ಅನುದಿನ ಕವನ-೧೭೬೪, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ಕನ್ನಡವೆಂದರೆ….

ಕನ್ನಡವೆಂದರೆ…. ಕನ್ನಡವೆಂದರೆ ಅದು ತೋಟದ ಹಾದಿ ತುಳಿದಷ್ಟು ಅಂಗಾಂಗ ಪುಳಕ ಅನುಭವಿಸಿದಷ್ಟು ನವರಸಗಳ ಜಳಕ ಕನ್ನಡವೆಂದರೆ ಅದು ನಿಸರ್ಗಧಾಮ ಆಸ್ವಾದಿಸಿದಷ್ಟು. ಕೋಗಿಲೆಗಳ ಇಂಪಿದೆ ನಯನಿಸಿದಷ್ಟು ನವಿಲುಗಳ ನಾಟ್ಯವಿದೆ. ಕನ್ನಡವೆಂದರೆ ಅಮ್ಮನ ಅಡಿಗೆಮನೆ ಉಂಡಷ್ಟೂ ರಸ ಕವಳದ ರುಚಿಯಿದೆ ಕುಡಿದಷ್ಟೂ ಅಮೃತದ ಸವಿ…

ಅನುದಿನ‌ ಕವನ-೧೭೬೩, ಕವಿ: ತನಾಶಿ, ಬೆಳಗಾವಿ, ಕವನದ ಶೀರ್ಷಿಕೆ:ನಿನ್ನ ನೆನಪೇ ಅಮರ ನಮ್ಮ ಪುನೀತ

ನಿನ್ನ ನೆನಪೇ ಅಮರ ನಮ್ಮ ಪುನೀತ ಬಣ್ಣದಾ ಬದುಕಲ್ಲಿ ಕಾಲಿಟ್ಟ ಗಳಿಗೆಯದು ಬಣ್ಣನೆಗೂ ಸಿಗದಿಂದು ಕೊನೆಯ ದಿವಸದಲಿ ಅಣ್ಣಂದಿರಿರುವಾಗ ತಮ್ಮನಿಗೆ ಸೂಳಾಯ್ತೆ ಕಣ್ಣ ಮುಂದಿನ ಬೊಂಬೆ ಇಲ್ಲವಾಯ್ತೆ|| ಅಕ್ಕರೆಯ ಮಗನಾಗಿ ಸಕ್ಕರೆಯ ಸವಿ ನೀಡಿ ಕಕ್ಕುಲತೆಯಿಂದೆಲ್ಲ ಮಾತನಾಡುತಲಿ ಬಿಕ್ಕು ತಾ ಬರುವಂತೆ…

ಅನುದಿನ ಕವನ-೧೭೬೨, ಕವಿ: ಸಿದ್ಧರಾಮ‌ ಕೂಡ್ಲಿಗಿ , ಕಾವ್ಯ ಪ್ರಕಾರ: ಗಜಲ್

ಗಜಲ್ ಬರೀ ದೊಂದಿಗಳೇ ಉರಿಯುತಿರುವಲ್ಲಿ ದೀಪಗಳ ಹುಡುಕುತಿರುವೆ ಬರೀ ಒಣ ನೋಟಗಳೇ ಇರುವಲ್ಲಿ ಕಣ್ಬೆಳಕುಗಳ ಹುಡುಕುತಿರುವೆ ಯಾರು ಯಾರೋ ಗೀಚುತಿರುವ ಹಾಳೆಯಲಿ ಸಿಕ್ಕುಗಳ ಗೋಜಲು ಅರ್ಥವೇ ಇರದ ಪದಗಳ ಇರುವೆಡೆಯಲ್ಲಿ ಕವಿತೆಗಳ ಹುಡುಕುತಿರುವೆ ಕತ್ತಲೆಯನೇ ತುಂಬಿಕೊಂಡಿರುವ ಮುಖಗಳಲ್ಲಿದೆ ಸೊನ್ನೆ ಭಾವಗಳು ಖಾಲಿ…

ಅನುದಿನ‌ ಕವನ-೧೭೬೧, ಕವಿ: ಎಂ.ಆರ್. ಸತೀಶ್, ಕೋಲಾರ, ಕವನದ ಶೀರ್ಷಿಕೆ: ಕವಲು ದಾರಿಯಲಿ ನಿಂತು..

