ಅನುದಿನ ಕವನ-೧೦೫೯, ಕವಿ: ಲಕ್ಷ್ಮಣ ವಿ ಎ, ಬೆಂಗಳೂರು, ಕವನದ ಶೀರ್ಷಿಕೆ: ಹಸಿವು

ಹಸಿವು ಏಯ್ ಓಡಬೇಡ್ವೋ ಬಾರೋ ಇಲ್ಲಿ ಒಂದಿಷ್ಟು ಹಾಲು ಕುಡಿದು ಹೋಗೊ ಎಂದು ಅವಳು ಮೆಟ್ಟಿಲಿಳಿದು ಗೇಟಿನ ತನಕ ಹಾಲಿನ ಗ್ಲಾಸು ಹಿಡಿದುಕೊಂಡೇ ಬೆನ್ನಟ್ಟಿದ್ದಳು ಇಂದು ಅವನು ಆಗಲೇ ಛಂಗನೆ ನೆಗೆದು ಸ್ಕೂಟಿಯ ಮೇಲಿದ್ದ ಪ್ರತಿ ದಿನ ಇವನು ಹಾಗೆಯೇ !…

ಅನುದಿನ ಕವನ-೧೦೫೮, ಕವಿ: ಡಾ.ವೆಂಕಟೇಶಯ್ಯ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಮಿಥಿಲೆಯ ಮಾವಿನ ಮರ

ಮಿಥಿಲೆಯ ಮಾವಿನ ಮರ ಮರ ನಿಂತಿದೆ ಸುಮ್ಮನೆ ಮುಂಚಿನ ದಿನ ಸಿಡಿಲು ಬಡಿದಂತೆ ಪಂಜರದಲ್ಲಿ ಗಾಳಿ ಹಿಡಿದು ಕಟ್ಟಿದಂತೆ ಎಲೆ ಅಲುಗದೆ ನೋವಿನೊಳಗದ್ದಿ ಮೂರ್ಛೆ ಬಿದ್ದಿದೆ; ಮಿಥಿಲೆಯೂ ಹಾಗೆಯೇ ಬಿಕ್ಕಿದರೂ ಬೆಂಕಿ ಬೀಳುತ್ತದೆ. ಮಾತಾಡಿಸಿದೆ ಮರವನ್ನು ಗದ್ಗದ ಗದ ಗದ ನುಡಿದು…

ಅನುದಿನ ಕವನ-೧೦೫೭, ಕವಿ: ಹಾರೋಹಳ್ಳಿ ರವೀಂದ್ರ, ಮೈಸೂರು, ಕವನದ ಶೀರ್ಷಿಕೆ: ಚಿಂದಿ ಹಾಯುವ ಹುಡುಗ ನಾನು

ಚಿಂದಿ ಹಾಯುವ ಹುಡುಗ ನಾನು….. ಒಂದೊಂದೆ  ಚಿಂದಿಯನ್ನು ಹಾಯ್ದುಕೊಂಡೆ ಒಂದನ್ನೊಂದು ಹೊಲೆಯುತ್ತಲೇ ಇರುವೆ ಒಂದು ಕಡೆ ಹೊಲೆದರೆ, ಮತ್ತೊಂದು ಕಡೆ ಕಿತ್ತು ಬರುತ್ತಿದೆ ಆದರೂ, ಜೋಡಿಸುತ್ತಿನೇಂಬ ಭರವಸೆ ಮಾತ್ರ ಸೋತಿಲ್ಲ ಕಲ್ಲು ಹಾಯುವ ಹುಡುಗ ನಾನು ಬಗೆ ಬಗೆಯ ಕಲ್ಲನ್ನು ಹಾಯ್ದುಕೊಂಡೆ…

ಅನುದಿನ ಕವನ-೧೦೫೬, ಕವಿಯಿತ್ರಿ:ರಮ್ಯ ಕೆ ಜಿ, ಮೂರ್ನಾಡು, ಕೊಡಗು, [ಮಕ್ಕಳ ಪದ್ಯ]

