ಅನುದಿನ ಕವನ-೧೭೭೧, ಕವಿ:ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್

ಗಜಲ್ ಕಂಡ ಕನಸುಗಳೂ ಹೊತ್ತಿ ಉರಿಯುತಿಹವು ಅವಳಿಲ್ಲದೆ ಕಂಬನಿಗಳೂ ಪ್ರತಿಸಲ ಕಪ್ಪ ಕೇಳುತಿಹವು ಅವಳಿಲ್ಲದೆ ವಿರಹವೆಂಬ ಪದವೇ ಇರಲಿಲ್ಲ ಅವಳ ಅಗಲುವವರೆಗೆ ಚಣಗಳೂ ದಿಕ್ಕುಗಾಣದೆ ಸತ್ತು ಬಿದ್ದಿಹವು ಅವಳಿಲ್ಲದೆ ಹೂಗಳೆಲ್ಲ ಒಡತಿಯಿಲ್ಲದೆ ಬೆಂಕಿಯಲಿ ಬೆಂದಂತಿಹವು ಮಳೆಹನಿಗಳು ಸಹ ಕೆಂಡದ ಹನಿಗಳಾಗಿಹವು ಅವಳಿಲ್ಲದೆ…

ಅನುದಿನ ಕವನ-೧೭೭೦ , ಯುವ ಕವಿ: ತರುಣ್ ಎಂ ಆಂತರ್ಯ, ಟಿ. ನಾಗೇನಹಳ್ಳಿ, ಚಿತ್ರದುರ್ಗ ಜಿ. ಕವನದ ಶೀರ್ಷಿಕೆ:ಕನಸಿನಲ್ಲಾದರು ನೀ ಬರಬೇಕಿತ್ತು..

ಕನಸಿನಲ್ಲಾದರು ನೀ ಬರಬೇಕಿತ್ತು.. ಕನಸೊಂದು ಹೆಣೆದ ಕನಸಿನಲಿ ಕದವ ತೆರೆದೆ ಕೋಣೆಯದು ಮತ್ತೆ ಹೃದಯದ್ದು ಕಣ್ಣ ಮುಂದೆ ನೀ ಸುಳಿದಂತೆ ಭಾಸ ಘಾಸಿಗೊಂಡು ಹೊರಗೆ ಎದ್ದು ಬಂದೆ ಬಾನ ಚಂದಿರನ ಮುಖದಲ್ಲಿ ಸಣ್ಣಗೆ ನಗು ನೀನೆ ಉಸಿರು ನೀಡಿ ಉಳಿಸಿದ ಗಾಳಿ…

ಅನುದಿನ ಕವನ-೧೭೬೯, ಕವಯತ್ರಿ: ಬಿಂದು ಪಿ ಗೌಡ, ಹೊನ್ನಾವರ, ಕವನದ ಶೀರ್ಷಿಕೆ: ಕಾದಿರುವೆ….

ಕಾದಿರುವೆ…. ಮೌನ ಮುಸುಕಿದ ದಾರಿಯಲಿ ತೆರೆದುಕೊಳ್ಳುತ್ತಿವೆ ಆಡದೆ ಉಳಿದಿಹ ನೂರಾರು ಮಾತುಗಳು… ಬಂದು ಭುಜಕ್ಕೊರಗಿ ಆಲಿಸು ಸಾಕು.. ಕಾದಿರುವೆ ಪಕ್ಕದಲ್ಲೊಂದು ಸೀಟು ಕಾಯ್ದಿರಿಸಿ ಖಾಲಿತನವ ಮನದೊಳಗಡಗಿಸಿ ಜಗದ ಕಣ್ಣ ನಂಬಿಸುವೆ ಹಾಸವ ಬೀರಿ, ಆದರೆ ಅಂತರಾತ್ಮದ ನೋಟ ಎದುರಿಸಲಾದಿತೇ ಹೇಳು.. ಒಮ್ಮೆ…

ಅನುದಿನ ಕವನ-೧೭೬೮, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಕನ್ನಡವೆಂದರೆ….

