ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ರಾಜೇಶ್ವರಿ ಅಧಿಕಾರ ಸ್ವೀಕಾರ

ಬಳ್ಳಾರಿ, ಮಾ.23: ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾಗಿರುವ ಎಂ. ರಾಜೇಶ್ವರಿ ಅವರು ಇಂದು ಅಧಿಕಾರ ಸ್ವೀಕರಿಸಿದರು. ನಗರದ ಪಾಲಿಕೆಯ ಕಚೇರಿಯ ಮೇಯರ್ ಕೊಠಡಿಯಲ್ಲಿ ಅಧಿಕಾರ ಸ್ವೀಕರಿಸಿದ ರಾಜೇಶ್ವರಿ ಅವರನ್ನು ಕಾಂಗ್ರೆಸ್ ಯುವ ಮುಖಂಡ‌, ಜಿಪಂ ಸದಸ್ಯ ನಾರಾ ಭರತ್…

ಬಳ್ಳಾರಿ ಪಾಲಿಕೆ ಮೇಲೆ ಎರಡನೇ ಬಾರಿ ಹಾರಾಡಿದ ಕಾಂಗ್ರೆಸ್ ಬಾವುಟ: ಎಂ. ರಾಜೇಶ್ವರಿ ಮೇಯರ್, ಮಾಲಾನ್ ಬೀ ಉಪ ಮೇಯರ್

ಬಳ್ಳಾರಿ, ಮಾ.19: ರಾಜ್ಯಾದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಚುನಾಯಿತರಾಗುವ ಮೂಲಕ ಸತತ ಎರಡನೇ ಬಾರಿಗೆ ಪಾಲಿಕೆ ಮೇಲೆ ಕಾಂಗ್ರೆಸ್ ಬಾವುಟ ಹಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಗರದ 34 ನೇ…

ಮೋಕಾದಲ್ಲಿ ಎಲ್.ಕೆ.ಜಿ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

ಬಳ್ಳಾರಿ, ಮಾ.16: ತಾಲೂಕಿನ ಮೋಕಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ ಕೆ ಜಿ ಮತ್ತು ಯುಕೆಜಿ ಮಕ್ಕಳಿಗೆ ಬುಧವಾರ ಆಹಾರಧಾನ್ಯ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಬಿಸಿಯೂಟ ಅಧಿಕಾರಿ ಎಚ್. ಗುರಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಂ. ಸಿದ್ದಲಿಂಗಮೂರ್ತಿ ಇಸಿಓ ಹಿರೇಮಠ, ಕೆಪಿಎಸ್…

ವಿದ್ಯಾರ್ಥಿ, ಯುವಜನರಿಗೆ ರಂಗ ಶಿಕ್ಷಣ ಅತ್ಯಗತ್ಯ – ಪ್ರಾಚಾರ್ಯ ಡಾ.‌ಬಿ.ಜಿ.ಕನಕೇಶ ಮೂರ್ತಿ

ಹೊಸಪೇಟೆ, ಮಾ.11: ವಿದ್ಯಾರ್ಥಿ, ಯುವಜನರಿಗೆ ರಂಗ ಶಿಕ್ಷಣ ಅಗತ್ಯವಿದೆ ಎಂದು ನಗರದ ಶ್ರೀ ಶಂಕರ ಆನಂದಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಜಿ.ಕನಕೇಶ್ ಮೂರ್ತಿ ಅವರು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಂಗಾಯಣ ಕಲ್ಬುರ್ಗಿ ಇವರ ಸಹಯೋಗದಲ್ಲಿ…

ಏಕಲವ್ಯ ನಾಟಕ ಪ್ರದರ್ಶನ: ರಂಗ ದಿಗ್ಗಜರ ಮನ ಗೆದ್ದ ಹೊಸಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು

ಹೊಸಪೇಟೆ, ಮಾ. 11: ಪಾದಾರ್ಪಣೆ ಮಾಡಿದ ಮೊದಲ‌ ಏಕದಿನ ಕ್ರಿಕೆಟ್ ಪಂದ್ಯದ ಮೊದಲ ಎಸೆತಕ್ಕೆ ಸಿಕ್ಸರ್ ಎತ್ತಿದಂತೆ, ಶತಕ ಬಾರಿಸಿದಂತೆ ನಗರದ ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತಾವಾಡಿದ ಮೊದಲ ನಾಟಕದಲ್ಲೇ ರಂಗ ದಿಗ್ಗಜರು,…

