ಹೊಸ ವರುಷ ಬದಲಾಗಬೇಕು ನಾವು-ನೀವು… ನಾಳೆ ಮುಂಜಾನೆಗೆ ಹುಟ್ಟುವ ಸೂರ್ಯ ಅದೇ ಬೆಳಕ ನೀಡುತ್ತಾನೆ ಹೊಸತನೇನು ಕೊಡುವುದಿಲ್ಲ ಅದೇ ಬೆಳಕು ಕತ್ತಲ ನಿತ್ಯವೂ ದೂಡುತ್ತದೆ ಹಾಗೆ ನಾಳೆಗೂ ಕೂಡ ಅದೇ ಬೆಳಕು ಕತ್ತಲ ಕುಡಿದು ಬೆಳಕ ಆವರಿಸುತ್ತದೆ… ಕ್ಯಾಲೆಂಡರ್ ತಿರುವಿದ ಮಾತ್ರಕ್ಕೆ…
Category: ರಾಜ್ಯ
ಅನುದಿನ ಕವನ-೧೮೨೫, ಯುವ ಕವಿ: ವಿಶಾಲ್‌ಮ್ಯಾಸರ, ಹೊಸಪೇಟೆ, ಕವನದ ಶೀರ್ಷಿಕೆ: ಬಿಸಿಲವ್ವನ ಹಾಡು
ಇಂದು ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿರುವ ಯುವ ಕವಿ ಹೊಸಪೇಟೆಯ ವಿಶಾಲ ಮ್ಯಾಸರ್ ಅವರ ‘ಬಿಸಿಲವ್ವನ ಹಾಡು’ ಕವಿತೆ ಪ್ರಕಟಿಸುವ ಮೂಲಕ karnatakakahale. com ಶುಭಾಶಯಗಳನ್ನು ಕೋರುತ್ತಿದೆ. ***** 🙏ಸಂತಸದ ವಿಷಯವೆಂದರೆ 01-01-2020 ರಂದು ಆರಂಭಿಸಿದ್ದ ಅನುದಿನ ಕವನ ಕಾಲಂ ಇಂದಿಗೆ(ಡಿ.31) ಐದು…
ಅನುದಿನ ಕವನ-೧೮೨೪, ಕವಯತ್ರಿ: ರೂಪ ಗುರುರಾಜ, ಬೆಂಗಳೂರು, ಕವನದ ಶೀರ್ಷಿಕೆ:ಪ್ರೀತಿಸುವುದಾದರೆ…?
ಪ್ರೀತಿಸುವುದಾದರೆ…? ಪ್ರೀತಿಸುವುದಾದರೆ? ಪ್ರೀತಿಸು ಆ ಚಂದ್ರನಂತೆ ಸುಮ್ಮನೆ ರಾತ್ರಿಯ ಕೊನೆಗಾಣಿಸದೆ ಕತ್ತಲ ಸೌಂದರ್ಯವನು ಇಮ್ಮಡಿಸುವಂತೆ.. ಪ್ರೀತಿಸುವುದಾದರೆ? ಪ್ರೀತಿಸು ಆ ಮಳೆಯಂತೆ! ಬರೀ ತನುವನಷ್ಟೇ ನೆನೆಸುವುದಲ್ಲ ಆತ್ಮಕ್ಕೆ ಅಂಟಿದ ಕಲ್ಮಶ ತೊಳೆಯುವಂತೆ ಪ್ರೀತಿಸುವುದಾದರೆ? ಪ್ರೀತಿಸು ಆ ತಂಗಾಳಿಯಂತೆ ರಭಸದಿ ಬೀಸಿ ದಿಕ್ಕು ಬದಲಿಸದೆ…