ಕನ್ನಡವೆಂದರೆ…. ಹುಟ್ಟುತ್ತಲೇ ನಾಲಿಗೆ ಮೇಲೆ ಅಮ್ಮ ಮೂಡಿಸಿದ ನುಡಿ ಎದೆಯ ಮಂದಿರದ ಒಳಗೆ ಅಪ್ಪ ಹೊತ್ತಿಸಿದ ಕಿಡಿ..! ಸ್ಲೇಟು ಹಾಳೆಗಳ ಮೇಲೆಲ್ಲ ಗುರುಗಳು ತಿದ್ದಿಸಿದ ಅಕ್ಷರ ತನುಮನದ ನರನರದಲ್ಲೆಲ್ಲ ಗೆಳೆಯರು ಹರಡಿದ ಸ್ವರ.! ಒಡಲಲಿ ಮೊರೆವ ಭಾವವ ಜಗದೆದುರು ಬಿಚ್ಚಿಡುವ ಲಿಪಿ…

ಅನುದಿನ ಕವನ-೧೭೬೭, ಕವಿ: ಡಾ.ಪ್ರಕಾಶ ಗ.ಖಾಡೆ, ಬಾಗಲಕೋಟೆ, ಕವನದ ಶೀರ್ಷಿಕೆ:ಕೂಡಿ ಕಟ್ಟಿದ ಕನ್ನಡ

ಕೂಡಿ ಕಟ್ಟಿದ ಕನ್ನಡ ಬೆಳಗು ಸೂರ್ಯನ ತೇಜ ಪುಂಜವು ನಮ್ಮ ಹಿರಿಮೆಯ ಕನ್ನಡ, ಇರುಳಚಂದಿರನ ಹಾಲು ಬೆಳದಿಂಗಳು ಚೆಲುವ ಚಿಮ್ಮುವ ಕನ್ನಡ. ಹರಿವ ನದಿಯ ಗಾನ ಕಲರವ ಸವಿಯ ಸೊಗಸಿನ ಕನ್ನಡ, ನೂರು ಕೋಕಿಲ ಒಂದೇ ಸ್ವರವು ನಾದ ವೈಭವ ಕನ್ನಡ.…

ಅನುದಿನ‌ ಕವನ-೧೭೬೬, ಹಿರಿಯ ಕವಯತ್ರಿ: ಸರೋಜಿನಿ ಪಡಸಲಗಿ, ಬೆಂಗಳೂರು, ಕವನದ ಶೀರ್ಷಿಕೆ:ಕನ್ನಡಾಂಬೆ ಇರಲೆಮಗೆ ತಾವು !

ಕನ್ನಡಾಂಬೆ ಇರಲೆಮಗೆ ತಾವು ! ಪೊಡಮಡುವೆ ತಾಯೆ ಕನ್ನಡಾಂಬೆ ಎನ್ನಬ್ಬೆ ಬತ್ತದ ಆ ವಾತ್ಸಲ್ಯದೊರತೆಗೆ ನಿನ್ನೆದೆ ತುಂಬಿ ಪುಟಿವ ಭಾವಝರಿಗೆ ನಿನ್ನೊಡಲ ಮಡಿಲ ಅಮೂಲ್ಯ ಸಿರಿಗೆ ನಿನ್ನ ಕಂಗಳಲಿ ಹೊಳೆವ ಕರುಣ ಧಾರೆಗೆ ಪೊಡ ಮಡುವೆ ಎನ್ನ ಪೊರೆವ ಮಾತೆ ನಿನ್ನಂಗಳ…

ವಿಶಿಷ್ಟ ರಾಜ್ಯ ಕರ್ನಾಟಕ -ಪ್ರೊ. ಶರತ್ ಅನಂತಮೂರ್ತಿ

ಶಂಕರಘಟ್ಟ(ಕುವೆಂಪು ವಿವಿ), ನ.1: ಆಡು ಭಾಷೆಯಲ್ಲಿ ಕಲಿಯದೆ ಹೋದರೆ ಕಲಿಕೆ ಕುಂಠಿತವಾಗುತ್ತದೆ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅನನ್ಯವಾದ ಇತಿಹಾಸ ಪರಂಪರೆ ಇದೆ. ಇಪ್ಪತ್ತನೇ ಶತಮಾನದಲ್ಲಿ ಕನ್ನಡ ವೈಚಾರಿಕತೆ ಮತ್ತು ವೈಜ್ಷಾನಿಕ ಕ್ಷೇತ್ರದಲ್ಲಿ ಮೊದಲನೇ ಸ್ಥಾನವನ್ನುಗಳಿಸಿದೆ. ಕನ್ನಡ ನೆಲ ಜಲ…

ಅನುದಿನ ಕವನ-೧೭೬೫, ಕವಯತ್ರಿ: ಬಿಂದು ಪಿ ಗೌಡ, ಹೊನ್ನಾವರ, ಕವನದ ಶೀರ್ಷಿಕೆ:ತಂಗಾಳಿಯಾಗಿ ತೀಡಿ ಬಾ…!

