಕೊಡೆಗಳು (ಶಿಶುಗೀತೆ) ಬರುತಿದೆ ಇಳೆಗೆ ಮಳೆ.. ಬಣ್ಣ ಬಣ್ಣದ ಛತ್ರಿಗಳೆ ಎಲ್ಲೆಡೆ ಈಗ ಅರಳಿವೆ.. ಮುದುಡಿ ಮಲಗಿದ್ದ ಕೊಡೆಗಳಿಗೆ ಬಂದಿದೆ ಈಗ ಭಾರಿ ಬೆಲೆ ಎಲ್ಲೆಡೆ ಈಗ ಮೆರೆದಿವೆ… ಕೆಂಪು, ಹಳದಿ , ನೀಲಿ ಹಸಿರು, ಕಪ್ಪು ಜೊತೆಯಲಿ.. ಇನ್ನೂ ಹಲವು…
ಅನುದಿನ ಕವನ-೯೭೦, ಕವಿ:ಡಾ.ನಿಂಗಪ್ಪ ಮುದೇನೂರು, ಧಾರವಾಡ
ಈಗ ತಾನೇ ಮಿನುಗಿ ಹೋದ ಮಿಂಚುಹುಳು ಪುಟ್ಟ ಪ್ಲೇನು ನಭಕ್ಕೆ ಏರಿದಂತೆ ಕಾಲದ ವೈಪರೀತ್ಯಕ್ಕೆ ನಲುಗಿ ಇಳೆಗಿಳಿದಂತೆ ಮತ್ತೆ ಕತ್ತಲಿಗೆ ಬೆಳಕು ಮೂಡಿಸಿ ಮಿಂಚಿ ಮರೆಯಾದಂತೆ ಕಣ್ಣ ಮುಂದೆಯೇ ಮರೆಯಾಯಿತು ಕತ್ತಲೆಂದರೆ ಬೆಳಕಿಗೆ ವ್ಯಮೋಹ ಬೆಳಕೆಂದರೆ ಕತ್ತಲಿಗೆ ಗಾಢ ಮರೆವು ನಮಗೆಷ್ಟು…
ಅನುದಿನ ಕವನ-೮೬೯, ಕವಿ:ಅಶ್ವತ್ಥನಾರಾಯಣ, ಮೈಸೂರು, ಕವನದ ಶೀರ್ಷಿಕೆ: ಬಣ್ಣದ ಶುಕ್ತಿ(ಶಿಶು ಗೀತೆ)
ಬಣ್ಣದ ಶುಕ್ತಿ(ಶಿಶುಗೀತೆ) ಇತ್ತ ನೋಡು ಪುಟ್ಟ ಕಂದ ಕಪ್ಪೆಚಿಪ್ಪು ಇರುವುದು| ಮುತ್ತು ಕೂಡ ಅದರ ಒಳಗೆ ಜನಕೆ ಸಿಗುತಲಿರುವುದು|| ಬಣ್ಣಬಣ್ಣ ಚಿಪ್ಪು ತಂದು ಜೋಡಿಸುತ್ತಲಿಟ್ಟರು| ಕಣ್ಣ ಸೆಳೆವ ಹೆಣ್ಣರೂಪ ತಂದು ಮುದವ ಕೊಟ್ಟರು|| ಹಲವು ಬಣ್ಣ ಶುಕ್ತಿ ತಂದು ನಿನಗೆ ನಾನು…
ಅನುದಿನ ಕವನ-೯೬೮, ಕವಿ: ಡಾ.ಸತ್ಯಮಂಗಲ ಮಹದೇವ, ಬೆಂಗಳೂರು
ಸಖೀ ನೂರು ಕನಸುಗಳು ಒಂದೇ ಸಲ ನೆಲಕಪ್ಪಳಿಸಿದಾಗ ಹೃದಯ ಚಿಲ್ ಎಂದು ಚೀರುತ್ತದೆ ನೋವಿನ ಆದ್ರತೆಗೆ ನೂರು ನಕ್ಷತ್ರಗಳು ಧರೆಗಪ್ಪಳಿಸಿದರೆ ನೆಲದ ಎದೆ ಹೇಗೆ ತಡೆದೀತು ನೆಲಕೆ ಬಿದ್ದ ನಕ್ಷತ್ರಗಳ ಎದೆಗಪ್ಪುವ ಸಾವಿರ ಪ್ರೇಮಿಗಳು ಅನುಕ್ಷಣವು ಪ್ರತೀಕ್ಷೆ ಮಾಡುತ್ತಾರೆ ಹೃದಯವು ಚೀರಿದ…
ಅನುದಿನ ಕವನ-೯೬೭, ಕವಿಯಿತ್ರಿ:ಶ್ರೀ ಮಂಗಳೂರು, ಕವನದ ಶೀರ್ಷಿಕೆ: ಜೀವ ಸಂಚಾರ
ಜೀವ ಸಂಚಾರ… ಎಷ್ಟೊಂದು ದಿನಗಳಾದವು ನಿನ್ನ ಊರಿನ ದಾರಿ ಮರೆತು ಖುಷಿಯ ಹೆಗಲನ್ನೇರಿದ ಸವಾರಿ ಮರೆತು ಎದೆಯ ಅಂಗಳದಲ್ಲಿ ಹರವಿದ ನಿನ್ನ ಮುಗುಳ್ನಗೆಯ ಮೌನ ಮರೆತು ಅದೆಷ್ಟೊಂದು ನಿರಾಸಕ್ತಿ ಅನಾಸಕ್ತಿಗಳ ಧೂಳಿನ ಕಣಗಳು ಹಾರಾಡುತಿವೆ ಗಾಳಿಗುಂಟ ಮುಸ್ಸಂಜೆಯ ಕೊನೆ ದಿನಪನ ನಡೆಯೂ…
