ಅನುದಿನ ಕವನ-೧೭೫೫, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು,

ಭಯವು ಹಿಮ್ಮೆಟ್ಟುವಾಗ ತಾಯಿ ಮಡಿಲಂತೆ ಸಿಗುವ ಬೆಳಕೆಷ್ಟು ಸಖ್ಯ ಅಜ್ಞಾನದಲ್ಲಿ ಅಲೆಯುವಾಗ ಜ್ಞಾನ ದೀವಿಗೆಯಂತೆ ಸಿಗುವ ಬೆಳಕೆಷ್ಟು ಸಖ್ಯ ಸಾಲುಗಳ ಅಳಿಸುವಾಗ ಮತ್ತೆ ಚಿತ್ತಾಗದಂತೆ ಸಿಗುವ ಬೆಳಕೆಷ್ಟು ಸಖ್ಯ ನೋವುಗಳ ಎಣಿಸುವಾಗ ಇರಿಸಿಕೊಳ್ಳಲು ಜೇಬಿನಂತೆ ಸಿಗುವ ಬೆಳಕೆಷ್ಟು ಸಖ್ಯ ಭರವಸೆಯು ಕುಸಿದಾಗ…

ಅನುದಿನ ಕವನ-೧೭೫೪, ಕವಿ: ಎ.ಎಂ.ಪಿ ವೀರೇಶಸ್ವಾಮಿ ಹೊಳಗುಂದಿ., ಕವನದ ಶೀರ್ಷಿಕೆ: ದೀಪಾವಳಿಯ ಮಹಾಬೆಳಗು

ದೀಪಾವಳಿಯ ಮಹಾಬೆಳಗು. ಮೌಢ್ಯಗಳ ಮುರಿಯದ ಮನುಜ ಭಾಹ್ಯಾಕಾಶಕೆ ಹಾರಿದೊಡೆ ಸಿಕ್ಕೀತು ಚಂದಿರನಂಗಳ ಆದರೆ ಸಿಕ್ಕೀತೆ ಬೆಳದಿಂಗಳು? ಹೃದಯ ಅರಿಯದ ಮನುಜ ಶರಧಿ ಜಾಲಾಡಿದೊಡೆ ಸಿಕ್ಕೀತು ಸ್ವಾತಿಮುತ್ತು ಆದರೆ ಪ್ರೀತಿಗೆಲ್ಲಿದೆ ಕಿಮ್ಮತ್ತು? ಕ್ರೌರ್ಯದ ಕಂದರಕಿಳಿದ ಮನುಜ ಹಿಮಾಲಯ ಏರಿದೊಡೆ ಸಿಕ್ಕೀತು ತುತ್ತತುದಿ ಆದರೆದ…

ಅನುದಿನ ಕವನ-೧೭೫೩, ಹಿರಿಯ ಕವಿ:ಮಹಿಮ, ಬಳ್ಳಾರಿ, ಕವನದ ಶೀರ್ಷಿಕೆ:ಕೇಳು ನನ್ನ ಕವಿತೆ ಹೇಗಿದೆ ಎಂದು ಕೇಳಿ ಹೇಳು

ಕೇಳು ನನ್ನ ಕವಿತೆ ಹೇಗಿದೆ ಎಂದು ಕೇಳಿ ಹೇಳು ಕಷ್ಟಪಟ್ಟು ಯೋಚಿಸಿ ಬರೆದ ಕವಿತೆ ಬೆನ್ನು ತಟ್ಟಿದವರೆಷ್ಟೋ ಜನ ನಾ ಬರೆದ ಕವಿತೆಗೆ ಬಂದ ಪ್ರಶಸ್ತಿಗಳೆಷ್ಟೋ ಬಹುಮಾನ ಹೊಗಳಿಕೆಗಳೆಷ್ಟೋ ನೀನರಿಯೆ ಒಮ್ಮೆ ಕೇಳು ಕಿವಿಗೊಟ್ಟು ಮನಸಿಟ್ಟು ನಾ ಬರೆದ ಕವಿತೆಯ ಬಿಸಾಡು…