ತಂಗಾಳಿಯಾಗಿ ತೀಡಿ ಬಾ…! ನಿನ್ನ ನೆನಪುಗಳು ಕಾರ್ಮೋಡದಂತೆ ಹೃನ್ಮನವ ಆವರಿಸಿದಾಗಲೆಲ್ಲ ನಾ ನನಗಾಗಿ ಕಂಬನಿಯ ಹನಿಸಿ ಮಳೆಯಾಗುತ್ತೇನೆ ನಲ್ಲ..! ಹರಿದು ಹಗುರಾದೆ ಎನಿಸಿದರೂ ಆಗ ಕ್ಷಣದೆ ಹೃದಯವೇ ಬಲುಭಾರ ಹೆಚ್ಚುವುದು ಮತ್ತೆ ನಿನ್ನ ಸೇರಬೇಕೆಂಬ ಆಸೆಯೊಂದು ಮನದ ಪೂರಾ ನೋವನ್ನಡಗಿಸಿ ನಗುವೊಂದನೇ…

ಅನುದಿನ ಕವನ-೧೭೬೪, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ:ಕನ್ನಡವೆಂದರೆ….

ಕನ್ನಡವೆಂದರೆ…. ಕನ್ನಡವೆಂದರೆ ಅದು ತೋಟದ ಹಾದಿ ತುಳಿದಷ್ಟು ಅಂಗಾಂಗ ಪುಳಕ ಅನುಭವಿಸಿದಷ್ಟು ನವರಸಗಳ ಜಳಕ ಕನ್ನಡವೆಂದರೆ ಅದು ನಿಸರ್ಗಧಾಮ ಆಸ್ವಾದಿಸಿದಷ್ಟು. ಕೋಗಿಲೆಗಳ ಇಂಪಿದೆ ನಯನಿಸಿದಷ್ಟು ನವಿಲುಗಳ ನಾಟ್ಯವಿದೆ. ಕನ್ನಡವೆಂದರೆ ಅಮ್ಮನ ಅಡಿಗೆಮನೆ ಉಂಡಷ್ಟೂ ರಸ ಕವಳದ ರುಚಿಯಿದೆ ಕುಡಿದಷ್ಟೂ ಅಮೃತದ ಸವಿ…

ಅನುದಿನ‌ ಕವನ-೧೭೬೩, ಕವಿ: ತನಾಶಿ, ಬೆಳಗಾವಿ, ಕವನದ ಶೀರ್ಷಿಕೆ:ನಿನ್ನ ನೆನಪೇ ಅಮರ ನಮ್ಮ ಪುನೀತ

ನಿನ್ನ ನೆನಪೇ ಅಮರ ನಮ್ಮ ಪುನೀತ ಬಣ್ಣದಾ ಬದುಕಲ್ಲಿ ಕಾಲಿಟ್ಟ ಗಳಿಗೆಯದು ಬಣ್ಣನೆಗೂ ಸಿಗದಿಂದು ಕೊನೆಯ ದಿವಸದಲಿ ಅಣ್ಣಂದಿರಿರುವಾಗ ತಮ್ಮನಿಗೆ ಸೂಳಾಯ್ತೆ ಕಣ್ಣ ಮುಂದಿನ ಬೊಂಬೆ ಇಲ್ಲವಾಯ್ತೆ|| ಅಕ್ಕರೆಯ ಮಗನಾಗಿ ಸಕ್ಕರೆಯ ಸವಿ ನೀಡಿ ಕಕ್ಕುಲತೆಯಿಂದೆಲ್ಲ ಮಾತನಾಡುತಲಿ ಬಿಕ್ಕು ತಾ ಬರುವಂತೆ…