ಬಳ್ಳಾರಿ, ಜೂ.27: ಚುನಾವಣಾ ಆಯೋಗದಿಂದ ನಡೆಯುತ್ತಿರುವ ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಕುರಿತು ಕಾಂಗ್ರೆಸ್ ಪಕ್ಷದ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಏಜೆಂಟ್ ( ಬಿಎಲ್ಎ )ಗಳಿಗೆ, ಕಾಂಗ್ರೆಸ್ ಪಕ್ಷದ ಎಲ್ಲ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗಾಗಿ ಶನಿವಾರ ಸಂಜೆ ನಗರದ ಖಾಸಗಿ ಹೊಟೇಲಿನಲ್ಲಿ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಕೆಪಿಸಿಸಿ ಉಸ್ತುವಾರಿ ವಾಸುದೇವಮೂರ್ತಿ ಅವರು ಹಾಗೂ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಕಾರ್ಯದರ್ಶಿ ಜ್ಯೋತೀಶ್ ಹೆಚ್.ಎಂ. ಅವರು ತರಬೇತಿ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ರಾಮಾಂಜನೇಯ, ನೂರ್ ಮೊಹಮ್ಮದ್, ಜಬ್ಬಾರ್, ಶಿವರಾಜ್, ಮಾಜಿ ಮೇಯರ್ ಎಂ.ರಾಜೇಶ್ವರಿ, ಕಾಂಗ್ರೆಸ್ ಮುಖಂಡರಾದ ದಾದಾಭಾಯ್, ಹುಸೇನ್ ಪೀರಾ, ಕಣೇಕಲ್ ಮೆಹಬೂಬಸಾಬ, ಕಲ್ಲುಕಂಭ ಪಂಪಾಪತಿ, ಅರುಣಕುಮಾರ್, ಪರ್ವೀನಬಾನು, ಸೋಮಶೇಖರ್, ಬಿಆರೆಲ್ ಸೀನಾ, ಡಿ.ಸೂರಿ, ಹಾವಂಭಾವಿ ಲೋಕೇಶ್, ಸೋಮಶೇಖರ್, ಚಂಪಾ ಚವ್ಹಾಣ್, ಪದ್ಮಾ, ಪರಶುರಾಮುಡು, ಹೊನ್ನಪ್ಪ, ಹಗರಿ ಗೋವಿಂದ, ಹೊನ್ನಪ್ಪ, ಚಾನಾಳ್ ಶೇಖರ್, ಗುರುಸಿದ್ಧಣ್ಣ, ದುರ್ಗಾ ಮೋಹನ್, ರಾಮು, ಥಿಯೇಟರ್ ಶಿವು, ಆಯೇಶಾ, ಶಮೀಮ್ ಜೊಹರಾ, ಇಮಾಮ್ ಗೋಡೆಕಾರ, ಗೌತಮ್, ಸತೀಶ್, ಅತೀಶ್, ಸಾಗರ್, ಬಾಲರಾಜು, ಅಭಿಷೇಕ್, ತೌಸಿಫ್, ತಬರೇಜ್ ಮತ್ತಿತರ ಮುಖಂಡರು ಹಾಗೂ ಎಲ್ಲಾ ಬೂತ್ ಮಟ್ಟದ ಏಜೆಂಟರು, ಕಾರ್ಯಕರ್ತರು ಹಾಜರಿದ್ದರು.