ಅನುದಿನ ಕವನ- ೧೭೫೨, ಕವಯತ್ರಿ: ಡಾ. ಭಾರತಿ ಅಶೋಕ, ಹೊಸಪೇಟೆ, ಕವನದ ಶೀರ್ಷಿಕೆ: ಅರಳದ‌ ಬದುಕು

ಅರಳದ ಬದುಕು ಕರುಳ ಬಳ್ಳಿಗೆ ಬೆಂಕಿ ಇಟ್ಟು ಹೊಟ್ಟೆ ಕಿಚ್ಚಿಗೆ ಒದ್ದೆ ಬಟ್ಟೆ ಹಾಕಿ ಬೋರಲು ಬಿದ್ದಿವೆ ಅಮಾಯಕ ಬದಕುಗಳು ಕಣ್ಣಲ್ಲಿ ಭವಿಷ್ಯ ಕರಗಿ ದಿಟ್ಟಿ ಮಸುಕಾಗಿದೆ ಬೆಳಗಬೇಕಿದ್ದ ಮಿಣುಕು ಬೆಳಕಿಂದು ಮಣ್ಣಾಗಲು ಇನ್ನೆಲ್ಲಿಯ ಬೆಳಕು. ಬೇಲಿ ಎದ್ದು ಹೊಲ ಮೆಯ್ಯಲು…

ಅನುದಿನ ಕವನ-೧೭೫೧, ಕವಿ: ನಾಗತಿಹಳ್ಳಿ ರಮೇಶ್, ಬೆಂಗಳೂರು

ಯಾರೋ ಬರೆದ ಚಿತ್ರದಲ್ಲಿ ನಿನ್ನ ಪಾತ್ರವಾಗಿ ಹುಡುಕುವೇ … ಯಾರೋ ಕೆತ್ತಿದ ಶಿಲ್ಪದಲ್ಲಿ ನಿನ್ನ ರೂಪ ಕಾಣುವೇ… ಯಾರೋ ಬರೆದ ಕಾವ್ಯದಲ್ಲಿ ನಿನ್ನ ಹೃದಯ ಹುಡುಕಿ ಅಲೆಯುವೇ… ಯಾರೋ ಹಾಡಿದ ಹಾಡಿನಲ್ಲಿ ನಿನ್ನ ಭಾವವಾಗಿ ಕಾಣುವೇ … ಇನ್ಯಾರದೋ ಸ್ಪರ್ಶದಲ್ಲಿ ನಿನ್ನ…

ಅನುದಿನ ಕವನ-೧೭೫೦, ಕವಯತ್ರಿ: ಮಮತಾ ಅರಸೀಕೆರೆ

ಒಮ್ಮೆ ಅಪ್ಪಿಕೊಂಡು ನೋಡಿ ಯಾರನ್ನು ಎಂದು ನೀವೇ ನಿರ್ಧರಿಸಿ ಅಪ್ಪುಗೆಯ ಬಿಸುಪನ್ನು, ಸೊಗಸನ್ನು ಅನುಭವಕ್ಕೆ ತಂದುಕೊಳ್ಳಲಾದರೂ ಒಮ್ಮೆ ತಬ್ಬಿಕೊಂಡು ನಿಲ್ಲಿ ಹಗೂರವಾಗಿ, ಬಿಗಿಯಾಗಿ ಅಪ್ಪುವಾಗ ಏನಾಗುತ್ತದೆ ಹೇಳಿ ಎದುರಲ್ಲಿರುತ್ತದೆ ಒಂದು ಆಕೃತಿ ಶಿಲೆಯಂತೆ ನೀವಿರುತ್ತೀರಿ ಅಮೂರ್ತವು ಕಲೆಯ ಮೂರ್ತವಾಗಬೇಕೆಂದರೆ ಉಳಿಯ ಅಪ್ಪುಗೆಯೂ…

ಅನುದಿನ ಕವನ-೧೭೪೯, ಕವಿ: ಎ.ಎನ್ ರಮೇಶ್, ಗುಬ್ಬಿ, ಕವನದ ಶೀರ್ಷಿಕೆ: ಸಂತ….!

