ಬೆಳಕ ಮಾತುಗಳು… ಅವ್ವ ಮೊನ್ನೆ ನಿಧನಳಾದಳು ಏನು ಹೊತ್ತುಕೊಂಡು ಹೋಗಲಿಲ್ಲ ಒಳ್ಳೆಯತನವೊಂದನ್ನು ಬಿಟ್ಟು ಅಪ್ಪ ಮೂರು ವರ್ಷಗಳ ಹಿಂದೆ ನಿಧನನಾದ ಏನು ಹೊತ್ತುಕೊಂಡು ಹೋಗಲಿಲ್ಲ ಮಕ್ಕಳ ಸಾಧನೆಗಳೊಂದಷ್ಟನ್ನು ಬಿಟ್ಟು ಅಪ್ಪ ಉಪ್ಪಿಗು ಕಷ್ಟ ಪಟ್ಟಿದ್ದ ಕಂಡೆ ಅವ್ವ ಪಾವು ಹಾಲನ್ನು ಕಡ…
Category: ಅನುದಿನ ಕವನ
ಅನುದಿನ ಕವನ-೧೬೭೩, ಕವಯತ್ರಿ: ಪಿ. ಕಾತ್ಯಾಯಿನಿ, ಕೊಳ್ಳೆಗಾಲ, ಕವನದ ಶೀರ್ಷಿಕೆ: ಬಿದಿರಿನ ಕಳೆ
ಬಿದಿರಿನ ಕಳೆ ಸುಂದರವಾಗಿ ಬಿದಿರಿದು ಬೆಳೆದಿದೆ ರಂಗು ರಂಗಾಗಿ ಕಂಗಳ ಸೆಳೆದಿದೆ ತಿಂಗಳ ಬೆಳಕಲಿ ಚಂದದಿ ಹೊಳೆದಿದೆ ಮಂಗಳ ಕಾರ್ಯಕೆ ಜೊತೆಯಾ ನೀಡಿದೆ. ಕೊಳಲಾಗುತಲಿ ಅಧರವ ಕರೆದಿದೆ ಬುಟ್ಟಿಯಾಗುತ ಸೊoಟದಿ ಕುಳಿತಿದೆ ಮೊರವಾಗುತಲಿ ಕರದಲಿ ಮಿoಚಿದೆ ತೊಟ್ಟಿಲಾಗುತ ಮಗುವನು ರಮಿಸಿದೆ. ಪ್ರಕೃತಿಗೆ…
ಅನುದಿನ ಕವನ-೧೬೭೨, ಯುವ ಕವಿ: ತರುಣ್ ಎಂ ಆಂತರ್ಯ, ಚಿತ್ರದುರ್ಗ, ಕವನದ ಶೀರ್ಷಿಕೆ: ಪುಸ್ತಕವಾಗಬೇಕು…
ಪುಸ್ತಕವಾಗಬೇಕು…📚 ಪುಸ್ತಕವಾಗಿಯಾದರು ನಿನ್ನ ಕೈ ಸೇರಬೇಕು ನನ್ನ ಕಡೆ ತಿರುಗು ನೋಡದ ನಿನ್ನ ಕೊಬ್ಬಿದ ಕಣ್ಣುಗಳು ದಾರಿಯಲ್ಲಿ ಬೇರಾರ ಕೈಲಿದ್ದಾಗ ನನ್ನ ಚಂದದ ಮುಖ ಮುಟವ ಕಂಡು ಕೊಳ್ಳುವ ತವಕ ತರಿಸಬೇಕು ಎದೆಯ ಭಾವಗಳ ಬಗ್ಗೆ ಕಿಂಚಿತ್ತೂ ಕರುಣೆ ಇರದ ನೀನು…
ಅನುದಿನ ಕವನ-೧೬೭೧, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ಸುಳ್ಯ, ಕವನದ ಶೀರ್ಷಿಕೆ: ಶ್ರಾವಣದ ನಡುವೆ
