ಹೊಸಪೇಟೆಯಲ್ಲಿ ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ ಮಹಾದೇವಪ್ಪ ಅವರಿಗೆ ಭವ್ಯ ಸ್ವಾಗತ

ಹೊಸಪೇಟೆ (ವಿಜಯನಗರ), ಡಿ.3: ವಿಜಯನಗರ ಜಿಲ್ಲಾ ಛಲವಾದಿ‌ ಮಹಾಸಭಾ ಆಯೋಜಿಸಿರುವ ಸಮಾಜ ಜಾಗೃತಿ ಹಾಗೂ  ಪರಿಶಿಷ್ಟ ಸಮುದಾಯದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಸಚಿವ ಡಾ. ಹೆಚ್.ಸಿ.‌ಮಹಾದೇವಪ್ಪ ಅವರನ್ನು ಸಿಎಂಎಸ್ ವತಿಯಿಂದ ಭವ್ಯವಾಗಿ ಸ್ವಾಗತಿಸಲಾಯಿತು.
ಸಿಎಂಎಸ್ ಜಿಲ್ಲಾಧ್ಯಕ್ಷ ಸೋಮಶೇಖರ ಬಣ್ಣದಮನೆ ನೇತೃತ್ವದಲ್ಲಿ ನೂರಾರು ಜನ ಇಲ್ಲಿನ ಡಾ. ಅಂಬೇಡ್ಕರ್ (ಜೈಭೀಮ್) ವೃತ್ತದಲ್ಲಿ ಸಚಿವ ಮಹಾದೇವಪ್ಪ ಅವರನ್ನು ಅದ್ದೂರಿಯಾಗಿ ಬರ ಮಾಡಿ ಕೊಂಡರು.
ಸಂವಿಧಾನ ಶಿಲ್ಪಿ, ಭಾರತರತ್ನ ಡಾ.‌ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವರನ್ನು ಕಾರ್ಯಕ್ರಮ ನಡೆಯುವ ಸಭಾಂಗಣಕ್ಕೆ ಜಾನಪದ ತಂಡಗಳ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಛಲವಾದಿ ಸಮಾಜದ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.
——

Leave a Reply

Your email address will not be published. Required fields are marked *