“ಇದು ಸಂತನಾಗುವ ಸತ್ಯ ಸಮೀಕರಣದ ಸಾತ್ವಿಕ ಕವಿತೆ. ಒಳಗಣ ಸತ್ವ, ಹೊರಗಣ ಮಹತ್ವ ಏಕೀಕರಣವಾಗುವ ತಾತ್ವಿಕ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಅರಿವಿನ ಹರಿವಿದೆ. ಅರ್ಥೈಸಿದಷ್ಟೂ ಆಧ್ಯಾತ್ಮದ ಹರವಿದೆ. ಆತ್ಮೋನ್ನತಿಯ ಸಾರವಿದೆ. ಬೆಳಕ ನಿಯತಿಯ ವಿಸ್ತಾರವಿದೆ. ಓದಿದಷ್ಟೂ ನಿಮಗೆ ಖಂಡಿತಾ ಇಷ್ಟವಾಗುತ್ತದೆ. ಏಕೆಂದರೆ…

ಅನುದಿನ ಕವನ-೧೭೪೮, ಕವಯತ್ರಿ: ಮಮತಾ ಅರಸೀಕೆರೆ, ಕವನದ ಶೀರ್ಷಿಕೆ:ನಿನ್ನ ನೆನಪಾದಾಗ

ನಿನ್ನ ನೆನಪಾದಾಗ ನಿನ್ನ ನೆನಪಾದಾಗ ಬಿರಿಯುತ್ತದಲ್ಲ ಎದೆ ಅರಳುತ್ತದಲ್ಲ ಮುಗುಳ್ನಗು ಪಕ್ಕದಲ್ಲೇ ಹೂ ಬೀಳುವ ನಿಶಬ್ದತೆಯೂ ಉಸುರುತ್ತದೆ ನಿನ್ನ ಹೆಸರಿನ ಪುಳಕ ನಂತರ ಮಿಲನದ ನಡುಕ ಮಳೆಯ ಮೊದಲ ಹನಿ ಬೀಳುವ ಮುನ್ನದ ವಾಸನೆ ಯಾತರದು? ನೀನು ಸರಿದಾಡಿದಾಗಿನ ನೆನಪು. ಕಣ್ಣಿನ…

ಅನುದಿನ ಕವನ-೧೭೪೮, ಕವಯತ್ರಿ: ಸಂಘಮಿತ್ರೆ ನಾಗರಘಟ್ಟ, ಬೆಂಗಳೂರು, ಕವನದ ಶೀರ್ಷಿಕೆ: ಸಾಲು ಸಾಲು…

ಸಾಲು ಸಾಲು … ಪ್ರೀತಿಗೆ ಯಾವ ಜಾತಿಯೂ ಬೇಡ ಎನ್ನುವ ನಾವುಗಳೇ ಕೆಲವೊಮ್ಮೆ ನಮ್ಮ ಹೃದಯವನ್ನು ಸಂಪ್ರದಾಯಗಳ ತೀರದಲ್ಲಿ ಮುಳುಗಿಸಿ ನೀರು ಕುಡಿಸುತ್ತಿರುತ್ತೇವೆ. ಕೆಲವೊಮ್ಮೆ ಹಾಳೆಗಳಲ್ಲಿ ಬಿಡಿಸುವ ರೇಖೆಗಳನ್ನು ನಮ್ಮ ಉಸಿರಿನ ಮೇಲೆ ಎಳೆದುಕೊಂಡಿರುತ್ತೇವೆ.. ಇಂದಿಗೂ ನಮ್ಮ ಒಲವನ್ನು ಜಾತಿ- ಧರ್ಮಗಳೇ…

ಅನುದಿನ ಕವನ-೧೭೪೭, ಕವಿ:ಲೋಕಿ, ಬೆಂಗಳೂರು

ಅಪ್ಪ ಬಿಸಾಡಿದ್ದ ಅದೇಷ್ಟೋ ಹಾಳೆ ಉಂಡೆಗಳ ನಡುವೆ ಒಂದನ್ನೆತ್ತಿ ಪುಟ್ಟ ಪೋರಿ ಬಿಡಿಸುತ್ತಾಳೆ ಆಯುಷ್ಯ ಕಳೆದ ಹಾಳೆಯ ನಡುವೆ ಕೆಲವು ಪೂರ್ಣಪದಗಳು ಕೆಲವು ಹೊಂದಾಣಿಕೆಗೆ ನಿಲುಕದ ಅಕ್ಷರಗಳು ಗೀಚಿ ಗೀಚಿ ಕಾಟು ಹಾಕಿದ ಚಿತ್ತಾದ ಸಾಲುಗಳು ಅಚ್ಚರಿ ಎಂಬಂತೆ ಅಲ್ಲಲ್ಲಿ ನೋವಿನ…