ಕಪ್ಪು ಹುಡಿಗಿಗೆ….
ಕಪ್ಪು ಹಲಗೆ ವರ್ಣ-
ಮಾಲೆ ಕಲಿಸಿತು.
ವರ್ಣ-ಆಶ್ರಮ ಜಾತಿಯ ವಿಷಬೀಜ
ಬಿತ್ತಿ; ಕಪ್ಪುಜನರ
ದೂರವಿಟ್ಟಿತು.
ಕಪ್ಪುಹಲಗೆಯ ಮೇಲೆ
ಬಿಳಿ ಅಕ್ಷರ ಮೂಡಿತು,
ಎದೆಯೊಳಗೆ
ಬೀಜಬಿದ್ದು ಮೊಳೆಯಿತು
ಅ-ಕ್ಷರದ ಬೇಲಿ-
ಮೇಲೆ ನೂರು ಹೂ…
ಹೂವ ಕಂಪಿಗೆ
ಯಾವ ಜಾತಿ, ಗಂಧ ಸುಗಂಧ
ಬೆರೆತ ರೀತಿ
ಇರುಳಿನಲ್ಲೆ ಚುಕ್ಕಿ
ಚಂದ್ರ, ಹಾಲು ಬೆಳಕ ಕಾಲು ಹಾದಿ…

-ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು
