ಕಲಬುರಗಿ ಪತ್ರಕರ್ತ ಕಲ್ಲೂರಿನ ಕ್ಯಾದಿಗೇರಿ ನಾಗಿರೆಡ್ಡಿಯ ( ಕೆ.ಎನ್. ರೆಡ್ಡಿ) ಅಕಾಲಿಕ ಸಾವಿಗೆ ಸಾಹಿತಿ ಸಿದ್ದು ಯಾಪಲಪರವಿ ಕಂಬನಿ

ಧಾರವಾಡ ಕರ್ನಾಟಕ ಕಾಲೇಜಿನ ಗೆಳೆಯ, ಹಿರಿಯ ಇಂಗ್ಲಿಷ್ ಪತ್ರಕರ್ತ ಕೆ.ಎನ್. ರೆಡ್ಡಿ ಬದುಕು ದಾರುಣ ಅಂತ್ಯ ಕಂಡಿದೆ. ಸದಾಕಾಲ ಅಂತರ್ಮುಖಿಯಾಗಿರುತ್ತಿದ್ದ ರೆಡ್ಡಿಯ ಮಾತು ಕಡಿಮೆ, ಕೆಲಸ ಹೆಚ್ಚು. ಅಗತ್ಯಕ್ಕಿಂತ ಹೆಚ್ಚು ಸೂಕ್ಷ್ಮ. ವಿಧಾನಸೌಧ ಸುತ್ತು ಹಾಕುವಾಗ ಅನೇಕ ಘಟಾನುಘಟಿಗಳ ಸಂಪರ್ಕವನ್ನು ತಲೆಗೆ…

ಸರ್ಕಾರಿ ಕಿರಿಯ ತಾಂತ್ರಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ: ಬಳ್ಳಾರಿಯಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆಗೆ 5 ಎಕರೆ ಜಾಗ ಮೀಸಲು -ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ 

ಬಳ್ಳಾರಿ,ಸೆ.2: ಜಿಲ್ಲೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಉತ್ತೇಜನ ನೀಡಲು ನಗರದಲ್ಲಿ ಸರ್ಕಾರಿ ತಾಂತ್ರಿಕ ಕಾಲೇಜು ಸ್ಥಾಪನೆಗೆ 5 ಎಕರೆ ಜಾಗ ಮೀಸಲಿರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಯುವಜನ ಸಬಲೀಕರಣ, ಕ್ರೀಡೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ…

ಬಳ್ಳಾರಿ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ.೧೦೦ರಷ್ಟು ಫಲಿತಾಂಶ

ಬಳ್ಳಾರಿ, ಆ.27: ನಗರದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ೨೦೨೨-೨೩ನೇ ಶೈಕ್ಷಣಿಕ ಸಾಲಿನ ಬಿ.ಇಡಿ ಪ್ರಥಮ ಹಾಗೂ ಮೂರನೇ ಸೆಮಿಸ್ಟರ್ ಫಲಿತಾಂಶ ಪ್ರಕಟಿಸಿದ್ದು, ಸ್ಥಳೀಯ ಬಳ್ಳಾರಿ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯವು ಶೇ ೧೦೦ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಅತ್ಯುತ್ತಮ ಶಿಕ್ಷಣ ಮಹಾವಿದ್ಯಾಲಯವಾಗಿದೆ.…

ಸಿಂಧನೂರು-ಬೆಂಗಳೂರು ಮಧ್ಯೆ ‘ಕಲ್ಯಾಣ ರಥ’ ಐಷರಾಮಿ ಸ್ಲೀಪರ್ ಬಸ್ ಸೇವೆ ಆ.28 ರಿಂದ ಆರಂಭ -ಎಂ.ರಾಚಪ್ಪ

ಕಲಬುರಗಿ,ಆ.26:  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯ ರಾಯಚೂರು ಜಿಲ್ಲೆಯ ಸಿಂಧನೂರು-ಬೆಂಗಳೂರು ನಡುವೆ “ಕಲ್ಯಾಣ ರಥ” ಐಷರಾಮಿ ವೋಲ್ವೋ ಮಲ್ಟಿ ಎಕ್ಸಲ್ ಸ್ಲೀಪರ್ ಬಸ್ ಕಾರ್ಯಾಚರಣೆಗೆ  ಆ. 28 ರಂದು ಸಿಂಧನೂರಿನಲ್ಲಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು…

ನಾಳೆಯಿಂದ(ಆ.26) ಬಳ್ಳಾರಿಯಲ್ಲಿ 2ನೇ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿ -ಆಯೋಜಕ ಕಟ್ಟೆ ಸ್ವಾಮಿ

