ಬಳ್ಳಾರಿ ರೈಲುನಿಲ್ದಾಣದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಅವರನ್ನು ಸ್ವಾಗತಿಸಿದ ಸಿಎಂಎಸ್ ಮುಖಂಡರು

ಬಳ್ಳಾರಿ, ನ.3: ನಗರದ ರೈಲುನಿಲ್ದಾಣದಲ್ಲಿ ಸಮಾಜ ಕಲ್ಯಾಣ ಸಚಿವ ಹೆಚ್.ಸಿ ಮಹಾದೇವಪ್ಪ ಅವರನ್ನು ಭಾನುವಾರ ಸಿಎಂಎಸ್ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡರು.
ವಿಜಯನಗರ ಜಿಲ್ಲಾ ಛಲವಾದಿ‌ ಮಹಾಸಭಾ ಆಯೋಜಿಸಿರುವ ಸಮಾಜ ಜಾಗೃತಿ ಹಾಗೂ  ಪರಿಶಿಷ್ಟ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು  ಸಚಿವ ಹೆಚ್.ಸಿ.‌ಮಹಾದೇವಪ್ಪ ಅವರು  ಬೆಂಗಳೂರಿನಿಂದ ಹಂಪಿ ಎಕ್ಸ್‌ಪ್ರೆಸ್‌ ಮೂಲಕ ಹೊಸಪೇಟೆಗೆ ತೆರಳುತ್ತಿದ್ದರು.


ಸಿಎಂಎಸ್ ಜಿಲ್ಲಾಧ್ಯಕ್ಷ ಸಿ.ಶಿವಕುಮಾರ್, ಮಾಜಿ ಅಧ್ಯಕ್ಷ ಸಿ.‌ನರಸಪ್ಪ, ಜಿಲ್ಲಾ ಉಪಾಧ್ಯಕ್ಷ ಜೆ.ಎಸ್.ಶ್ರೀನಿವಾಸುಲು, ಜಿಪಂ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಎ.ಮಾನಯ್ಯ,  ‌ಸಿಎಂಎಸ್ ಪದಾಧಿಕಾರಿಗಳಾದ ಛಲವಾದಿ ಮಾನಯ್ಯ , ಆಟೋ ಯಲ್ಲಪ್ಪ ಸೇರಿದಂತೆ  ಹಲವರು ಮಹಾದೇವಪ್ಪ ಅವರನ್ನು ಸ್ವಾಗತಿಸಿದರು.
——-

Leave a Reply

Your email address will not be published. Required fields are marked *