ಶ್ರಾವಣದ ನಡುವೆ ಮಸಿ ಮೆತ್ತಿದಾಕಾಶ,ಕೆಳಗೆ ಜಲಮಯ ಭೂಮಿ ನಡುವೆ ಒಂದಾಗಿಸುವ ಮಂಜು ಪರದೆ ಕಪ್ಪುಗಟ್ಟಿದ ಹಸಿರು ಮುಖವೆಲ್ಲ ಆಗಸಕೆ ತಳದಲ್ಲಿ ಮುಲುಗುಡುವ ಜೀವಜಾತ್ರೆ. ಬಾನಲ್ಲಿ ಕಾತರದ ಮಿಂಚು ಮೋಡದ ಆಚೆ ಧಡಧಡಿಸುವೆದೆ ಗುಡುಗು,ಅಶ್ರು ಬಿಂದು ಮರಗಳಿಗೊ ಈಗ ಬೇರಿನ ಚಿಂತೆ,ಈ ಮಣ್ಣ…
ಅನುದಿನ ಕವನ-೧೬೭೦, ಕವಿ: ಲೋಕಿ(ಲೋಕೇಶ್ ಮನ್ವಿತಾ), ಬೆಂಗಳೂರು
ಇವನದೊಂದು ಮೌನ ಕಾರಣವಾಗಿ ಭೇಟಿ ಮಾಡಬೇಡವೆಂದು ಅಪ್ಪಣೆ ಹೊರಡಿಸುತ್ತಾಳೆ ಹೂಗಳು ನಗುತ್ತವೆ ಹಟದ ಪರದೆಯ ಹಿಂದಿನ ಪ್ರೀತಿಯ ಕಂಡು ಇರುವ ಉಸಾಬರಿಯಲ್ಲಿ ಹೊತ್ತ ಜವಬ್ದಾರಿಯಲ್ಲಿ ಅವಳದೊಂದು ಮೊಗ ಕಂಡೊಂಡನೆ ಸಮಾಧಾನದ ಅಲೆ ಎಬ್ಬಿಸುತ್ತಾ ಪ್ರಪುಲ್ಲತೆಯ ಆಸ್ವಾದಕ್ಕೆ ವಿರಾಮ ದೊರಕಿತೆ ಎಂದು ಕೊರಗುತ್ತಾನೆ…
ಅನುದಿನ ಕವನ-೧೬೬೯, ಕವಿ: ಸಿದ್ಧರಾಮ ಸಿ ಸರಸಂಬಿ, ಕಲಬುರ್ಗಿ, ಕವನದ ಶೀರ್ಷಿಕೆ: ರೈತರ ಮೊಗವು ಅರಳಲಿ
ರೈತರ ಮೊಗವು ಅರಳಲಿ ಬಿಡದೆ ಮೋಡಗಳೆ ಓಡುತ್ತಿಹಿರಿ ಎಲ್ಲಿ ಬರಿದಾಗಿವೆ ಹೊಳೆ ಓಡದೆ ನೀವು ನಿಲ್ಲಿ ಬಿತ್ತಿದ ಬೆಳೆಗಳು ನಂಬಿವೆ ಭವದಲ್ಲಿ ತುಂತುರು ಹನಿಗಳು ಹೋಗಬಾರದೆ ಚೆಲ್ಲಿ ಕರಗಿ ಮೋಡಗಳು ಮಳೆಯು ಸುರಿಯಲಿ ಬತ್ತಿದ ಬಾವಿಗಳು ತುಂಬಿ ತಾ ಹರಿಯಲಿ ನಿತ್ಯ…
ಅನುದಿನ ಕವನ-೧೬೬೮, ಕವಿ:ಎ.ಎನ್.ರಮೇಶ್.ಗುಬ್ಬಿ. ಕವನದ ಶೀರ್ಷಿಕೆ: ಜೋಕೆ..!
“ಇದು ಅನುದಿನವು ನಮ್ಮೊಳಗೆ ನಾವೇ ಎಚ್ಚರಿಸಿಕೊಳ್ಳಬೇಕಾದ ಬದುಕಿನ ನಡೆಗಳ ಕವಿತೆ. ಅನುಕ್ಷಣವೂ ಅಂತರಾತ್ಮ ಅಡಿಗಡಿಗೂ ಅನುರಣಿಸುತ್ತಾ ನಮ್ಮನ್ನು ಜಾಗೃತಗೊಳಿಸಬೇಕಾದ ಬೆಳಕಿನ ನುಡಿಗಳ ಭಾವಗೀತೆ. ಇಲ್ಲಿ ಆಳಕ್ಕಿಳಿದಷ್ಟೂ ಜೀವದ ಸತ್ಯ-ಸತ್ವಗಳ ಸಾರವಿದೆ. ಅರ್ಥೈಸಿದಷ್ಟೂ ಜೀವನದ ತತ್ವ-ಮಹತ್ವಗಳ ವಿಸ್ತಾರವಿದೆ. ಅಂತಿಮವಾಗಿ ಇಲ್ಲಿ ನಮ್ಮ ಬಾಳಪಯಣಕೆ…
ಅನುದಿನ ಕವನ-೧೬೬೭, ಕವಯತ್ರಿ: ಶಾಂತಾ ಪಾಟೀಲ್, ಸಿಂಧನೂರು, ಕವನದ ಶೀರ್ಷಿಕೆ:ಒಲವ ಹಂಬಲ
ಒಲವ ಹಂಬಲ ನನ್ನೀ ಮಂಕು ಕವಿದ ಭಾವಕೆ .. ಪ್ರತ್ಯುಷೆಯ ರವಿಯ ರಜತ ರಶ್ಮಿಯಂತೆ ಹಿತವಾಗಿ ಸೋಕು ನನ್ನ… ಈ ಮನದಿ ನೀರಸತೆಯ ಇಬ್ಬನಿ ಕರಗಿ ಒಲವ ಭಾವ ಹೂವಾಗಿ ಅರಳಲಿ.! ತಮವೇ ಹೊದ್ದು ನಿಂತ ನನ್ನೀ ಮನಕೆ.. ಪೌರ್ಣಮಿಯ ರಜನಿಕಾಂತಿಯಂತೆ…
ಅನುದಿನ ಕವನ-೧೬೬೬, ಹಿರಿಯ ಕವಿ: ಶ್ರೀನಾಥ್ ರಾಯಸಂ, ಬೆಂಗಳೂರು, ಕವನದ ಶೀರ್ಷಿಕೆ:ಹೇಗೆ ಬರೆಯಬೇಕು ಕವಿತೆ ?!
ಹೇಗೆ ಬರೆಯಬೇಕು ಕವಿತೆ ?! ಕವಿತೆ ಬರೆಯಬೇಕು, ಬರೆದದ್ದು ಎಲ್ಲರೂ ಓದುವಂತಿರಬೇಕು ಓದಿ ಮಲುಕು ಹಾಕುವಂತಿರಬೇಕು ರಮ್ಯತೆ ಇರಬೇಕು ರಮ್ ಕುಡಿದಂತಿರಬೇಕು ಅಸಹ್ಯವಾಗಬಾರದು, ಅಶ್ಲೀಲವಿರಬಾರದು ಹೊಗಳಿರಬೇಕು, ನೇರ ಟೀಕೆಯಂತಿರಬಾರದು ಓದಿದವರೆಲ್ಲ ಇಂಥದು ನನಗೂ ಇರಬೇಕು ಅನ್ನುವಂತಿರಬೇಕು ಆತುರದಲ್ಲಿ ಕವಿತೆ ಗದ್ಯದಂತಾಗಬಾರದು ಗದ್ಯ…
ಅನುದಿನ ಕವನ-೧೬೬೫, ಕವಿ: ಟಿ.ಪಿ.ಉಮೇಶ್, ಹೊಳಲ್ಕೆರೆ, ಕವನದ ಶೀರ್ಷಿಕೆ:ನಿನ್ನ ಒಲವು ದೊರೆತ ಮೇಲೆ!
ನಿನ್ನ ಒಲವು ದೊರೆತ ಮೇಲೆ! ನಿನ್ನ ಒಲವು ದೊರೆತ ಮೇಲೆ ಹೃದಯಕ್ಕೆ ಬದುಕಲೆಬೇಕೆಂಬ ಆಸೆಯಾಗಿದೆ! ನಿನ್ನ ಚೆಲುವು ಸೆಳೆದ ಮೇಲೆ ಮೈಮನ ಪುಟಗೊಂಡ ರಂಗಿನ ಹಕ್ಕಿಯಾಗಿದೆ! ನಿನ್ನ ನವಿರು ಸ್ಪರ್ಶದ ಪುಳಕ ಹೊಸತು ಜೀವನಕ್ಕೆ ಸ್ಪೂರ್ತಿ ಚೈತನ್ಯವಾಗಿದೆ! ನಿನ್ನ ಮಲ್ಲಿಗೆ ನಗೆಯ…