ಅನುದಿನ ಕವನ-೧೮೨೩, ಯುವ ಕವಿ: ತರುಣ್ ಎಂ ಆಂತರ್ಯ ✍️, ಟಿ. ನಾಗೇನಹಳ್ಳಿ, ಚಿತ್ರದುರ್ಗ ಜಿ., ಕವನದ ಶೀರ್ಷಿಕೆ: ಜಾತಿ ಮತ್ತು ಪ್ರೀತಿ
ಜಾತಿ ಮತ್ತು ಪ್ರೀತಿ ಹೌದು ನಿನ್ನದು ಮೇಲ್ಜಾತಿ ನನ್ನದು ಕೀಳು ಆದರೆ ಈಗ ಹೇಳು ನನ್ನ ಊರ ಎದೆಯ ಸೀಳಿ ಬಂದ ರಸ್ತೆ ನಿನ್ನ ಊರಿನಿಂದಲೆ ಮುಂದೆ ಸಾಗಿದೆ ಹೇಳು ಯಾವ ಜಾತಿಯ ಹೆಸರಿಡುವೆ ಅಂತ್ಯವಿಲ್ಲದ ಹಾದಿಗೆ ನನ್ನ ಹಟ್ಟಿ ಅಂಗಳದಲ್ಲಿ…
ಅನುದಿನ ಕವನ-೧೮೨೨, ಹಿರಿಯ ಕವಿ: ಸಿದ್ಧರಾಮ ಕೂಡ್ಲಿಗಿ, ಕಾವ್ಯ ಪ್ರಕಾರ: ಗಜಲ್
ಗಜಲ್ ಕೈಯ ಲೇಖನಿಯೇ ಧಿಕ್ಕರಿಸತೊಡಗಿದಾಗ ಏನೆಂದು ಬರೆಯಲಿ ಕಾಗದವೇ ಕೆಕ್ಕರಿಸಿ ನೋಡತೊಡಗಿದಾಗ ಏನೆಂದು ಬರೆಯಲಿ ಮಾಮರದ ಇನಿದನಿಯ ಹಕ್ಕಿಯ ಕೊರಳನೇ ಹಿಸುಕುತಿಹರು ಸವಿಯಾದ ಕೆಂದಳಿರೇ ದಹಿಸತೊಡಗಿದಾಗ ಏನೆಂದು ಬರೆಯಲಿ ಮುದ ನೀಡುವ ತಂಗಾಳಿಯ ಬಂಧಿಸಿ ಉಸಿರುಕಟ್ಟಿಸುತಿಹರು ಕಾವ ಕೈಯೇ ಕತ್ತು ಹಿಸುಕತೊಡಗಿದಾಗ…
ಅನುದಿನ ಕವನ-೧೮೨೧, ಕವಿ: ಸದಾಶಿವ ಸೊರಟೂರು, ಹೊನ್ನಾಳಿ, ಕವನದ ಶೀರ್ಷಿಕೆ: ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ
ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ ಮಗಳು, ಮನುಷ್ಯತ್ವ, ಮರ್ಯಾದೆ, ಮನೆತನ ಈಗೊಂದು…
ಅನುದಿನ ಕವನ-೧೮೨೦, ಕವಿ: ಡಾ.ವಡ್ಡಗೆರೆ ನಾಗರಾಜಯ್ಯ, ಬೆಂಗಳೂರು, ಕವನದ ಶೀರ್ಷಿಕೆ: ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ !
ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ ! ಓ.., ಏಸುಕ್ರಿಸ್ತನೇ ಜಗದಲ್ಲಿ ನೀನೊಬ್ಬ ಹಿರೇಕುರುಬ ! ಅತ್ತಲ ಪಡುವಣದ ಸುಳಿಗಾಳಿ ಇತ್ತಲ ಕತ್ತಲರಾಜ್ಯದಲ್ಲಿ ತೀಡಿದ ದಶಂಬರದ ಚಳಿಗಾಲದಲ್ಲಿ ಚಂದ್ರಮಂಡಲದ ಬೆಳಕಿನಲ್ಲಿ ಕುರುಬ ಬೊಪ್ಪೇಗೌಡನು ಮಂಟೇಸ್ವಾಮಿ ನಿರ್ವಾಣ ಹೊಂದುವಾಗ ಕುರಿರೊಪ್ಪದ ಜೀವತಾಣದ ಉಸಿರು…
ಅನುದಿನ ಕವನ-೧೮೧೯, ಕವಯತ್ರಿ: ಎನ್.ಸಂಧ್ಯಾರಾಣಿ, ಬೆಂಗಳೂರು, ಕವನದ ಶೀರ್ಷಿಕೆ: ಪಾಂಚಾಲಿ
ಪಾಂಚಾಲಿ ಅಗ್ನಿಯಿಂದ ಹುಟ್ಟಿದವಳು ಬಾಳೆಲ್ಲಾ ಧಗಧಗ, ಧಗಧಗ ಉರಿದವಳು ದ್ರುಪದ ರಾಜನನಿಗೆ ಮಗಳು, ಜಗದೋದ್ಧಾರನಿಗೆ ತಂಗಿ ಉಪಪಾಂಡವರಿಗೆ ತಾಯಿ, ಕುಂತಿಗೆ ಸೊಸೆ ಅಭಿಮನ್ಯುವಿಗೆ ದೊಡ್ಡಮ್ಮ ಗಂಡಂದಿರ ವಿಷಯ ಬೇಡಬಿಡಿ ಎಲ್ಲರಿಗೂ ಸೇರಿದವರು ಯಾಕೋ ಯಾರಿಗೂ ಸೇರಿದವರಾಗುವುದಿಲ್ಲ… ಪ್ರೀತಿಯಿಂದ, ಪ್ರೀತಿಗಾಗಿ ಹುಟ್ಟಿದವಳಲ್ಲ ದ್ರುಪದನ…
ಕಿಷ್ಕಿಂದ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ: ಸುಭಿಕ್ಷ ರಾಷ್ಟ್ರ ನಿರ್ಮಾಣಕ್ಕೆ ಯುವಜನತೆ ಕೊಡುಗೆ ನೀಡಬೇಕು -ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್
ಬಳ್ಳಾರಿ,ಡಿ.24: ಶಿಕ್ಷಣ ಎನ್ನುವುದು ಒಂದು ನಿರಂತರ ಯಾತ್ರೆ ಮತ್ತು ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಜ್ಞಾನ ಬೆಳಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವುದರ ಜೊತೆಗೆ, ಸುಭಿಕ್ಷ ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ಅವರು ಹೇಳಿದರು. ಬಳ್ಳಾರಿ-ಸಿರುಗುಪ್ಪ…
ಅನುದಿನ ಕವನ-೧೮೧೮, ಕವಯತ್ರಿ:ಗಾಯತ್ರಿ ಬಿ, ತೋರಣಗಲ್ಲು, ಕವನದ ಶೀರ್ಷಿಕೆ: ನಗುಮುಖದ ನೋವಿನ ಗೆರೆ
ನಗುಮುಖದ ನೋವಿನ ಗೆರೆ ನಗು ಮುಖದ ನೋವಿನ ಗೆರೆಗಳಳಿಸುವ ಮಾಂಸದ ತಡಿಕೆಯಾದೆ ದುಃಖವೆಂಬ ವಿಷಕೆ ಸಿಹಿ ಗಾಳಿಯಾಗಿ ಮನದಾಳದ ಮಾತಿಗೆ ಸೇತುವೆಯಾದೆ. ಕಾಡ್ಗಿಚ್ಚಿನ ಹೊಟ್ಟೆಕಿಚ್ಚಿಗೆ ಮುಂಗಾರು ಮಳೆಯಾಗಿ ಇಬ್ಬನಿಯಂತೆ ಕರಗಿಸಿದೆ ಮನಸಿನ ಭಾರವ ಬಾಡಿದ ಮೊಗದ ಕಳೆಗೆ ನೀನಾದೆ ವನೌಷಧಿಯಂತೆ. ಮೌನದ…