ಅನುದಿನ ಕವನ-೯೬೬, ಕವಿ: ಸಿದ್ಧರಾಮಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಎದೆಯಾಳದಲ್ಲೊಂದು ಕಂಬನಿಯಿತ್ತು ನನ್ನ ನಗೆಯಲ್ಲಿ ನೀನದನ್ನು ನೋಡಲೇ ಇಲ್ಲ ಉಸಿರಿನೊಳಗೊಂದು ನಿಟ್ಟುಸಿರಿತ್ತು ನನ್ನ ಮಾತುಗಳ ಸುಳಿಯಲ್ಲಿ ನೀನದ ಕಾಣಲೇ ಇಲ್ಲ ಮನದೊಳಗೊಂದು ದಿಕ್ಕೇಡಿಯಾಗಿ ಅಲೆಯುತಿಹ ಭೋರ್ಗರೆವ ಪ್ರವಾಹ ಅಡಗಿಹುದು ಚಂದದ ಮನೆಯೊಂದು ಕುಸಿದುಬಿತ್ತು ನೆಲ ನಡುಗಿದ ಭರದಲ್ಲಿ ನೀನು ಗುರುತಿಸಲೇ…
ಅನುದಿನ ಕವನ-೯೬೫, ಕವಿ:ಮಹಿಮ, ಬಳ್ಳಾರಿ, ಚಿತ್ರ:ಯಜ್ಞ ಮಂಗಳೂರು
ಬರೆಯುವೆನೆಂಬ ಹಮ್ಮೇಕೆ ಹಳ್ಳಿಗಳಲ್ಲಿವೆ ಓದು ಬರಹ ಬರದ ಅಕ್ಕರೆಯ ಮನಗಳು ನೀನು ಬರೆಯುವುದು ಪೆನ್ನಿನಿಂದ ಅವರು ಬರೆಯುತ್ತಾರೆ ಹೃದಯದಿಂದ ಮಾತನಾಡುತ್ತಾರೆ ಮಮತೆಯಿಂದ ನಿನಗಿರದ ಭಾವನೆಗಳಿವೆ ಅವರಲ್ಲಿ ನಿನಗೆ ಬದುಕುವ ಚಿಂತೆ ಅವರು ನಿನ್ನಂತೆ ಬರೆಯಲಾರರು ಆದರೆ ನಿನ್ನ ಬದುಕಿಸುವವರು ಅವರು ಮೂಗು…
ಅನುದಿನ ಕವನ-೯೬೪, ಕವಿ: ಲೋಕೇಶ್ ಮನ್ವಿತಾ, ಬೆಂಗಳೂರು
ಜಗವ ತೊರೆಯಬೇಕು ನನ್ನ ಜಗದೊಳಗೆ ಉಳಿಯಲು ಬದುಕೆಷ್ಟು ಗಲಾಟೆ ಅದೆಷ್ಟು ನಿರಾಳ ಒಮ್ಮೆ ಸುಂದರ ಗಾಳಿ ಎಂದಿಗೋ ಒಮ್ಮೆ ಸುನಾಮಿ ಮತ್ತೊಮ್ಮೆ ಹಾಗೇ ಶಾಂತ ಸಮುದ್ರ ತನ್ನವರೆಷ್ಟು ಹಿತ ಅಷ್ಟೇ ಸುಡು ಅಗ್ನಿ ಸುಧಾರಿಸಿಕೊಳ್ಳದ ಮನಸ್ಸು ಸಹಿಸಿಕೊಳ್ಳದ ಮನಸ್ಸು ಹೆಸರು ಕೇಳಿದರೆ…
ಅನುದಿನ ಕವನ-೯೬೩, ಕವಿಯಿತ್ರಿ: ವಿನಿಶಾಗೋಪಿನಾಥ್ ಬೆಂಗಳೂರು
ನನ್ನ ಒರಟುತನ ನಿನ್ನನ್ನು ಘಾಸಿಗೊಳಿಸುವುದು, ಗೊತ್ತು ನಿನ್ನ ಗುಣವೇ ನನಗೂ ಬಂದಿರುವುದು, ಮರೆಯಬೇಡ ನಿನಗೇನು ಗೊತ್ತು ಕಡಲಿನಷ್ಟು ಪ್ರೀತಿಯನ್ನು ಒಡಲಲ್ಲಿ ಬಚ್ಚಿಟ್ಟುಕೊಂಡಿರುವೆ ಹೃದಯದ ಮಾತುಗಳನ್ನು ಮೌನದಲಿ ಪೋಣಿಸಿಟ್ಟಿರುವೆ ಎಲ್ಲಿದ್ದರೂ ಈಗಲೇ ಬಂದುಬಿಡು ಅನುರಾಗದ ಅಲೆಗಳ ಮೇಲೆ ತೇಲಿ ತಂಗಾಳಿಯ ಜೊತೆಗೂಡಿ ಬಿಡದೆ…