ಬಳ್ಳಾರಿ, ಆ.25: ಟ್ರೇಡಿಷನಲ್ ಶೋಟೋಕನ್ ಕರಾಟೆ ಅಕಾಡೆಮಿ ಕರ್ನಾಟಕ ಮತ್ತು  ಡಬ್ಲುಟಿಎಸ್ ಕೆ ಎಫ್  ಇವರ ಸಂಯುಕ್ತಾಶ್ರಯದಲ್ಲಿ ಎರಡನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಆ.26 ಮತ್ತು 27 ರಂದು  ನಗರದ ವಾಲ್ಮೀಕಿ ಭವನದಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಹಿರಿಯ ತರಬೇತುದಾರರು,…

ಬಳ್ಳಾರಿ ಪಾಲಿಕೆಯಲ್ಲಿ ಶಾಸಕ ಭರತ್ ರೆಡ್ಡಿ ನೂತನ ಕಚೇರಿ ಆರಂಭ

ಬಳ್ಳಾರಿ, ಆ.22: ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರ ಶಾಸಕರ ನೂತನ ಅಧಿಕೃತ ಕಚೇರಿಗೆ ಪೂಜೆ ಮಾಡಿ ಉದ್ಘಾಟಿಸಲಾಯಿತು. ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹೂ ಗುಚ್ಛ…

ವರದಿಗಳು ಓದುಗರಲ್ಲಿ ಗೊಂದಲ ಉಂಟು ಮಾಡದೇ ಸರಳವಾಗಿರ ಬೇಕು -ಕೊಪ್ಪಳ ವಿವಿ ಕುಲಪತಿ ಪ್ರೊ.‌ಬಿ.ಕೆ.ರವಿ

ಬಳ್ಳಾರಿ,ಆ.೧೯: ಪತ್ರಿಕಾ ವರದಿಗಳು ಓದುಗರಲ್ಲಿ ಗೊಂದಲ ಉಂಟುಮಾಡ ಬಾರದು ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಅವರು ತಿಳಿಸಿದರು. ನಗರದ ಎಸ್.ಎಸ್.ಎ ಸರಕಾರಿ ಪ್ರಥಮ‌ದರ್ಜೆ ‌ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಬರವಣಿಗೆ ಮತ್ತು ಛಾಯಾಗ್ರಹಣ…

ಸರಕಾರಿ ಶಾಲೆಗೆ ಭೂದಾನ: ಮಾದರಿಯಾದ ಯಾಳ್ಪಿ ಮೇಟಿ ಪಂಪನಗೌಡ ಕುಟುಂಬ

ಬಳ್ಳಾರಿ :ಸರಕಾರಿ ಶಾಲೆಗೆ ಲಕ್ಷಾಂತರ ರೂ. ಮೌಲ್ಯದ ಎರಡು ಎಕರೆ ಜಮೀನನ್ನು ನೀಡಿ ಮಾದರಿಯಾಗಿದ್ದಾರೆ ತಾಲೂಕಿನ ಯಾಳ್ಪಿ ಗ್ರಾಮದ ಪಂಪನ ಗೌಡ ಕುಟುಂಬ! ಹೌದು….! ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಚಿಕ್ಕ ಕಟ್ಟಡದಲ್ಲಿ ಸರ್ಕಾರಿ ಶಾಲೆ ನಡೆಯುತ್ತಿದ್ದು ಇದರಲ್ಲಿ ನೂರಾರು ವಿದ್ಯಾರ್ಥಿಗಳು ಅಭ್ಯಾಸ…

ಸರ್ವಾಂಗೀಣ ಅಭಿವೃದ್ಧಿಯೇ ರಾಜ್ಯ ಸರ್ಕಾರದ ಮುಖ್ಯ ಗುರಿ: ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ

ಬಳ್ಳಾರಿ,ಆ.15: ನಗರದಲ್ಲಿ 77 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾಡಳಿತ ನಗರದ ವಿಮ್ಸ್ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯುವಜನ ಸಬಲೀಕರಣ, ಕ್ರೀಡಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ರಾಷ್ಟ್ರ…

ವಿದ್ಯಾರ್ಥಿ ಮೆಚ್ಚಿನ ಉಪನ್ಯಾಸಕ ಡಾ.‌ಹನುಮನಗೌಡ ವಿಧಿವಶ

ಹೊಸಪೇಟೆ, ಆ.13:ನಗರದ ಎಸ್ ಎಸ್ ಎ ಎಸ್ ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಮಾಜ ಶಾಸ್ತ್ರ ಉಪನ್ಯಾಸಕ ಡಾ. ಹನುಮನಗೌಡ(೪೨) ಅವರು ಭಾನುವಾರ ನಸುಕಿನ‌ಜಾವ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಮಿತ್ರರು, ವಿದ್ಯಾರ್ಥಿಗಳನ್ನು ಅಗಲಿದ್ದಾರೆ. ಸ್ವಂತ ಗ್ರಾಮ…