ಮಕ್ಕಳ ಪದ್ಯ ಅಮ್ಮ ನಂಗೊಂದು ಪೆನ್ಸಿಲ್ ಬೇಕು ಚಿತ್ರ ಬಿಡಿಸೋಕೆ ಜೊತೆಗೆ ಒಂದು ರಬ್ಬರ್ ಕೊಡ್ಸು ತಪ್ಪು ಅಳಿಸೋಕೆ… ಅಮ್ಮ ನಂಗೊಂದು ಅಂಗಿ ಬೇಕು ಪೇಟೆಗೆ ಹೋಗೋಕೆ ಜೊತೆಗೆ ಒಂದು ಲುಂಗಿ ಕೊಡ್ಸು ಡಾನ್ಸು ಮಾಡೋಕೆ… ಅಮ್ಮ ನಂಗೊಂದು ದೋಸೆ ಹಾಕು…

ಅನುದಿನ ಕವನ-೧೦೫೫, ಕವಿಯಿತ್ರಿ: ಸುಮತಿ ಕೃಷ್ಣಮೂರ್ತಿ, ವಿದ್ಯಾನಗರ, ತೋರಣಗಲ್ಲು, ಬಳ್ಳಾರಿ ಜಿ. ಕವನದ ಶೀರ್ಷಿಕೆ: ಭಾವಸೆರೆ

ಭಾವಸೆರೆ ದೀಪವಾಗಿ ಬೆಳಕ ಕೊಡಲು ಹೊರಟ ಬದುಕಿಗೆ ಅಡಿಯಲಿದ್ದ ನಿಶೆಯ ನಂಟು ಮೀರಲಾಯಿತೆ? ತೆಪ್ಪವಾಗಿ ಭವ ಸಾಗರ ದಾಟ ಹೊರಟರೆ ಬಿದಿರ ತಟ್ಟೆ ಹಂಗು ಕಳಚಿ ಉಳಿಯಲಾಯಿತೆ? ಸಮಿಧೆಯಾಗಿ ಹೋಮ ಕುಂಡದಲ್ಲಿ ಬಿದ್ದರೂ ಪುಣ್ಯ ಸಿಗುವ ಸ್ವಾರ್ಥವನ್ನು. ತೊರೆಯಲಾಯಿತೆ? ಮರಣ ಶಯ್ಯೆಯಲ್ಲಿ…

ಅನುದಿನ ಕವನ-೧೦೫೪, ಕವಿಯಿತ್ರಿ: ಗಡಿನಾಡ ಕನ್ನಡತಿ ಡಾ.ವಾಣಿಶ್ರೀ ಕಾಸರಗೋಡು, ಕವನದ ಶೀರ್ಷಿಕೆ: ಮರೆವು

ಮರೆವು ಮರೆಯಬಾರದು ಎಂದೂ ನಡೆದು ಬಂದ ದಾರಿಯನು ಮರೆಯುವರು ಏರಿದ ಮೇಲೆ ಮಾಡಿದ ಸಹಾಯವನು ಮರೆಯದೆ   ನೆನಪಲಿರಿಸಿ  ಜೀವನದ  ಪ್ರತೀ  ಕ್ಷಣವನು ಮರೆತರೆ ಮರೆಯಾಗಿಸುವಿರಿ ಕಳೆದ ಸುಂದರ ದಿನವನು ಬಾಲ್ಯದಲಿ ಕಲಿವ  ಪಾಠವ  ಮರೆತರೆ  ಬದುಕಲಾದೀತೇ ಯೌವನದಿ ಮರೆತು ಹೆಜ್ಜೆಯ ತಪ್ಪಿಟ್ಟರೆ…

ಅನುದಿನ ಕವನ-೧೦೫೩, ಕವಿ:ಟಿ.ಪಿ.ಉಮೇಶ್ ಚಿತ್ರದುರ್ಗ, ಕವನದ ಶೀರ್ಷಿಕೆ: ನೀನಿರುವ ಕವಿತೆ

ನೀನಿರುವ ಕವಿತೆ ನೀನಿರುವ ಕವಿತೆಗೆ ಒಲಿಯಲೆಂದು ಹೋದೆ; ಹೆಣ್ಣೊಲವ ಸಿರಿಯನ್ನು ಗಳಿಸಿ ಬಾ ಎಂದಿತು! ಒಲವಿನ ಹೆಣ್ಮನವ ಬಯಸುತಲಿ ಅಲೆದೆ; ಹೂವಿನೆಲ್ಲ ಚೆಲುವನ್ನು ಹೊದ್ದು ಬಾ ಎಂದಳು! ಚೆಲುವಿನ ಹೂವುಗಳ ಹಂಬಲಿಸಿ ಹೊರಟೆ; ಚಿಟ್ಟೆಯ ಬಣ್ಣಗಳ ತೊಟ್ಟು ಬಾ ಎಂದವು! ರಂಗುರಂಗಿನ…

ಅನುದಿನ ಕವನ-೧೦೫೨ ಕವಿ: ಮಹಿಮ, ಬಳ್ಳಾರಿ

ಇರಬೇಕಿತ್ತು ನನಗೆ ಕರುಳ ಕುಡಿಯೊಂದು ಕಣ್ಣೀರೊರೆಸುವ ಕೈಯೊಂದು ಅಪ್ಪಾ,ನಾನಿದ್ದೇನೆ ಎನ್ನುವ ಕೊರಳೊಂದು ನನ್ನ ಕಂಬನಿಗೆ ಮಿಡಿಯುವ ಮನಸೊಂದು ಇರಬೇಕಿತ್ತು ನನಗೆ ಕರುಳ ಕುಡಿಯೊಂದು ಇವೆ ಸುತ್ತಲೂ ಹತ್ತಾರು ಕೈಗಳು ಇದ್ದರೇನು ಪ್ರಯೋಜನ ಕಾಸಿಗೆ ಹಂಬಲಿಸುವ ಪೀಡಿಸುವ ಹೇಸಿಗೆ ಮನಗಳವು ಅವು ಯಾವುವೂ…

ಅನುದಿನ ಕವನ-೧೦೫೧, ಹಿರಿಯ ಕವಿ:ಎಚ್. ಡುಂಡಿರಾಜ್, ಬೆಂಗಳೂರು, ಕವನದ ಶೀರ್ಷಿಕೆ: ವಿಶ್ವ ಕಪ್ 23

ವಿಶ್ವಕಪ್ ಕ್ರಿಕೆಟ್ ಪೈನಲ್ ಪಂದ್ಯದ ಸಂದರ್ಭದಲ್ಲಿ ನಮ್ಮ ಇಂಡಿಯಾ ತಂಡಕ್ಕೆ ಸ್ಫೂರ್ತಿ ತುಂಬಲು ಹಿರಿಯ ಕವಿ  ಎಚ್. ಡುಂಡಿರಾಜ್ ಅವರು ಈ ಕವಿತೆ ರಚಿಸಿ ಶುಭ ಕೋರಿದ್ದಾರೆ. 🍀👇🌹🍀💐 🏏ವಿಶ್ವಕಪ್ 23🏏 ಶುಭಾರಂಭಕ್ಕೆ ಶುಭಮನ್ ನಂಬಿಕೆಯ ಬ್ಯಾಟರು ಯಾರಿಗಿದೆ ಕೊಹ್ಲಿಯನ್ನು‌ ಕೆಣಕುವ…

ಅನುದಿನ ಕವನ-೧೦೫೦, ಕವಿಯಿತ್ರಿ: ರಂಹೊ, ತುಮಕೂರು

ಈ ಜೀವಂತ ಕವಿತೆಗಳು ಎಷ್ಟೊಂದು ಬದುಕಿಸುವಾಗ ಉಪದೇಶಗಳು ನೆಲ ಕಚ್ಚುತ್ತವೆ! ಈ ಹಾಡುಗಳು ಮೌನವನ್ನು ನುಡಿಯುವಾಗ ಎದೆಯ ಗಾಯಗಳು ಹೂವಾಗುತ್ತವೆ! ಈ ಮಾತುಗಳು ಬದುಕಿಗೆ ಬಣ್ಣವಾಗುವಾಗ ಮುಖವಾಡಗಳು ಸಾಯುತ್ತವೆ! ಈ ಲೋಕದಲ್ಲಿ ನಾಕವಿದೆ ಜಗದ ಪಾಪಗಳಿಗೆ ಸಮಾಧಾನವಿದೆ! -ರಂಹೊ(ರಂಗಮ್ಮ ಹೊದೇಕಲ್), ತುಮಕೂರು