ಛಾಯಾಚಿತ್ರ ವಿಶ್ವದ ಭಾಷೆ -ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್

ಬಳ್ಳಾರಿ, ಮಾ.10: ಛಾಯಾಚಿತ್ರ ವಿಶ್ವದ ಭಾಷೆ ಎಂದು ಪತ್ರಿಕಾ ಛಾಯಾಗ್ರಾಹಕ, ಹಿರಿಯ ರಂಗ ಕಲಾವಿದ  ಪುರುಷೋತ್ತಮ ಹಂದ್ಯಾಳ್ ಅಭಿಪ್ರಾಯ ಪಟ್ಟರು. ಹೊಸಪೇಟೆಯ ಶ್ರೀಶಂಕರ ಆನಂದಸಿಂಗ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಗುರುವಾರ ಛಾಯಾಗ್ರಾಹಣ ಮಹತ್ವದ ಕುರಿತು ಆಯೋಜಿಸಿದ್ದ ವಿಶೇಷ…

ಕಲಬುರಗಿ ರಂಗಾಯಣ ಆಯೋಜನೆ: ಮಾ.10 ರಿಂದ ಬಳ್ಳಾರಿ ಜಿಲ್ಲಾಮಟ್ಟದ ರಂಗೋತ್ಸವ

ಬಳ್ಳಾರಿ,ಮಾ.8: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲಬುರಗಿ ರಂಗಾಯಣದ ಸಹಯೋಗದಲ್ಲಿ ಬಳ್ಳಾರಿ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ ಮಾ.10ರಿಂದ ಮೂರು ದಿನಗಳ ಕಾಲ ನಗರದಲ್ಲಿ ನಡೆಯಲಿದೆ. ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದಲ್ಲಿರುವ ಡಾ.ಮನ್ಸೂರ್ ಸುಭದ್ರಮ್ಮ ಬಯಲು ರಂಗ ಮಂದಿರದಲ್ಲಿ ಮೂರು…

ಹೆಣ್ಣು ಸಮಾಜದ ಕಣ್ಣು -ನ್ಯಾಯಾಧೀಶೆ ಎನ್.ವಿ.ಭವಾನಿ ಶ್ಲಾಘನೆ

ಬಳ್ಳಾರಿ, ಮಾ.8: ಹೆಣ್ಣು ಸಮಾಜದ ಕಣ್ಣು ಎಂದು ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರಾದ ಎನ್.ವಿ.ಭವಾನಿ ಹೇಳಿದರು. ನಗರದ ಹಾನಗಲ್ ಶ್ರೀ ಕುಮಾರೇಶ್ವರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಶ್ರೀ ಮಹಾದೇವ ತಾತ ಕಲಾ ಸಂಘ ಹಂದ್ಯಾಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಆಯೋಜಿಸಿದ್ದ…

ಹೊಸಪೇಟೆ ಎಸ್.ಎಸ್.ಎ.ಎಸ್ ಕಾಲೇಜ್ ನಲ್ಲಿ ವಿದ್ಯಾರ್ಥಿಗಳ ರಂಗ ಸಂಭ್ರಮ

ಹೊಸಪೇಟೆ, ಮಾ.೮: ನಗರದ ಎಸ್.ಎಸ್.ಎ.ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜ್ ನ ವಿದ್ಯಾರ್ಥಿಗಳು ಆಟ ಪಾಠದ ಜತೆ ರಂಗ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ಹೌದು! ಕಳೆದ ಹದಿನೈದು ದಿನಗಳಿಂದ ಕಾಲೇಜಿನ ಎರಡನೆಯ ಮಹಡಿಯ ವಿಶಾಲವಾದ ಕೊಠಡಿಯೊಂದು ರಂಗ ತಾಲೀಮಿನ ವೇದಿಕೆಯಾಗಿ ಬದಲಾಗಿದೆ. ಕಾಲೇಜಿನ…

ತತ್ವಪದ, ಜಾನಪದ ಕಲೆ ಮರೆಯಾಗುತ್ತಿವೆ -ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್ ವಿಷಾಧ

ಬಳ್ಳಾರಿ: ತತ್ವಪದ, ಜಾನಪದ ಕಲೆಗಳ ಬಗ್ಗೆ ಇದ್ದ ಒಲವು ಪ್ರಸ್ತುತ ದಿನಮಾನಗಳಲ್ಲಿ ಮರೆಯಾಗುತ್ತಿದೆ ಎಂದು ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳು ವಿಷಾಧ ವ್ಯಕ್ತಪಡಿಸಿದರು. ನಗರದ ಕಸಾಪ ಕನ್ನಡ ಭವನದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಂತ ಶಿಶುನಾಳ ಶರೀಫರ ತತ್ವಪದ, ಜನಪದ, ಸಂಸ್ಕೃತಿ…