ಕವಲು ದಾರಿಯಲಿ ನಿಂತು.. ಹೆಜ್ಜೆಗೊಂದು ಸಿಹಿ ಕಹಿ ನೆನಪ ಮನದಿ ಹೊತ್ತು ನಡೆದವಲ್ಲ ದಾರಿ ಸವೆದಂತೆ ಬಹಳ ಹೊತ್ತು ಗೊತ್ತು ಗುರಿ ಇದ್ದೂ ಇಲ್ಲದಂತೆ ಕಾಲ ಉರುಳಿದಂತೆ ಕವಲು ದಾರಿಯ ಸಂದಿಗ್ಧತೆಗೆ ನಿಂತುಬಿಟ್ಟೆವಲ್ಲ… ಬಾಳದಾರಿ ನಡುವೆ ಮೆರೆದ ಮಾತು ಮರೆಯಿತೇಕೆ ವಿರಹದುರಿಗೆ…

ಜ್ಞಾನ-ವಿಜ್ಞಾನ ಹೆಚ್ಚಾದಂತೆ ಜಾತೀಯತೆಯೂ ಹೆಚ್ಚಾಗುತ್ತಿದೆ -ಮಾಜಿ ಸಚಿವ ಎಸ್.ಎಸ್.ಪಾಟೀಲ ವಿಷಾಧ

ಧಾರವಾಡ, ಅ.26 : ಆಧುನಿಕ ಕಾಲದ ಇಂದಿನ ದಿನಮಾನದಲ್ಲಿ ಜ್ಞಾನ-ವಿಜ್ಞಾನ-ತಂತ್ರಜ್ಞಾನ ಹೆಚ್ಚಾದಂತೆ ಸಾಮಾಜಿಕ ಅನಿಷ್ಟ ಆಚರಣೆಗಳಾದ ಜಾತೀಯತೆ, ಅತಿಯಾದ ಧಾರ್ಮಿಕತೆ, ಸ್ವಾರ್ಥ ಹೆಚ್ಚಾಗುತ್ತಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಮಾಜಿ ಸಹಕಾರ ಸಚಿವ ಎಸ್.ಎಸ್.ಪಾಟೀಲ ಅವರು ವಿಷಾಧಿಸಿದರು. ಅವರು ಧಾರವಾಡದ ಕರ್ನಾಟಕ…

ಅನುದಿನ‌ ಕವನ-೧೭೬೦, ಹಿರಿಯ ಕವಿ:‌ಮಹಿಮ, ಬಳ್ಳಾರಿ

ಹೋದ ದಾರಿಯಲಿ ಮತ್ತೆ ಹಿಂದಿರುಗಿ ಬಾರದವರು ಕಾಡುವರು ಮತ್ತೆ ಮತ್ತೆ, ಮನದೊಳು ಇಣುಕುವರು ಅಸ್ಪಷ್ಟ ರೂಪ,ಅಸ್ಪಷ್ಟ ಮಾತುಗಳು ಕನಸಿನೊಳಗೆ, ಅವರ ಮನಸಿನೊಳಗೇನಿದೆಯೋ ಏನು ಹೇಳಲು ಹೊರಟಿರುವರೋ ಒಂದೂ ಅರ್ಥವಾಗದು, ಇನ್ನೂ ಬದುಕುವ ಆಸೆಗಳಿದ್ದವರು, ಏನೇನೋ ಕನಸುಗಳ ಹೊತ್ತಿದ್ದವರು, ಎಷ್ಟು ಬೇಗ ಮಣ್ಣು…

ಅನುದಿನ ಕವನ-೧೭೫೯, ಕವಿ: ಎ.ಎನ್.ರಮೇಶ್. ಗುಬ್ಬಿ., ಕವನದ ಶೀರ್ಷಿಕೆ: ಪ್ರತೀಕ್ಷೆ..!

“ಇದು ಒಲವಿನ ಮೋಡಿ-ಗಾರುಡಿಯ ಲಾಸ್ಯ-ಲಹರಿಯ ಕವಿತೆ. ಪ್ರೇಮಸಂವೇದನೆಗಳ ಕಾವ್ಯ-ಭಾಷ್ಯಗಳ ಭಾವದಾಂಗುಡಿಯ ಅಕ್ಷರ ಪ್ರಣತೆ. ಪುಟ್ಟ ಪುಟ್ಟ ಪದಗಳ ಮೋದ-ಆಮೋದಗಳ ಮಧುರ ನಿನಾದದ ಜೀವಗೀತೆ. ಓದಿದಷ್ಟೂ ಪುಳಕಿಸಿ ಹೃನ್ಮನ ಝೇಂಕರಿಸುತ್ತದೆ. ಏಕೆಂದರೆ ಒಲವಿನ ಓಂಕಾರವೇ ಹಾಗೆ. ಅನುರಾಗ ಠೇಂಕಾರವೇ ಹಾಗೆ. ಏನಂತೀರಾ..?” -ಪ್ರೀತಿಯಿಂದ…

ಅನುದಿನ ಕವನ-೧೭೫೮, ಹಿರಿಯ ಕವಿ: ಡಾ. ಪ್ರಕಾಶ‌ ಖಾಡೆ, ಬಾಗಲಕೋಟೆ

ನನಗೆ ನದಿಯಾಗಬೇಕಿನಿಸಿತು ಗುಡ್ಡಗವ್ವರ ನೋಡಿ ಬದಿಗೆ ಸರಿದೆ. ನನಗೆ ಬೆಟ್ಟವಾಗಬೇಕೆನಿಸಿತು ನಿಂತಲ್ಲೇ ನಿಂತ ಪರಿಯ ಕಂಡು ಬೇಡವೆನಿಸಿತು. ನನಗೆ ಸಾಗರವಾಗಬೇಕೆನಿಸಿತು ಉಪ್ಪು ನೀರಾಗುವ ಏಕ ರುಚಿ ಹಿಡಿಸದಾಯಿತು. ಏನೂ ಬೇಡವೆಂದು ಮನುಷ್ಯನಾಗಬೇಕೆಂದಿದ್ದೇನೆ ಮನುಷ್ಯತ್ವ ಹುಡುಕಿ ನಿಮ್ಮೊಂದಿಗೆ ಮುಖಾಮುಖಿಯಾಗಿದ್ದೇನೆ. – ಡಾ. ಪ್ರಕಾಶ…

ಅನುದಿನ ಕವನ-೧೭೫೭, ಕವಿ: ಸುಧನ್ ಹೊಸೂರು, ಮೈಸೂರು, ಕವನದ ಶೀರ್ಷಿಕೆ: ದೀಪಾವಳಿ ಎಂದರೆ‌ ನನಗೆ…..

ದೀಪಾವಳಿ ಎಂದರೆ ನನಗೆ…. ದೀಪಾವಳಿ ಎಂದರೆ ನನಗೆ ತಿಂಗಳಿಗೂ ಮೊದಲೆ ಉದ್ದನೆಯ ಇಪ್ಪ ನೇರಳೆ, ತೊಗರಿ ಕಡ್ಡಿಗಳ ಆರಿಸಿ ತಂದು ಹದವಾಗಿ ಕಟ್ಟಿ ಒಣಗಳೆಂದು ಗರಿಮನೆಯ ಮೇಲೆ ಅಪ್ಪ ಇಡುತಿದ್ದ ಪಂಜುಗಳ ಎಣಿಸೆನಿಸಿ ಇದು ನನಗೆ ಇದು ನಿನಗೆ ಎಂದು ಮೀಸಲಿರಿಸುತಿದ್ದ…

ಅನುದಿನ ಕವನ-೧೭೫೬, ಹಿರಿಯ ಕವಯತ್ರಿ: ಎಂ ಆರ್ ಕಮಲ, ಬೆಂಗಳೂರು, ಕವನದ ಶೀರ್ಷಿಕೆ: ಕತ್ತಲೆಗೆಂದೂ ಕತ್ತಲಿಲ್ಲ!

ಕತ್ತಲೆಗೆಂದೂ ಕತ್ತಲಿಲ್ಲ! ಅಂಜದಿರು, ಕತ್ತಲೆಗೆಂದೂ ಕತ್ತಲಿಲ್ಲ ಬೆಳಕಿಗೂ ಬೆಳಕಿದೆಯೋ, ಅಂಗಾತ ಮಲಗಿ ಆಕಾಶ ಅಪ್ಪಿದರೆ ನಕ್ಷತ್ರಗಳ ದೀಪಾವಳಿ! ಜೀವ ಜೊತೆಯಾಗುವುದು, ಸಿಡಿದು ದೂರಾಗುವುದು ಸೂರ್ಯನಿಗೂ ತಪ್ಪಲಿಲ್ಲ ಅಪ್ಪದೇ ಅಪ್ಪಿಕೊಳ್ಳುವ ಒಗಟ ಬಿಡಿಸಬೇಕಿಲ್ಲ ಸುತ್ತುವುದು, ಬೆನ್ನ ಹತ್ತುವುದು ಬೆಳಕ ಪಡೆಯುವುದು, ನೀಡುವುದು ಕತ್ತಲಲ್ಲಿ…